Viral Video : ಈ ಬೆಕ್ಕುಗಳ ನಡುವೆ ಯಾಕೆ ಹೇಗೆ ಜಗಳ ಶುರುವಾಯಿತೋ ಆ ದೇವರೇ ಬಲ್ಲ. ಅಂತೂ ನಡುಬೀದಿಯಲ್ಲಿ ಶರಂಪರ ಜಗಳಕ್ಕಿಳಿದಿವೆ. ಉಪಾಯಕ್ಕೆ ಹೆಸರಾದ ಕಾಗೆ ಏನಾದರೂ ಮಾಡಿ ಜಗಳ ಬಿಡಿಸುವ ಸುಮನಸ್ಕನಾಗಬಾರದೆ? ಅವಕಾಶ ನೋಡಿಕೊಂಡು ಬೆಕ್ಕಿನ ಬೆನ್ನು ಕುಕ್ಕಿ ಜಗಳವನ್ನು ಕಾವೇರಿಸುತ್ತಾ ಹೋಗಿದೆ. ಎಂಥ ಕಾಲ ಬಂತು ಈ ಪ್ರಾಣಿ ಪಕ್ಷಿಗಳಿಗೇ…
ಈತನಕ ಈ ವಿಡಿಯೋ 3,000 ವೋಟ್ಗಳನ್ನು ಪಡೆದುಕೊಂಡಿದೆ. ನೆಟ್ಟಿಗರಂತೂ ಈ ದೃಶ್ಯ ನೋಡಿ ಸರೀ ತಮಾಷೆ ಮಾಡುತ್ತಿದ್ದಾರೆ. ‘ನಮಗೆಲ್ಲರಿಗೂ ಗೆಳೆಯರಿದ್ದಾರೆ. ಆದರೆ ಕೆಲವರು ಮಾತ್ರ ಆಪ್ತರು. ಉಳಿದವರು ಈ ಕಾಗೆ ಮಾಡುವಂತೆ ಬೆಂಕಿ ಕಡ್ಡಿ ಗೀರುವಲ್ಲಿ ಸಿದ್ಧಹಸ್ತರು’ ಎಂದಿದ್ದಾರೆ ಒಬ್ಬರು. ‘ಆ ಕಾಗೆ ರೆಫರಿ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಈ ಕಾಗೆಗಳು ಭಾರೀ ಮಜಾ ಕೊಡುತ್ತವೆ’ ಎಂದಿದ್ದಾರೆ ಮಗದೊಬ್ಬರು.
ಕಾಗೆಕಾಲದಲ್ಲಿ ಮಾರ್ಜಾಲನ್ಯಾಯ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ