AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡವದಿರಿ ಮಾನವರೇ! ಯುದ್ಧಾವೇಶದಲ್ಲಿ ಬ್ರಷ್​ ಉಜ್ಜಿ ಬಟ್ಟೆ ಒಗೆಯುತ್ತಿದ್ದಾರೆ ಪೂರ್ವಜರು

Monkey Washes Clothes : ಆಹಾ ಸೋಪು, ಆಹಾ ನೀರು, ಆಹಾ ಬಟ್ಟೆ! ನೋಡಿ ಮನುಷ್ಯರೇ ಈಗ ರಪರಪನೆ ಬಡಿದು, ಗಸಗಸನೆ ಉಜ್ಜಿ, ಜಾಲಿಸಿಜಾಲಿಸಿ ನಿಮ್ಮನ್ನು ತೊಳೆಯುತ್ತೇನೆ... ಅಂತೀರಾ ಇನ್ನೊಮ್ಮೆ ಮಂಗ ಅಂತ?  

ತಡವದಿರಿ ಮಾನವರೇ! ಯುದ್ಧಾವೇಶದಲ್ಲಿ ಬ್ರಷ್​ ಉಜ್ಜಿ ಬಟ್ಟೆ ಒಗೆಯುತ್ತಿದ್ದಾರೆ ಪೂರ್ವಜರು
Monkey Washes Clothes Using Brush And Soap Netizens in Hysterics
TV9 Web
| Edited By: ಶ್ರೀದೇವಿ ಕಳಸದ|

Updated on: Nov 03, 2022 | 11:50 AM

Share

Viral Video : ಏಯ್​ ಕೋತಿ, ಏಯ್​ ಮಂಗ್ಯಾ, ಏಯ್ ಮುಸುವಾ, ಏಯ್ ಮಂಗ, ಏಯ್​ ಡಿಂಗ್, ಏಯ್​ ಮಂಕೀ, ಏಯ್​ ಬಂದರ್… ನೀವೆಲ್ಲಾ ಸೇರಿ ನಿಮ್ಮನಿಮ್ಮವರನ್ನು ಬಯ್ಯುವುದಕ್ಕೋಸ್ಕರ ನಮ್ಮ ಮರ್ಯಾದೆ ಕಳೆದಿದ್ದು ಸಾಕು. ನಮಗೀಗ ಬಹಳ ಬೇಜಾರಾಗಿದೆ. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಒಂದು ಕೋತಂಬರಿ ಎಳೆಯೂ ಸಿಗುತ್ತಿಲ್ಲ. ಅದಕ್ಕಾಗಿ ಅಂಗಡಿಗೆ ಹೋದರೆ ಕಳ್ಳತನದ ಅಪವಾದ ಹೊರಿಸುತ್ತೀರಿ. ನಿಮ್ಮ ಈ ನಡೆಯನ್ನೆಲ್ಲ ನಾವು ಖಂಡಿಸುತ್ತೇವೆ. ಖಂಡಿಸುವುದಷ್ಟೇ ಅಲ್ಲ ಸೇಡು ತೀರಿಸಿಕೊಳ್ಳದೆ ಬಿಡೆವು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by ????? (@ankit_ang_11)

ಎಲ್ಲಿಯಂತ ಹೋಗುವುದು ಈ ಹಗಲಿನಲ್ಲಿ? ಅದಕ್ಕೆ ಧೋಬಿಗಾಟಿಗೆ ಬಂದು ಕುಳಿತಿದ್ದೇನೆ. ಎದುರಿಗೆ ಬಟ್ಟೆಯನ್ನು ಎತ್ತೆತ್ತಿ ಒಗೆಯುತ್ತಿದ್ದಾನೆ ಧೋಬಿಯಣ್ಣ. ಪಾಪ ಕೈ ಸೋತಿರಬೇಕು. ಸಿಗರೇಟು ಹಿಡಿದುಕೊಂಡು ಅತ್ತ ಹೋದ. ಆಹಾ ಸೋಪು, ಆಹಾ ನೀರು, ಆಹಾ ಬಟ್ಟೆ! ನೋಡಿ ಮನುಷ್ಯರೇ ಈಗ ರಪರಪನೆ ಬಡಿದು, ಗಸಗಸನೆ ಉಜ್ಜಿ, ಜಾಲಿಸಿಜಾಲಿಸಿ ನಿಮ್ಮನ್ನು ತೊಳೆಯುತ್ತಿದ್ದೇನೆ… ಅಂತೀರಾ ಇನ್ನೊಮ್ಮೆ ಮಂಗ ಅಂತ?

ಯಾರೋ ಪುಣ್ಯಾತ್ಮ ‘rjkisnaa’ ವಿಡಿಯೋ ಮಾಡಿ ಇನ್​ಸ್ಟಾಗ್ರಾಂಗೂ ಹಾಕಿಬಿಡಿಬೇಕೆ? ಈ ಮೊಬೈಲುಗಳನ್ನು ಎತ್ತೆತ್ತಿ ಒಗೆಯಬೇಕು. ಆಗಲೇ ಈ ಮನುಷ್ಯರಿಗೆ ಬುದ್ಧಿ ಬರುವುದು. 1 ಮಿಲಿಯನ್​ಗಿಂತಲೂ ಹೆಚ್ಚು ಜನ ನನ್ನನ್ನು ನೋಡಿದ್ಧಾರೆ ಬೇರೆ. ಇನ್ನೇನು 1 ಲಕ್ಷವಾಗುತ್ತದೆ ನನ್ನನ್ನು ಇಷ್ಟಪಟ್ಟವರ ಸಂಖ್ಯೆ. ಎಷ್ಟೋ ಜನ ಕಣ್ಣಲ್ಲಿ  ಬಲೂನು ಇಳಿಬಿಟ್ಟುಕೊಂಡು ನಕ್ಕಿದ್ದಾರೆ. ನಗ್ರಿ ನಗ್ರಿ ನೀವೂ ಹೀಗೇ ಒಂದು ದಿನ ನಿಮ್ಮ ಬಟ್ಟೆಗಳನ್ನು ಒಗೆದುಕೊಳ್ಳುವ ಕಾಲ ಬೇಗನೇ ಬರುತ್ತದೆ ಮೊಬೈಲುಗಳನ್ನು ಎಸೆದು. ಆಗ ನೀವು ಮಂಗನಾಗುತ್ತೀರಿ, ನಾನಂತೂ ಮನುಷ್ಯನಾಗುವುದಿಲ್ಲಪ್ಪಾ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು