ಮಿಸ್ ಅರ್ಜೆಂಟೀನಾ, ಮಿಸ್ ಪ್ಯೂರ್ಟೋರಿಕೋ ಇದೀಗ ವಿವಾಹ ಬಂಧನದಲ್ಲಿ
Marriage : 2020ರಲ್ಲಿ ಮಿಸ್ ಅರ್ಜೆಂಟೀನಾ ಮತ್ತು ಮಿಸ್ ಪ್ಯೂರ್ಟೋರಿಕಾ ಸೌಂದರ್ಯ ಕಿರೀಟ ಧರಿಸಿದ್ದ ಇವರಿಬ್ಬರೂ ಇದೀಗ ಮದುವೆಯಾಗಿದ್ದಾರೆ. ಇಷ್ಟು ದಿನ ಅವರು ತಮ್ಮ ಪ್ರೇಮಸಂಬಂಧವನ್ನು ಗುಟ್ಟಾಗಿ ಕಾಪಾಡಿಕೊಂಡಿದ್ದರು.
Viral Video : 2020ನೇ ಸಾಲಿನ ಮಿಸ್ ಅರ್ಜೆಂಟೀನಾ ಮತ್ತು ಮಿಸ್ ಪ್ಯೂರ್ಟೋರಿಕೋ ವಿವಾಹವಾಗುವ ಮೂಲಕ ಇದೀಗ ಸುದ್ದಿಯಲ್ಲಿದ್ಧಾರೆ. ಮಿಸ್ ಅರ್ಜೆಂಟೀನಾ ಮರಿಯಾನಾ ವರೆಲಾ ಮತ್ತು ಮಿಸ್ ಪ್ಯೂರ್ಟೋರಿಕೋ ಫ್ಯಾಬಿಯೋಲಾ ವ್ಯಾಲೆಂಟಿನ್ ತಮ್ಮ ಪ್ರೇಮಸಂಬಂಧವನ್ನು ಇಷ್ಟು ದಿನ ಗುಟ್ಟಾಗಿಟ್ಟಿದ್ದರು. ಇದೀಗ ಪರಸ್ಪರ ಉಂಗುರ ಬದಲಾಯಿಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮದುವೆಯನ್ನು ಘೋಷಿಸಿಕೊಂಡಿದ್ದಾರೆ. ನೆಟ್ಟಿಗರು ಇವರ ವಿಡಿಯೋಗಳನ್ನು ಕುತೂಹಲದಿಂದ ನೋಡುತ್ತ ಹಾರೈಸುತ್ತಿದ್ದಾರೆ.
ಇದನ್ನೂ ಓದಿView this post on Instagram
ಪ್ಯೂರ್ಟೋರಿಕೋದ ಮ್ಯಾರೇಜ್ ಬ್ಯೂರೋ ಒಂದರಲ್ಲಿ ಇವರಿಬ್ಬರೂ ವಿವಾಹವಾಗಿದ್ದಾರೆ. ಬಿಳೀ ಉಡುಗೆಗಳಲ್ಲಿ ಇವರಿಬ್ಬರೂ ಕಂಗೊಳಿಸಿದ್ದಾರೆ. ಮೂರು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಮದುವೆಯ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಇಬ್ಬರೂ ಒಟ್ಟಾಗಿ ಪ್ರಯಾಣಿಸಿದ, ವಿಹರಿಸಿದ ರೀಲ್ಸ್ಗಳನ್ನೂ ಇಲ್ಲಿ ನೋಡಬಹುದಾಗಿದೆ. ವಿವಿಧ ಕ್ಷೇತ್ರಗಳ ಖ್ಯಾತನಾಮರು ಇವರಿಗೆ ಶುಭ ಹಾರೈಸಿದ್ದಾರೆ.
1.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಅನ್ನು ಇಷ್ಟಪಟ್ಟಿದ್ದಾರೆ. ವಿವಿಧ ಕಡೆಗೆ ಇವರಿಬ್ಬರೂ ಪ್ರಯಾಣಿಸಿದಾಗ ಸೆರೆಹಿಡಿದ ವಿಡಿಯೋ ಕ್ಲಿಪ್ಪಿಂಗ್, ಮದುವೆಯ ದಿನ ಅಲಂಕರಿಸಿದ ಕೋಣೆ, ಔತಣಕೂಟ, ವಿಹಾರ ಹೀಗೆ ಎಲ್ಲವನ್ನೂ ಅಂದವಾಗಿ ದೃಶ್ಯಜೋಡಣೆಯನ್ನು ಈ ರೀಲ್ಸ್ನಲ್ಲಿ ಮಾಡಲಾಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ