56 ವರ್ಷದ ಮಹಿಳೆಯೊಂದಿಗೆ 19 ವರ್ಷದ ತರುಣನ ವಿವಾಹ ನಿಶ್ಚಯ

Thailand : ‘ಆಕೆ ಪರಿಶ್ರಮವುಳ್ಳಾಕೆ, ಪ್ರಾಮಾಣಿಕಳು ಮತ್ತು ಆಕೆಗೆ ಮೂರು ಮಕ್ಕಳು. ಆದರೂ ಅವಳೆಂದರೆ ನನಗಿಷ್ಟ. ಆಕೆಯ ಮನೆಯನ್ನು ಸುವ್ಯವಸ್ಥಿತಗೊಳಿಸಬೇಕು, ಆರಾಮದಿಂದ ಆಕೆ ಬದುಕುವಂತಾಗಬೇಕು. ಅದಕ್ಕಾಗಿ ದಾರಿ ಹುಡುಕುತ್ತಿದ್ದೇನೆ’

56 ವರ್ಷದ ಮಹಿಳೆಯೊಂದಿಗೆ 19 ವರ್ಷದ ತರುಣನ ವಿವಾಹ ನಿಶ್ಚಯ
19 Year Old Thailand Boy Gets Engaged to 56 Year Old Woman Sparks Controversy
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 25, 2022 | 5:35 PM

Viral : ಥೈಲ್ಯಾಂಡ್​ನ ಈ 19ರ ಹದಿಹರೆಯದ ಹುಡುಗ ಮತ್ತು 56 ವರ್ಷದ ಈ ಮಹಿಳೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯ ನಿರ್ಧಾರಕ್ಕೆ ಬರುತ್ತಿದ್ದಂತೆ ಅಂತಾರಾಷ್ಟ್ರೀಯ ಸುದ್ದಿಮಾಧ್ಯಮಗಳೆಲ್ಲ ಇವರನ್ನು ಮಗಿಬಿದ್ದಿವೆ. ‘ಪ್ರೀತಿಗೆ ಯಾವುದೇ ಗಡಿ ಇಲ್ಲ, ಕಾರಣವಿಲ್ಲ ಮತ್ತು ಅಂತರವೂ ಇಲ್ಲ’ ಎನ್ನುವುದಕ್ಕೆ ಉದಾಹರಣೆ ಎಂಬಂತೆ ಇವರಿಬ್ಬರೂ ಈಗ ಸುದ್ದಿಯಲ್ಲಿದ್ದಾರೆ. ಈ ಹದಿಹರೆಯದ ಹುಡುಗ ಮತ್ತು ಈ ವಯಸ್ಸಾದ ಮಹಿಳೆಯ ಮಧ್ಯೆ ಇರುವ ವಯಸ್ಸಿನ ಅಂತರ ಕೇವಲ 37. ಇಡೀ ಜಗತ್ತು ಈ ಜೋಡಿಯನ್ನು ಕುತೂಹಲದಿಂದ ನೋಡುತ್ತಿದೆ.

19 Year Old Thailand Boy Gets Engaged to 56 Year Old Woman Sparks Controversy

19 Year Old Thailand Boy Gets Engaged to 56 Year Old Woman 

19 ವರ್ಷ ವುತಿಚಾಯ್​ ಚಂತರಾಜ್ 10 ವರ್ಷದ ಬಾಲಕನಾಗಿದ್ದಾಗ 56 ವರ್ಷದ ಜನ್ಲಾ ನಮುಂಗ್ರಾಕ್ ಎಂಬ ಈ ಮಹಿಳೆಗೆ ಪರಿಚಯವಾದರು. ಹಾಗೆ ನೋಡಿದರೆ ಇವರಿಬ್ಬರೂ ನೆರೆಹೊರೆಯವರೇ. ಮನೆಗೆಲಸದಲ್ಲಿ ಮತ್ತು ಮನೆ ಸ್ವಚ್ಛ ಮಾಡುವಲ್ಲಿ ಆಕೆಗೆ ಈತ ಸಹಾಯ ಮಾಡುವಾಗ ಪರಸ್ಪರ ಸ್ನೇಹ ಬೆಳೆಯಿತು. ನಂತರ ಅದು ಸಂಬಂಧಕ್ಕೂ ತಿರುಗಿತು. ಈ ಎರಡು ವರ್ಷಗಳಿಂದ ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ‘ಆರಾಮಾಗಿ ನೀವು ಜೀವನ ನಡೆಸುತ್ತಿದ್ದೀರಾ?’ ಎಂದು ಯಾರಾದರೂ ವುತಿಚಾಯ್​ಗೆ ಕೇಳಿದರೆ, ‘ಹೌದು! ನನ್ನ ಜೀವನದಲ್ಲಿ ಮೊದಲ ಸಲ ಆರಾಮಾಗಿ ಬದುಕುತ್ತಿದ್ದೇನೆ. ಎರಡು ವರ್ಷಗಳಿಂದ ಜನ್ಲಾ ಜೊತೆ ವಾಸಿಸುತ್ತಿದ್ದೇನೆ. ಆಕೆಯನ್ನು ತುಂಗ್ ಎಂದು ಪ್ರೀತಿಯಿಂದ ಕರೆಯುತ್ತೇನೆ’ ಎನ್ನುತ್ತಾರೆ ವುತಿಚಾಯ್.

‘ಆಕೆ ಪರಿಶ್ರಮವುಳ್ಳಾಕೆ ಮತ್ತು ಪ್ರಾಮಾಣಿಕಳು ಕೂಡ. ನನಗೆ ಅವಳೆಂದರೆ ಇಷ್ಟ. ಆದರೆ, ಆಕೆಯ ಅಸ್ತವ್ಯಸ್ಥ ಮನೆಯನ್ನು ನೋಡಿ ಬೇಸರವಾಯಿತು. ಆಕೆ ಒಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಬದುಕಬೇಕು. ಅದಕ್ಕೆ ನಾನು ಆಕೆಗೆ ಸಹಾಯ ಮಾಡುವ ದಾರಿಗಳ ಬಗ್ಗೆ ಯೋಚಿಸುತ್ತಿದ್ದೇನೆ’ ಎನ್ನುತ್ತಾರೆ ವುತಿಚಾಯ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇವರಿಬ್ಬರಿಗೂ ತಮ್ಮ ವಯಸ್ಸಿನ ಅಂತರದ ಬಗ್ಗೆ ಬೇಸರವಿಲ್ಲ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮುಜುಗರಪಟ್ಟುಕೊಳ್ಳುವುದಿಲ್ಲ. ಡೇಟಿಂಗ್​ ಹೋಗುವಾಗ ಊರಿನ ಹಾದಿಯಲ್ಲಿ ಪರಸ್ಪರ ಕೈಹಿಡಿದುಕೊಂಡು ಮುತ್ತುಗಳ ವಿನಿಮಯ ಮಾಡಿಕೊಳ್ಳುತ್ತಾ ಸಾಗುತ್ತಾರೆ.

ಜನ್ಲಾ ವಿಚ್ಛೇದಿತೆ. ಈಗಾಗಲೇ ಈಕೆಗೆ ಮೂರು ಮಕ್ಕಳಿದ್ದಾರೆ. ‘ವುತಿಚಾಯ್, ಮತ್ತೆ ನನ್ನನ್ನು ಯೌವನವನ್ನು ಅನುಭವಿಸುವಂತೆ ಮಾಡುತ್ತಿದ್ದಾನೆ. ಈತ ನನಗೆ ಸೂಪರ್ ಹೀರೋ ಇದ್ದಂತೆ. ಪ್ರತೀದಿನ ನನ್ನ ಮನೆಗೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಅವನು ಹರೆಯಕ್ಕೆ ಬರುತ್ತಿದ್ದಂತೆ ನನ್ನ ಬಗ್ಗೆ ಭಾವನೆಗಳನ್ನು ಬೆಳೆಸಿಕೊಳ್ಳಲಾರಂಭಿಸಿದ. ನನಗೆ ಅಚ್ಚರಿಯಾಗತೊಡಗಿತು. ಏಕೆಂದರೆ ನಾನವನನ್ನು ಬಾಲ್ಯದಿಂದಲೂ ಬಲ್ಲವಳಾಗಿದ್ದೆ. ಅಂತೂ ಈಗ ಆದಷ್ಟು ಬೇಗ ಮದುವೆಯಾಗಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಜನ್ಲಾ.

ಥೈಲ್ಯಾಂಡ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಇವರು ಮದುವೆಯನ್ನೂ ಅಲ್ಲಿಯೇ ಮಾಡಿಕೊಳ್ಳುತ್ತಾರಾ? ವಿವರ ಮತ್ತು ಫೋಟೋಗಳಿಗಾಗಿ ಕಾಯುತ್ತಿರಿ.

ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:26 pm, Tue, 25 October 22