AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಕ್​ ಬರುತ್ತಿದ್ದಂತೆ ಮೂರ್ಛೆಯ ನಾಟಕವಾಡುವ ಈ ಆಡುಗಳು

Goat : ಹುಲ್ಲು ಮೇಯುತ್ತ ನಿಂತುಕೊಂಡಿದ್ದ ಈ ಆಡುಗಳು, ಸಾಗಣೆ ಟ್ರಕ್ ಬರುತ್ತಿದ್ದಂತೆ ಒಂದೇ ಸಲಕ್ಕೆ ಮೂರ್ಛೆ ಬೀಳುತ್ತವೆ. ಆಹಾ ಎಂಥ ನಾಟಕವಿದು! ಎಂದು ನೆಟ್ಟಿಗರು ನಗುತ್ತಿದ್ದಾರೆ. ವಿಡಿಯೋ ನೋಡಿ.

ಟ್ರಕ್​ ಬರುತ್ತಿದ್ದಂತೆ ಮೂರ್ಛೆಯ ನಾಟಕವಾಡುವ ಈ ಆಡುಗಳು
Tribe of Goats Pretending to Faint on seeing a truck
TV9 Web
| Updated By: ಶ್ರೀದೇವಿ ಕಳಸದ|

Updated on:Oct 26, 2022 | 11:15 AM

Share

Viral Video : ಅದೆಷ್ಟೋ ಪ್ರಾಣಿಪಕ್ಷಿಗಳ ವಿಡಿಯೋ ಅನ್ನು ನೋಡುತ್ತಿರುತ್ತೀರಿ. ವಿವಿಧ ಭಾವ, ಭಂಗಿಗಳಿಂದ ಕೂಡಿದ ಈ ವಿಡಿಯೋಗಳು ನಿಮ್ಮ ಮನಸ್ಸನ್ನು ಅರಳಿಸುತ್ತಿರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ಆಡುಗಳು ಭಾರೀ ನಾಟಕವಾಡುತ್ತಿವೆ. ಸರಕು ತುಂಬಿದ ಟ್ರಕ್ ಹಾದು ಹೋಗುತ್ತಿದ್ದಂತೆ ಮೂರ್ಛೆ ಬಿದ್ದವರಂತೆ ನಟಿಸುತ್ತವೆ. ನೆಟ್ಟಿಗರು ಈ ವಿಡಿಯೋ ನೋಡಿ ನಗುತ್ತಲೇ ಇದ್ದಾರೆ. ತಮ್ಮ ಪಾಡಿಗೆ ತಾವು ಮೇಯುತ್ತಿದ್ದವು ಇದ್ದಕ್ಕಿದ್ದಂತೆ ಹೀಗೆ ಹೇಗೆ ಎಲ್ಲವೂ ಒಟ್ಟಿಗೇ ಬಿದ್ದವು? ಈ ಅಚ್ಚರಿ ಬಿಡಿಸದ ಒಗಟಿನಂತೆ ತೋರುತ್ತಿದೆ.

ಈ ವಿಡಿಯೋ ಈತನಕ 56,000ಕ್ಕೂ ಹೆಚ್ಚು ಜನರನ್ನು ತಲುಪಿದೆ.  ಈ ವಿಡಿಯೋ ಅನ್ನು @ViralHog ಎಂಬ ಟ್ವಿಟರ್ ಖಾತೆದಾರರು ಪೋಸ್ಟ್ ಮಾಡಿದ್ದಾರೆ. ‘ಎಲೆಕ್ಟ್ರಿಕ್ ಶಾಕ್​ ಇದು. ಕೆಲ ಸೆಕೆಂಡುಗಳವರೆಗೆ ಈ ಸ್ಥಿತಿಯಲ್ಲಿದ್ದು ಮತ್ತೆ ಎದ್ದೇಳುತ್ತವೆ. ಎಲೆಕ್ಟ್ರಿಕ್​ ತಂತಿಬೇಲಿಯನ್ನು ಟ್ರಕ್​ ಸ್ಪರ್ಷಿಸಿದ್ದೇ ಇದಕ್ಕೆ ಕಾರಣ. ಆದರೆ ಆಡುಗಳಿಗೆ ಇದರಿಂದ ತೊಂದರೆಯಾಗದು’ ಎಂದಿದ್ದಾರೆ ಒಬ್ಬರು. ‘ಈ ಮೇಕೆಗಳಲ್ಲಿ ಮನುಷ್ಯರಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಕೀ ಕೊಟ್ಟಂತೆ ಎಲ್ಲವೂ ಒಮ್ಮೆಲೆ ಬಿದ್ದು ಹೋಗುವುದನ್ನು ನೋಡಲು ಬಹಳ ತಮಾಷೆ ಎನ್ನಿಸುತ್ತದೆ’ ಎಂದಿದ್ದಾರೆ ಮಗದೊಬ್ಬರು.

ಈ ಹಿಂದೆ ಡೇವಿಡ್ ಜಾನ್ಸನ್ ಎನ್ನುವವರು ಮೇಕೆಯೊಂದು ಶಿವನ ದೇವಸ್ಥಾನದಲ್ಲಿ ತನ್ನ ಮುಂಗಾಲುಗಳನ್ನೂರಿ ಪ್ರಾರ್ಥಿಸುವ ವಿಡಿಯೋ ಪೋಸ್ಟ್ ಮಾಡಿದ್ದು ನೆನಪಿರಬಹುದು.

ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:14 am, Wed, 26 October 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!