ಶಿವಮಂದಿರದಲ್ಲಿ ಮೊಣಕಾಲೂರಿ ಪ್ರಾರ್ಥಿಸುತ್ತಿರುವ ಮೇಕೆಯ ವಿಡಿಯೋ ವೈರಲ್
Goat Seen Praying : ಹಿಂದೆ ಭಕ್ತಗಣ, ಮುಂದೆ ಶಿವ, ಆರತಿಯ ಸಮಯ, ಅಲ್ಲಿಗೆ ಬಂದ ಈ ಮೇಕೆ ಮೆಟ್ಟಿಲ ಮೇಲೆ ಮೊಣಕಾಲುಗಳನ್ನೂರಿ ಶಾಂತವಾಗಿ ಪ್ರಾರ್ಥಿಸುತ್ತ ನಿಂತಿತು.
Viral Video : ಇತ್ತೀಚೆಗೆ ಪ್ರಾಣಿಗಳು ಮನುಷ್ಯನನ್ನು ಬಹಳೇ ಅನುಕರಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ವಾರಕ್ಕೊಂದಾದರೂ ವಿಡಿಯೋ ವೈರಲ್ ಆಗುತ್ತಿರುವುದು. ಕಳೆದ ವಾರ ಫ್ರ್ಯಾಕ್ಚರ್ ಆದ ತನ್ನ ಪೋಷಕನ ಕಾಲಿನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ನಾಯಿಯೊಂದು ಕುಂಟುತ್ತ ನಡೆಯುತ್ತಿರುವ ವಿಡಿಯೋ ನೋಡಿದ್ದೀರಿ. ಇದೀಗ ಕಾನ್ಫುರದ ಶಿವಮಂದಿರದಲ್ಲಿ ಆರತಿ ನಡೆಯುತ್ತಿದ್ದ ವೇಳೆ ಮೇಕೆಯೊಂದು ಮೊಣಕಾಲೂರಿ ಪ್ರಾರ್ಥಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಭಾವ, ಭಕ್ತಿಪರವಶರಾಗಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
A wonderful picture of faith has come to the fore from the Paramat temple of Kanpur, where a goat was seen kneeling in faith in the aarti of Baba Anandeshwar.@SarahLGates1 @thebritishhindu @davidfrawleyved pic.twitter.com/QHM8UjAye2
ಇದನ್ನೂ ಓದಿ— David Johnson (@David59180674) October 9, 2022
ಕಾನ್ಫುರದ ಬಾಬಾ ಆನಂದೇಶ್ವರ ದೇವಸ್ಥಾನದಲ್ಲಿ ಭಕ್ತರೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ದೇವಸ್ಥಾನದ ತುಂಬಾ ಭಕ್ತರು ಆರತಿ ಸಮಯದಲ್ಲಿ ಕೈಮುಗಿದು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ. ಅಲ್ಲಿಗೆ ಬಂದ ಈ ಮೇಕೆ ಯಾವುದೇ ರೀತಿಯ ಗದ್ದಲ ಮಾಡದೆ ಶಾಂತವಾಗಿ ತಾನೂ ಅವರಂತೆ ಪ್ರಾರ್ಥಿಸುತ್ತ ನಿಂತುಕೊಂಡಿದೆ. ಡೇವಿಡ್ ಜಾನ್ಸನ್ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಅನೇಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದೇವಸ್ಥಾನಕ್ಕೆ ಬಂದಿದ್ದ ಲಕ್ಷ್ಮೀ ಎಂಬುವವರು, ‘ಈ ಮೇಕೆ ಬೆಳಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಓಡಾಡಿಕೊಂಡಿತ್ತು’ ಎಂದಿದ್ದಾರೆ.
ಅನೇಕ ನೆಟ್ಟಿಗರು ಈ ವಿಡಿಯೋ ನೋಡಿ ಮೂಕವಿಸ್ಮಿತರಾಗಿದ್ದಾರೆ. ನಿಜಕ್ಕೂ ಈ ಮೇಕೆ ಹೀಗೆ ಪ್ರಾರ್ಥಿಸಿರುವುದನ್ನು ನಂಬಲಾಗುತ್ತಿಲ್ಲ! ಎಂಥ ಅದ್ಭುತ ಇದು ಎನ್ನುತ್ತಿದ್ದಾರೆ.
ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:36 pm, Mon, 10 October 22