ಕುಂಟುತ್ತಿರುವ ತನ್ನ ಪೋಷಕನನ್ನು ಅನುಕರಿಸಿ ಸಹಾನುಭೂತಿ ತೋರಿದ ಈ ನಾಯಿ
Dog Imitating Its Injured Owner : 9 ಮಿಲಿಯನ್ ಜನರು ಈ ಹೃದಯಸ್ಪರ್ಶಿ ವಿಡಿಯೋ ನೋಡಿದ್ದಾರೆ. ಬಹುಶಃ ನೀವೂ ಕೂಡ ಇಂಥ ಆಪ್ತ ನಾಯಿಯನ್ನು ಈ ಮೊದಲು ಎಲ್ಲಿಯೂ ನೋಡಿರಲಿಕ್ಕಿಲ್ಲ. ನೋಡಿ ಇಲ್ಲಿರುವ ವಿಡಿಯೋ.
Viral Video : ನಿನ್ನೆಯಷ್ಟೇ ಪಂಜಾಬ್ನಲ್ಲಿ ಎಮ್ಮೆಯೊಂದು ತನ್ನ ಪೋಷಕಿ ಡ್ಯಾನ್ಸ್ ಮಾಡಿ ತೋರಿಸಿದಾಗ ತಾನೂ ಡ್ಯಾನ್ಸ್ ಮಾಡಿ ತೋರಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಈ ನಾಯಿ ಕೂಡ ತನ್ನ ಪೋಷಕನನ್ನು ಅನುಕರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರರ್ಥ ಸಾಕುಪ್ರಾಣಿಗಳು ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವುಳ್ಳವು. ತನ್ನ ಪೋಷಕರ ಮನಸ್ಥಿತಿಯನ್ನು ಪರಿಸ್ಥಿತಿಯನ್ನು ಎಲ್ಲರಿಗಿಂತ ಬಲುಬೇಗನೆ ಅರ್ಥ ಮಾಡಿಕೊಂಡು ಸ್ಪಂದಿಸುವ ಸ್ನೇಹಪೂರ್ಣಜೀವಿಗಳು. ಉದ್ಯಮಿ ಹರ್ಷ ಗೋಯೆಂಕಾ ಇಂದು ಹಂಚಿಕೊಂಡಿರುವ ಈ ವಿಡಿಯೋ ಗಮನಿಸಿ. ಪೋಷಕನ ಕಾಲು ಫ್ರ್ಯಾಕ್ಚರ್ ಆಗಿ ಕುಂಟುವ ಪರಿಸ್ಥಿತಿ ಬಂದಿದೆ. ಆದರೂ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದಾನೆ. ನಾಯಿಯೂ ಕೂಡ ಇವನಿಗೆ ಕುಂಟುತ್ತ ಸಾಥ್ ಕೊಡುತ್ತಿದೆ.
Dogs always follow their master…pic.twitter.com/bK0NbrZ8Vu
ಇದನ್ನೂ ಓದಿ— Harsh Goenka (@hvgoenka) October 2, 2022
ಈ ವಿಡಿಯೋ 9 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಅನೇಕರ ಮನಗೆದ್ದಿರುವ ಈ ವಿಡಿಯೋ ಬಗ್ಗೆ ಸಾಕಷ್ಟು ಜನರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಎಂಥ ಮುದ್ದಾದ ದೃಶ್ಯವಿದು. ಸಾಕುಪ್ರಾಣಿಗಳು ಅದರಲ್ಲೂ ನಾಯಿಗಳು ಬಹಳ ನಿಷ್ಠಾವಂತ ಪ್ರಾಣಿಗಳು. ತಮಗಿಂತಲೂ ಹೆಚ್ಚು ತಮ್ಮನ್ನು ಸಾಕಿದವರನ್ನು ಪ್ರೀತಿಸುತ್ತವೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತನ್ನ ಪೋಷಕರಿಗೆ ಸಹಾನುಭೂತಿ ತೋರಿಸುವ ಇಂಥ ಬಗೆಯನ್ನು ಎಲ್ಲಿಯೂ ನೋಡಿರಲಿಲ್ಲ ಎಂದಿದ್ದಾರೆ.
ಎಂತ ಆಪ್ತ ವಿಡಿಯೋ ಇದಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:03 pm, Tue, 4 October 22