Kashmir : ಕಾಶ್ಮೀರದ ಅತೀ ಚಿಕ್ಕವಯಸ್ಸಿನ ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್​ ಅಕ್ಸಾ ಮಸರತ್

Youngest Social Media Influencer : 10 ವರ್ಷದ ಅಕ್ಸಾ 6 ವರ್ಷದವಳಿದ್ದಾಗ ಮೊದಲ ವಿಡಿಯೋ ಅಪ್​ಲೋಡ್ ಮಾಡಿದಳು. ಈ ತನಕ 50 ವಿಡಿಯೋಗಳನ್ನು ಅಪ್​ಲೋಡ್ ಮಾಡಿರುವ ಈಕೆಗೆ ಐಎಎಸ್ ಅಧಿಕಾರಿಯಾಗುವ ಕನಸು.

Kashmir : ಕಾಶ್ಮೀರದ ಅತೀ ಚಿಕ್ಕವಯಸ್ಸಿನ ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್​ ಅಕ್ಸಾ ಮಸರತ್
ಅಕ್ಸಾ ಮಸರತ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 04, 2022 | 3:49 PM

Viral Video : ಅತೀ ಚಿಕ್ಕ ವಯಸ್ಸಿನ ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್​ಗಳಲ್ಲಿ ಕಾಶ್ಮೀರದ ಅಕ್ಸಾ ಮಸರತ್ ಕೂಡ ಒಬ್ಬಾಕೆ. ತನ್ನ ಯೂಟ್ಯೂಬ್​ ಚಾನೆಲ್​​ನಲ್ಲಿ ಈಕೆ ಕೇವಲ ಕಾಶ್ಮೀರದ ರಮಣೀಯ ಪ್ರಕೃತಿಯ ಬಗ್ಗೆ ವರ್ಣಿಸದೆ, ಅಲ್ಲಿನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾಳೆ. ಸೋಪೋರ್​ನ ಶಾ ರಸೂಲ್ ಮೆಮೋರಿಯಲ್​ ಶಾಲೆಯ ವಿದ್ಯಾರ್ಥಿಯಾಗಿರುವ ಈಕೆ ತನ್ನ ಪ್ರಬುದ್ಧ ಆಲೋಚನೆ, ಸಾಮಾಜಿಕ ಕಳಕಳಿ, ನಿರೂಪಣಾ ಶೈಲಿ ಮತ್ತು ಗಂಭೀರ ಪ್ರಸ್ತುತಿಯ ಮೂಲಕ ಲಕ್ಷಾಂತರ ಜನರ ಗಮನ ಸೆಳೆದಿದ್ದಾಳೆ. ಯೂಟ್ಯೂಬ್​ನಲ್ಲಿ ಈಕೆ ‘What Aksa Says’ ಎಂಬ ಚಾನೆಲ್ ಹೊಂದಿದ್ದು ನಿಯಮಿತವಾಗಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾಳೆ. 2,800 ಕ್ಕೂ ಹೆಚ್ಚು, Facebook ನಲ್ಲಿ 58,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ.

ಎಎನ್​ಐ ಸುದ್ದಿ ಸಂಸ್ಥೆಯ ಪ್ರಕಾರ, ಅಕ್ಸಾ ಆರು ವರ್ಷದವಳಿದ್ದಾಗಲೇ ಸಾಮಾಜಿಕ ಜಾಲತಾಣವನ್ನು ಪ್ರವೇಶಿಸಿದಳು. ಆಗ ಕಾಶ್ಮೀರದದ 40 ದಿನಗಳ ಕಡುಚಳಿಗಾಲದ ಬಗ್ಗೆ ‘ಚಿಲ್ಲಾಯ್ ಕಲ್ಲನ್’ ಎಂಬ ಶೀರ್ಷಿಕೆಯಲ್ಲಿ ತನ್ನ ಮೊದಲ ವಿಡಿಯೋ ಅಪ್​ಲೋಡ್ ಮಾಡಿದ್ದಳು. ‘ನನ್ನ ವಯಸ್ಸಿನ ಮಕ್ಕಳು ಇಂಥ ವಿಡಿಯೋಗಳನ್ನು ನೋಡಿ, ಈ ಮೂಲಕ ತಮ್ಮ ಬದುಕಿನ ಘಟನೆಗಳಿಗೆ ಕನೆಕ್ಟ್ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ. ಹಾಗಾಗಿ ‘ಚಿಲ್ಲಾಯ್​ ಕಲ್ಲನ್’ ವಿಡಿಯೋ ಮಾಡಿ ಅಪ್​ಲೋಡ್ ಮಾಡಿದೆ. ನನ್ನ ಈ ಮೊದಲ ವಿಡಿಯೋಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿತ್ತು. ಇದು ನನಗೆ ಪ್ರೋತ್ಸಾಹ ನೀಡಿತು’ ಎಂದಿದ್ದಾಳೆ ಅಕ್ಸಾ.

ಇದನ್ನೂ ಓದಿ
Image
‘ಹೇಗೂ ಅಪ್ಪ ಮನೇಲಿಲ್ಲ, ಆಚೆ ಕಾಫೀಗೆ ಹೋಗೋಣ ಅಮ್ಮಾ?’ ಹೇಗಿದೆ ಐಡಿಯಾ!
Image
ತನ್ನ ಬೈಕ್​ ತಾನೇ ಸುಟ್ಟುಹಾಕಿದ ಹೈದರಾಬಾದಿನ ಈ ವ್ಯಕ್ತಿ
Image
ಮಗಳ ಮದುವೆಯ ದಿನ ಮಗಳೊಂದಿಗೆ ಕುಣಿದ ಈ ಅಪ್ಪ, ವಿಡಿಯೋ ವೈರಲ್
Image
ಜಗತ್ತಿನ ಅತೀ ಎತ್ತರದ ಶಿವ ದೇವಸ್ಥಾನದ ವೈಮಾನಿಕ ನೋಟ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈತನಕ ಸುಮಾರು 50 ವಿಡಿಯೋಗಳನ್ನು ಈಕೆ ಅಪ್​ಲೋಡ್ ಮಾಡಿದ್ದಾಳೆ. ಕಾಶ್ಮೀರದಲ್ಲಿ ಹೇಗೆ ಬೆಳೆ ಬೆಳೆಯಲಾಗುತ್ತದೆ, ಕೊಯ್ಲು ಮಾಡಲಾಗುತ್ತದೆ ಎನ್ನುವುದನ್ನು ತಿಳಿಸುವ ವಿಡಿಯೋ ಕೂಡ ಈಕೆಯ ಚಾನೆಲ್​ನಲ್ಲಿ ನೋಡಬಹುದಾಗಿದೆ. ಹಾಗೆಯೇ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ಕ್ರೀಡೆಗಳು ಹೇಗೆ ಸಹಕಾರಿ ಎನ್ನುವ ವಿಡಿಯೋ ಕೂಡ ಇದೆ. ‘ಸೋಪೋರ್​ನ ಹಣ್ಣಿನ ಮಂಡಿ, ಭತ್ತದ ಕೊಯ್ಲು ಮುಂತಾದ ವಿಡಿಯೋಗಳನ್ನು ಲಕ್ಷಾಂತರ ಜನರು ನೋಡಿದ್ದಾರೆ. ಇನ್ನು ನನ್ನ ಮಾಮೂ (ಚಿಕ್ಕಪ್ಪ)  ಮದುವೆಯ ಬಗ್ಗೆ ಮಾಡಿದ ವಿಡಿಯೋ ಅನ್ನು ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಇದಕ್ಕಿರುವ ಪ್ರಶಂಸೆಗಳ ಸುರಿಮಳೆ ಹೇಳತೀರದು’ ಎಂದಿದ್ದಾಳೆ ಅಕ್ಸಾ.

ಹಲವಾರು ಜನರು ಇವಳ ಈ ಕೆಲಸಕ್ಕಾಗಿ ಪ್ರೀತಿಸುವವರೂ ಇದ್ದಾರೆ ಹಾಗೆಯೇ ಸಮಸ್ಯೆ ಸೃಷ್ಟಿ ಮಾಡುವವರೂ ಇದ್ಧಾರೆ. ಸಮಸ್ಯೆಯಾದಾಗೆಲ್ಲ ಈಕೆಯ ಕುಟುಂಬ ಈಕೆಗೆ ಸಹಕರಿಸಿದೆ. ‘ಈ ಕೆಲಸಕ್ಕೆ ನನ್ನ ಮಾಮೂನೇ ಸ್ಫೂರ್ತಿ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಫೋಟೋ ಜರ್ನಲಿಸ್ಟ್​ ಆಗಿದ್ದಾರೆ’ ಎಂದಿದ್ದಾಳೆ ಅಕ್ಸಾ.

ಸದ್ಯ ಈಕೆ 5ನೇ ತರಗತಿಯಲ್ಲಿ ಓದುತ್ತಿರುವ ಈಕೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾಳೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:45 pm, Tue, 4 October 22