ಜಗತ್ತಿನ ಅತೀ ಎತ್ತರದ ಶಿವ ದೇವಸ್ಥಾನದ ವೈಮಾನಿಕ ನೋಟ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
Shiva Temple : ಇದು 5,000 ಹಳೆಯ ದೇವಸ್ಥಾನ ಎಂದು ಈ ವಿಡಿಯೋ ಚಿತ್ರೀಕರಿಸಿ ಪೋಸ್ಟ್ ಮಾಡಿದವರ ಹೇಳಿಕೆಯ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿ, ಇದು ಆದಿಶಂಕರಾಚಾರ್ಯರ ಕಾಲದಲ್ಲಿ ನಿರ್ಮಿಸಿದ ದೇವಾಲಯ ಎಂದಿದ್ದಾರೆ.
Viral Video : ಹಿಮಾಚ್ಛಾದಿತ ಪರ್ವತಗಳಲ್ಲಿರುವ ಜಗತ್ತಿನ ಅತೀ ಎತ್ತರದ ಶಿವ ದೇವಸ್ಥಾನದ 360 ಡಿಗ್ರಿ ಡ್ರೋನ್ ಕ್ಯಾಮೆರಾದ ದೃಶ್ಯಗಳು ಅಂತರ್ಜಾಲದಲ್ಲಿ ಇದೀಗ ವೈರಲ್ ಆಗಿದೆ. ಈ ದೇವಸ್ಥಾನವಿರುವುದು ಉತ್ತರಾಖಂಡದಲ್ಲಿ. ‘ಕೇದಾರನಾಥ’ ಸಿನಿಮಾದ ‘ನಮೋ ನಮೋ’ ಹಾಡನ್ನು ಈ ವಿಡಿಯೋಕ್ಕೆ ಅಳವಡಿಸಲಾಗಿದೆ. ಈ ತನಕ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು, 50,000 ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಎರಿಕ್ ಸೋಲ್ಹೈಮ್ ಎನ್ನುವವರು ಇತ್ತೀಚೆಗೆ ಇದರ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇದು 5,000 ರಷ್ಟು ಹಳೆಯದಾದ ಶಿವಮಂದಿರ ಎಂದು ನೋಟ್ ಬರೆದಿದ್ದಾರೆ. ಈ ನೋಟ್ ಬಗ್ಗೆ ಆಕ್ಷೇಪ ಎತ್ತಿದ್ದಾರೆ.
Incredible India ??! World’s Highest Located Mahadev Mandir.., believed to be 5000 years old ! Uttarakhand
ಇದನ್ನೂ ಓದಿ— Erik Solheim (@ErikSolheim) October 2, 2022
‘ದೇವಾಲಯದ ವಾಸ್ತುಶಿಲ್ಪವು ಅತ್ಯದ್ಭುತ. ಹಿಮಪಾತ, ಭೂಕಂಪನದಂಥ ಪ್ರಕೃತಿ ವಿಕೋಪವನ್ನು ಇದು ತಡೆದುಕೊಂಡಿದೆ’ ಎಂದಿದ್ದಾರೆ ಒಬ್ಬ ನೆಟ್ಟಿಗರು. ‘ತುಂಗಾನಾಥ ಮಹಾದೇವ ಮಂದಿರವು ಪಂಚ ಕೇದಾರಗಳಲ್ಲಿ ಒಂದು. ಇಲ್ಲಿ ಚಾರಣ ಮಾಡುವುದು ಬಹಳ ಅದ್ಭುತ ಅನುಭವ’ ಎಂದಿದ್ದಾರೆ ಮತ್ತೊಬ್ಬರು.
‘ಇದೇನು ಅಂಥಾ ಅದ್ಭುತವಲ್ಲ. ಖಂಡಿತ ಇದು 5000 ವರ್ಷಗಳಷ್ಟು ಹಳೆಯದೂ ಅಲ್ಲ. ತನ್ನದೇ ಆದ ಸೌಂದರ್ಯ ಹೊಂದಿದ ಒಂದು ದೇವಾಲಯ. ಇಂಥ ತಪ್ಪು ವಿಶೇಷಣಗಳಿಂದ ಬರೆದು ಪರಿಚಯಿಸುವ ಅಗತ್ಯವಿಲ್ಲ’ ಎಂದು ಆಕ್ಷೇಪಿಸಿದ್ಧಾರೆ ಇನ್ನೊಬ್ಬರು.
‘ಇದು ಇಷ್ಟು ಹಳೆಯದಾಗಿರಲು ಸಾಧ್ಯವಿಲ್ಲ. ಇದನ್ನು ಕ್ರಿ. ಶ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರ ಕಾಲದಲ್ಲಿ ನಿರ್ಮಿಸಲಾಗಿದೆ. ಪುರಾತತ್ವ ಇಲಾಖೆಯ ಪ್ರಕಾರ, ತುಂಗಾನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ 3,680 ಮೀಟರ್ ಎತ್ತರದಲ್ಲಿರುವ ಜಗತ್ತಿನ ಅತೀ ಎತ್ತರದ ಶಿವ ದೇವಾಲಯವಾಗಿದೆ. ಇದನ್ನು 1,000 ವರ್ಷಗಳಷ್ಟು ಹಳೆಯದಿರಬಹುದು’ ಎಂದಿದ್ದಾರೆ ಮತ್ತೊಬ್ಬ ಖಾತೆದಾರರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:13 am, Tue, 4 October 22