Cricket : ಬೆಂಗಳೂರಿನ ಗಲ್ಲಿ ಕ್ರಿಕೆಟ್​ಗೆ ಸಂಸ್ಕೃತದಲ್ಲಿ ಕಾಮೆಂಟರಿ, ವಿಡಿಯೋ ವೈರಲ್

Commentary in Sanskrit : ಇಂಗ್ಲಿಷ್​, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳಿದ್ದೀರಿ. ಆದರೆ ಸಂಸ್ಕೃತದಲ್ಲಿ!? ಬನ್ನಿ ಹಾಗಿದ್ದರೆ ಕೇಳುತ್ತ ಈ ಆಟ ನೋಡಿ.

Cricket : ಬೆಂಗಳೂರಿನ ಗಲ್ಲಿ ಕ್ರಿಕೆಟ್​ಗೆ ಸಂಸ್ಕೃತದಲ್ಲಿ ಕಾಮೆಂಟರಿ, ವಿಡಿಯೋ ವೈರಲ್
ಗಲ್ಲಿ ಕ್ರಿಕೆಟ್ ಮ್ಯಾಚ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 03, 2022 | 6:46 PM

Viral Video : ದೇವಭಾಷೆ ಎಂದು ಪರಿಗಣಿಸಲ್ಪಟ್ಟ ಸಂಸ್ಕೃತವು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು. ಆದರೆ ಇದನ್ನು ಮಾತನಾಡುವವರು ಕೇವಲ ಶೇ. 1. ಹಾಗಾಗಿ ಈ ಭಾಷೆ ಹಿಂದೂ ಪೌರೋಹಿತ್ಯಕ್ಕೆ ಮಾತ್ರ ಇದು ಸೀಮಿತವಾಗಿದ್ದರಿಂದ ತನ್ನ ಮೆರುಗನ್ನು ಕಳೆದುಕೊಂಡಿದೆ. ಆದರೂ ಭಾರತದಲ್ಲಿ ಅಲ್ಲಲ್ಲಿ ಕೆಲವರು ಈ ಭಾಷೆಯನ್ನು ಜೀವಂತವಾಗಿಟ್ಟುಕೊಳ್ಳುವಲ್ಲಿ ವಿಧವಿಧವಾದ ಪ್ರಯತ್ನ ನಡೆಸುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ  ಸಂಸ್ಕೃತ ಬಲ್ಲ ವ್ಯಕ್ತಿಯೊಬ್ಬರು, ಬೆಂಗಳೂರಿನ ಗಲ್ಲಿ ಕ್ರಿಕೆಟ್​ನ ಕಾಮೆಂಟರಿಯನ್ನು ನಿರರ್ಗಳವಾದ ಸಂಸ್ಕೃತದಲ್ಲಿ ಮಾಡಿದ್ದಾರೆ. ಇಂಗ್ಲಿಷ್​, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ಕಾಮೆಂಟರಿ ಕೇಳಿದ್ದೀರಿ. ಆದರೆ ಈ ಅಪರೂಪದ ಸಂಸ್ಕೃತದಲ್ಲಿ!? ನೆಟ್ಟಿಗರಲ್ಲಿ ಇದು ತೀವ್ರ ಕುತೂಹಲ ಉಂಟುಮಾಡಿದೆ.

ಲಕ್ಷ್ಮೀನಾರಾಯಣ ಬಿ.ಎಸ್​. ಎಂಬ ಟ್ವಿಟರ್ ಖಾತೆದಾರರು ‘ಸಂಸ್ಕೃತ ಮತ್ತು ಕ್ರಿಕೆಟ್​’ ಎಂದು ಶೀರ್ಷಿಕೆಯಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸ್ಫುಟವಾದ, ಸ್ಪಷ್ಟವಾದ, ಲಯಬದ್ಧವಾದ ಈ ಕಾಮೆಂಟರಿಗೆ ನೆಟ್ಟಿಗರು ಆಕರ್ಷಿತಗೊಳ್ಳುತ್ತಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 2000 ಕ್ಕೂ ಹೆಚ್ಚು ಮರುಟ್ವೀಟ್ ಮಾಡಿದ್ದಾರೆ.

‘ಇದು ಅತ್ಯದ್ಭುತ! ಕ್ರಿಕೆಟ್​ಗಿಂತ ಹಳೆಯದಾದ ಭಾಷೆ ಸಂಸ್ಕೃತ. ಈಗ ಈ ಶುದ್ಧ ಸಂಸ್ಕೃತದಲ್ಲಿ ಕೇಳಲು ಬಹಳ ಆನಂದವಾಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಒಬ್ಬ ನೆಟ್ಟಿಗರು. ‘ಇದು ನನ್ನ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಇದು ಉನ್ನತ ಸಂಸ್ಕೃತಿ’ ಎಂದಿದ್ದಾರೆ ಮತ್ತೊಬ್ಬರು. ‘ನಾನು ಸಂಸ್ಕೃತ ಕಾರ್ಯಾಗಾರಕ್ಕೆ ಹೋದಾಗ ಶಿಕ್ಷಕರು ವಿದ್ಯಾರ್ಥಿಗಳು ಪರಸ್ಪರ ಸಂಸ್ಕೃತದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಸಂಸ್ಕೃತದಲ್ಲಿ ಕ್ರಿಕೆಟ್​ ಕಾಮೆಂಟರಿಯನ್ನು ಈತನಕ ಕೇಳಿರಲಿಲ್ಲ’ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ವಾಹ್​ ಇದು ನನಗೆ ಬಹಳ ಇಷ್ಟವಾಯಿತು. ನಾವು ಹೀಗೆ ಮಾತನಾಡಲು ಪ್ರಾರಂಭಿಸಿದರೆ ಬಹಳ ಚೆಂದವಿರುತ್ತದೆ. ಸಂಸ್ಕೃತವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಜೊತೆಗೆ ಭಾರತದ ಎಲ್ಲಾ ಭಾಷೆಗಳು ಸಮಾನವೇ ಆದರೂ ಸಂಸ್ಕೃತ ನನ್ನ ಮೆಚ್ಚಿನದು’ ಎಂದಿದ್ದಾರೆ ಮತ್ತೊಬ್ಬ ನೆಟ್ಟಿಗರು.

ಗೃಹ ಸಚಿವಾಲಯದ ಭಾಷಾ ಇಲಾಖೆಯ ಇತ್ತೀಚಿನ ಸಂಶೋಧನೆಯ ಪ್ರಕಾರ, ಉತ್ತರಭಾರತದಲ್ಲಿ ಕೇವಲ 2,4821 ಜನರು ಮಾತ್ರ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:35 pm, Mon, 3 October 22