Hurricane : ‘ಮೈಕ್ರೋಫೋನಿಗೆ ಕಾಂಡೋಮ್ ಹಾಕಿ ವರದಿ ಮಾಡುತ್ತಿದ್ದೇನೆ, ನಿಮ್ಮ ಊಹೆ ಸರಿ ಇದೆ’
Florida : ಇಯಾನ್ ಚಂಡಮಾರುತದಿಂದ ತತ್ತರಿಸಿರುವ ಫ್ಲೊರಿಡಾದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿರುವ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್ಳ ಟ್ವೀಟ್ಗೆ ನೆಟ್ಟಿಗರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.
Viral : ಚಂಡಮಾರುತದಿಂದಾಗಿ ಫ್ಲೊರಿಡಾದ ನಿವಾಸಿಗಳ ಜನಜೀವನವು ಛಿದ್ರಗೊಂಡು ನಾಲ್ಕು ದಿನಗಳಾದರೂ ಇನ್ನೂ ಸಹಜ ಸ್ಥಿತಿಗೆ ಮರಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನೂರಾರು ಜನರು ಮರಣವನ್ನಪ್ಪಿದ್ದಾರೆ. ಲಕ್ಷಾಂತರ ಜನರು ವಿದ್ಯುತ್ ಮತ್ತು ಮೂಲಸೌಲಭ್ಯಗಳಿಲ್ಲದೆ ವ್ಯಾಪಾರೋದ್ಯಮವನ್ನು ಸ್ಥಗಿತಗೊಳಿಸಿ ಅತಂತ್ರರಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರವಿರುವಾಗ ಪತ್ರಕರ್ತರಿಗಂತೂ ಎಡೆಬಿಡದ ಕೆಲಸ. ಪ್ರಕೃತಿವಿಕೋಪ ಉಂಟಾದ ಸ್ಥಳಗಳಲ್ಲಿ ವರದಿಗಾರಿಕೆ ಮಾಡುವುದೆಂದರೆ ಅದು ದೊಡ್ಡ ಸಾಹಸವೇ. ಕ್ಷಣಕ್ಷಣಕ್ಕೂ ಮೈಯೆಲ್ಲ ಕಣ್ಣಾಗಿರಬೇಕು. ಎದುರಾಗುವ ಅಡೆತಡೆಗಳನ್ನು ನಿರ್ಭಿಡೆಯಿಂದ, ಪ್ರಜ್ಞೆಯಿಂದ, ಚಾಣಾಕ್ಷತನದಿಂದ ನಿರ್ವಹಿಸಿ ಕರ್ತವ್ಯಕ್ಕೆ ತೊಡಕುಂಟಾಗದಂತೆ ನಿಭಾಯಿಸಬೇಕು.
It’s either use a condom with a reservoir tip or have a mic go out. Vet move right here. pic.twitter.com/4GUDmubQGA
ಇದನ್ನೂ ಓದಿ— Joe Kinsey (@JoeKinseyexp) September 28, 2022
ಇದೀಗ NBC2 ಸುದ್ದಿವಾಹಿನಿಯ ಪತ್ರಕರ್ತೆ ಕೈಲಾ ಗೇಲರ್ ಚಂಡಮಾರುತ ಅಪ್ಪಳಿಸಿದ ಸ್ಥಳಗಳಲ್ಲಿ ವರದಿಗಾರಿಕೆಗೆ ತೆರಳಿದ್ದಾರೆ. ಮಳೆಗಾಳಿಯಿಂದ ತಮ್ಮ ಮೈಕ್ರೋಫೋನ್ ರಕ್ಷಿಸಿಕೊಳ್ಳಲು ಕಂಡುಕೊಂಡ ಉಪಾಯದಿಂದ ಇದೀಗ ಅವರು ಸುದ್ದಿಯಲ್ಲಿದ್ದಾರೆ. ಮೈಕ್ರೋಫೋನ್ಗೆ ಕಾಂಡೋಮ್ ಹಾಕಿ ವರದಿಗಾರಿಕೆ ಮಾಡುತ್ತಿರುವ ಅವರ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
‘ನನ್ನ ಮೈಕ್ರೋಫೋನ್ಗೆ ಹಾಕಿರುವುದು ಏನು ಎಂದು ಬಹಳಷ್ಟು ಜನ ಕುತೂಹಲದಿಂದ ಕೇಳುತ್ತಿದ್ದೀರಿ. ನೀವೇನು ಮನಸಿನಲ್ಲಿ ಯೋಚಿಸುತ್ತಿದ್ದೀರೋ ಅದು ಅದೇ ಆಗಿದೆ. ಹೌದು ಇದು ಕಾಂಡೋಮ್. ಇಲ್ಲಿ ಎಡೆಬಿಡದೆ ಗಾಳಿ ಮಳೆ ಸುರಿಯುತ್ತಿದೆ. ಹಾಗಾಗಿ ಈ ಉಪಾಯವನ್ನು ಕಂಡುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾಳೆ.
ಈ ಟ್ವೀಟ್ 66,000ಕ್ಕೂ ಹೆಚ್ಚು ಜನರನ್ನು ತಲುಪಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:48 pm, Mon, 3 October 22