ಇದು ಇ-ಕಾಲದ ಎಮ್ಮೆ ಮತ್ತು ಹೆಮ್ಮೆ, ಆಕೆ ಕುಣಿದು ತೋರಿಸಿದಳು ಇದೂ ಕುಣಿಯಿತು
Bangda Dance : ‘ನಮ್ಮೂರು ಪಂಜಾಬೇ ಆಗಿರಬಹುದು. ಆದರೆ ಅಣ್ಣಾವ್ರು ಹೇಳಿದ್ದನ್ನು ನಮ್ಮಜ್ಜಿ ಹೇಳಿದ ನೆನಪಿದೆ; ಎಮ್ಮೇ ನಿನಗೆ ಸಾಟಿ ಇಲ್ಲ. ಮುಂದಿನ ದಸರಾಗೆ ಕರೆಸ್ಕೊಂಬಿಡಿ ಮತ್ತೆ.’ ಇಂತಿ ಪಂಜಾಬಿ ನೃತ್ಯಗಾತಿ ಎಮ್ಮೆ.
Viral : ಈವತ್ತು ರಾತ್ರೋರಾತ್ರೀಲಿ ಯಾರೂ ಆನ್ಲೈನ್ನಲ್ಲಿ ಸ್ಟಾರ್ ಆಗಬಹುದು. ಡ್ಯಾನ್ಸ್ ಮಾಡ್ತಾರೋ, ಹಾಡು ಹಾಡ್ತಾರೋ, ಅಡುಗೆ ಮಾಡ್ತಾರೋ, ಎಲ್ಲ ಅವರವರಿಗೆ ಬಿಟ್ಟಿದ್ದು. ಮನಸಿದ್ರೆ ಮಾದೇವ. ಸಹಸ್ರಾರು ವರ್ಷಗಳು ಕಳೆದ್ರೂ ಪಾಪ ಈ ಎಮ್ಮೆಗಳಿಗೆ ಈಗಲೂ ಬಯ್ಯೋದಂತೂ ತಪ್ಪಿಲ್ಲ. ಅದರ ಗಟ್ಟಿ ಹಾಲು ಮಾತ್ರ ಬೇಕು. ಧಾರವಾಡದ ಕಡೆ ಬಯ್ಯೋದನ್ನು ಕೇಳಿರಬಹುದು ನೀವು, ‘ಥೋ ಮಡ್ಡ ತಲಿ ಎಮ್ಮೀಗತೆ’ ಹೀಗಂತ ಬಯ್ಯೋದು ಮನುಷ್ಯರಿಗೆ ಮತ್ತೆ! ‘ಮನಷ್ಯಾರಿಗೆ ಬಯ್ದು ನಮ್ ಅಬರೂ ಯಾಕ ಕಳೀತೀರಿ ನೀವು’ ಹೀಗಂತಿದ್ವು ಎಮ್ಮೆಗೆ ಬಾಯಿ ಇದ್ದಿದ್ದರೆ. ಪಾಪ ಏನ್ಮಾಡೋದು, ಎಲ್ಲಾ ಕೊಟ್ಟ ಬಾಯೊಂದು ಕೊಡಲಿಲ್ಲ ಆ ಭಗವಂತ. ಕುಣಿಯೋಕೆ ಕಾಲಂತೂ ಕೊಟ್ನಲ್ಲ!
ಇದನ್ನೂ ಓದಿView this post on Instagram
ಹೀಗೆ ಹುಲ್ಲು ಹಾಕಿ ಅದರ ಮುಂದೆ ಬಾಂಗಡಾ ಮಾಡಿದ ಈ ಎಮ್ಮೆಯ ಪೋಷಕಿಗೇ ಗೊತ್ತಿರಲಿಲ್ಲ, ತನ್ನ ಎಮ್ಮೆ ಹೀಗೆ ಕುಣಿದು ತೋರಿಸಬಹುದು ಅಂತ! ಸುಮ್ಮನೆ ತಾ ಕುಣಿದು ಕುಣಿ ನೋಡೋಣ ಅಂದಿದಾಳೆ. ಅದು ಕುಣಿದೇ ಬಿಟ್ಟಿದೆ. ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ videonation.teb ಅನ್ನೋ ಖಾತೇಲಿದೆ. 30,000 ಕ್ಕೂ ಹೆಚ್ಚು ಜನ ಎಮ್ಮೆ ಡ್ಯಾನ್ಸ್ಗೆ ಫಿದಾ. ನೆಟ್ಟಿಗರಂತೂ ಇದು ಅಜೀಬ್! ‘ಈ ಹೆಣ್ಮಗಳು ಏನೂ ಮಾಡ್ತಾಳೆ ಬಿಡಣ್ಣೋ’ ಅಂತ ಕಾಲೆಳೀತಿದಾರೆ. ‘ಇದು ನೋಡಿ ಅಪ್ಪಟ ಪಂಜಾಬಿ ಎಮ್ಮೆ ಅಂದ್ರೆ’ ಅಂತ ಮತ್ತೊಬ್ಬ ಸಿಂಗ್ಜಿ ಮೀಸೆ ತಿರುವಿಕೊಂಡಿದಾರೆ.
ನೀವೂ ಟ್ರೈ ಮಾಡಿ ನಿಮ್ಮನೇಲಿ ಎಮ್ಮೆ ಇದ್ರೆ. ಭರತನಾಟ್ಯಮ್ಮೋ, ಮೋಹಿನಿಯಾಟ್ಟಮ್ಮೋ ಒಟ್ನಲ್ಲಿ ಏನೋ ಒಂದಮ್ಮೋ. ಒಟ್ಟು ಖುಷಿಯಾಗಿರಬೇಕು ನೋಡಿ ಸಕಲಾತಿಸಕಲ ಜೀವರಾಶಿಯೂ. ಎಮ್ಮೆಯಿಂದ ಆಕೆ ಫೇಮಸ್ ಆದಳೋ, ಆಕೆಯಿಂದ ಎಮ್ಮೆ ಫೇಮಸ್ ಆಯ್ತೋ ಒಟ್ಟಿನಲ್ಲಿ ಕುಣಿಯಿರಿ, ಕುಣಿಸಿರಿ; ಇದು ಇಂಡಿಯಾದಲ್ಲಿ ಮಾತ್ರ!
ಡಾರ್ವಿನ್ ಮಹಾನುಭಾವ ಕೇಳಿಸ್ಕೊಳ್ತೀದೀಯಾ? ಪಾಪ ಇರಬೇಕಿತ್ತು ನೀನು ಇ-ಕಾಲಾನೂ ನೋಡೋಕೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:14 pm, Mon, 3 October 22