AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಔಕ್ಕಲೇ! ‘ಅಮ್ಮನಿಗೇ ಹೆದರಿಸಿಬಿಟ್ಟೆ, ಹೆಂಗೆ ನಾನು?’ ಅಂತಿದೆ ಮರಿಸಿಂಹ

Peek a boo : ನಮ್ಮಮ್ಮನ್ನ ಹೀಗೆ ಹೆದರ್ಸಿ, ನಾನು 1 ಮಿಲಿಯನ್ ಫ್ಯಾನ್ಸ್​ ಪಡ್ಕೊಂಡು ಫೇಮಸ್ ಆಗ್ತೀನಿ ಅಂತ ಗೊತ್ತೇ ಇರ್ಲಿಲ್ಲ ಕಣ್ರೀ. ದಿನಾ ಬೇಟೆಯಾಡಿ ಮಾಡೋದೇನಿದೆ? ಆಟ ಆಡಬೇಕು ಅದೂ ಜನಾ ಮೆಚ್ಚೋವಂಥದ್ದು!

ಔಕ್ಕಲೇ! ‘ಅಮ್ಮನಿಗೇ ಹೆದರಿಸಿಬಿಟ್ಟೆ, ಹೆಂಗೆ ನಾನು?’ ಅಂತಿದೆ ಮರಿಸಿಂಹ
ತನ್ನ ಮರಿಗೆ ತಾನೇ ಬೆದರಿದ ಸಿಂಹಿಣಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 03, 2022 | 2:17 PM

Viral : ಓಹೋ ನಿಮಗಷ್ಟೇ Peek-a-boo ಆಡೋಕೆ ಬರತ್ತಾ? ನೋಡಿ ಇಲ್ಲಿ ಹೇಗೆ ನಾನು ಹೇಗೆ ಅಮ್ಮನೊಂದಿಗೆ ಆಡಿದೀನಿ. ಆದರೆ ನಮ್ಮಮ್ಮ ಅಂತೂ ಎಂಥಾ ಪರಿ ಹೆದರ್ಕೊಂಡುಬಿಟ್ಲು ಅಂದ್ರೆ… ವಾಪಸ್​ ನನಗೇ ಭಯ ಆಗೋಯ್ತು. ಈ ವಿಡಿಯೋನಾ 1 ಮಿಲಿಯನ್​ ಜನ ನೋಡಿದಾರೆ ಆನ್​ಲೈನ್​ನಲ್ಲಿ. ಈಗಾಗಲೇ ಅವರೆಲ್ಲ ನಮ್ಮ ಫ್ಯಾನ್ಸ್​ ಆಗಿಬಿಟ್ಟಿದಾರೆ. ನನಗೂ ಗೊತ್ತಿರಲಿಲ್ಲ, ನನ್ನ ಅಮ್ಮನ ಜೊತೆ ಈ ಆಟ ಆಡಿದ್ರೆ ಇಷ್ಟೊಂದು ಫೇಮಸ್ ಆಗ್ಬಿಡ್ತೀನಿ ಅಂತ. ಭಾರೀ ಮಜಾ ಬಂತು ನಂಗಂತೂ.

Yoda4ever ಅನ್ನೋ ಟ್ವಿಟರ್ ಖಾತೆ ಮೂಲಕ ನನ್ನ ಈ ವಿಡಿಯೋ  ನೋಡಿದ್ರಿ ಅಲ್ವಾ? ಇದೇ ಆಟ ಆಡೋಕೆ ಹೋದ್ರೆ ಅಮ್ಮ ಹೆದರಲ್ಲ. ಹಾಗಾಗಿ ಬೇರೆ ಆಟ ನಿಮಗೆ ಗೊತ್ತಿದ್ರೆ ಕಮೆಂಟ್ ಮಾಡಿ ತಿಳಿಸಿ. ನಾನಂತೂ ಡಿಸೈಡ್ ಮಾಡಿದೀನಿ ದಿನಾ ಒಂದೊಂದು ಆಟ ಆಡಿ ಮಜವಾಗಿರಬೇಕು ಅಂತ. ಬರೀ ಬೇಟೆಯಾಡ್ತಿದ್ರೆ ಯಾರು ಮೆಚ್ತಾರೆ? ಜನಾ ಜನಾ ಮೆಚ್ಚೋಹಾಗೆ ಇರಬೇಕಲ್ವಾ?

ನೀವು ನಿಮ್ಮ ಅಮ್ಮಂದಿರಿಗೆ ಹೀಗೆಲ್ಲಾ ಹೆದರಿಸಿದ್ದೀರಾ? ಖಂಡಿತಾ ನಮ್​ ಅಮ್ಮನ ಹಾಗೇ ಹೆದರ್ಕೊಂಡಿರ್ತಾರೆ ಅವರೆಲ್ಲ. ಹೌದು ತಾನೆ?

ಈ ವಿಡಿಯೋ ನೋಡಿ ನೆಟ್​ಮಂದಿ, ‘ಹೌದು ಯಾವ ಪ್ರಾಣಿಯಾದರೂ ಅಷ್ಟೇ ಹೀಗೆ ಮಾಡಿದಾಗ ಮೊದಲು ಹೆದರ್ಕೊಳ್ತಾವೆ ಆಮೇಲೆ ಕೋಪ ಬಂದು ಶಾಂತವಾಗ್ತಾ ಇದು ಆಟ ಅಂತ ಮುದ್ದಾಗಿ ಮಕ್ಕಳನ್ನ ಸ್ವೀಕರಿಸಿಬಿಡ್ತಾವೆ’ ಎಷ್ಟು ಚೆಂದ ಅರ್ಥ ಮಾಡ್ಕೊಂಡಿದಾರಲ್ಲ ಈ ಟ್ವಿಟರ್​ದಾರರು?

ಸರಿ ನಾಳೆ ಯಾವ ಆಟ ಆಡಬೇಕು? ಕಮೆಂಟ್ ಮಾಡೋದನ್ನ ಮರೀಬೇಡಿ. ಓಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:14 pm, Mon, 3 October 22

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್