AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹವಾಸದೋಷ! ‘ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ನಮಗೂ ಟೀವಿ ಇದೆ’

Dog : ಟಿವಿ ನೋಡಿ ನೋಡಿ ಹಾಳಾಗಿ ಹೋದ್ರಿ ಅಂತ ಮಕ್ಕಳಿಗಷ್ಟೇ ಬಯ್ಯುತ್ತಿದ್ದಿರಿ. ಇನ್ನು ಈಗ ನಾಯಿಗಳಿಗೂ ಬಯ್ಯುವ ಕಾಲ ಬರದಿದ್ದೀತೆ? ಸದ್ಯಕ್ಕೆ ಒಳ್ಳೆಯದನ್ನಷ್ಟೇ ಅನುಕರಿಸಲು ಕಲಿತಿದೆ ಈ ನಾಯಿಮರಿ!

ಸಹವಾಸದೋಷ! ‘ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ನಮಗೂ ಟೀವಿ ಇದೆ’
ಸಹವಾಸದೋಷ!
TV9 Web
| Updated By: ಶ್ರೀದೇವಿ ಕಳಸದ|

Updated on:Oct 03, 2022 | 12:09 PM

Share

Dog : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗಾಗಿಯೇ ಮೀಸಲಿಟ್ಟ ಮಿಲಿಯನ್​ಗಟ್ಟಲೆ ಖಾತೆಗಳಿವೆ. ಇವುಗಳನ್ನು ನೋಡುವುದೇ ಒಂದು ರೀತಿ ಮೂಡ್​ ಬೂಸ್ಟರ್​. ಇನ್‌ಸ್ಟಾಗ್ರಾಮ್‌ನಲ್ಲಿ ಟೆಡ್​ ಎಂಬ ನಾಯಿಮರಿಗೆ ಮೀಸಲಾಗಿರುವ ಖಾತೆ @teddy_thegoldendood4 ಇದೀಗ ವೈರಲ್ ಆಗಿರುವ ಪೋಸ್ಟ್​ನ ಮೂಲ ಕೂಡ ಇದೇ. ಈ ವಿಡಿಯೋದಲ್ಲಿ ಟೆಡ್​ ಟಿವಿ ನೋಡಿ, ಅದರಲ್ಲಿರುವ ನಾಯಿಯನ್ನು ಉತ್ಸಾಹದಿಂದ ಅನುಕರಣೆ ಮಾಡುತ್ತಿದೆ. ಬಾಲ ಅಲ್ಲಾಡಿಸುತ್ತ ಟಿವಿ ಮುಂದೆ ಅತ್ತಿಂದಿತ್ತ ಇತ್ತಿಂದಿತ್ತ ಕುಣಿಯುವ ಛಂದವೇನು!

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಜುಲೈ 31 ರಂದು ಇ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಆರು ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಕರನ್ನು ಇದು ಸೆಳೆದಿದೆ. ಟೆಡ್ ಗೋಲ್ಡನ್​ ಡೂಡಲ್​ ತಳಿಯ ನಾಯಿ ಹೈದರಾಬಾದ್‌ ಇದರ ಮೂಲ. ಈ ವಿಡಿಯೋ ನೋಡಿದ ಅನೇಕರು ಮುದ್ದಿನಿಂದ ಪ್ರತಿಕ್ರಿಯಿಸಿದ್ದಾರೆ.

‘ಅಯ್ಯೋ, ಎಂಥ ಮುದ್ದಾಗಿದೆ ಇದು ನನಗೂ ಬೇಕು ಇಂಥದೊಂದು’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅವನ ಬಾಲ ನೋಡಿ ಎಷ್ಟು ಲಯಬದ್ಧವಾಗಿ ಅಲ್ಲಾಡುತ್ತಿದೆ’ ಎಂದು ಮತ್ತೊಬ್ಬರು. ಇವನು ಮನುಷ್ಯರನ್ನೂ ಮೀರಿಸುತ್ತಾನೆ ಅನುಕರಣೆಯಲ್ಲಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಮಕ್ಕಳಿಗೆ ಕೊಟ್ಟಂತೆ ನಾಯಿ, ಬೆಕ್ಕುಗಳಿಗೂ ಗ್ಯಾಡ್ಜೆಟ್​ ಕೊಟ್ಟು ಕೂರಿಸುವುದನ್ನು ಅವುಗಳ ಪೋಷಕರು ಅಭ್ಯಾ ಮಾಡಿಸಿದ್ದಾರೆ. ಮೊಬೈಲ್​, ಐಫೋನ್​, ಲ್ಯಾಪ್​ಟಾಪ್​, ಟಿವಿ… ಈಗ ಇದೆಲ್ಲ ನೋಡಿ ಮಕ್ಕಳು ಅನುಕರಣಾಶೂರರು ಆಗಿದ್ದಾಯಿತು. ಇನ್ನು ಇವುಗಳ ಸರಣಿ! ಅಲ್ಲಿಗೆ…

ಮತ್ತಷ್ಟು ವೈರಲ್​ ನ್ಯೂಸ್​ಗಳಿಗಾಗಿ ಕ್ಲಿಕ್ ಮಾಡಿ

Published On - 12:09 pm, Mon, 3 October 22

ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ