ಹುಟ್ಟುವ ಮಗು ಹೆಣ್ಣೋ ಗಂಡೋ?; ಜಲಪಾತಕ್ಕೇ ನೀಲಿಬಣ್ಣ ಹಾಕಿದ ದಂಪತಿ, ಕೆರಳಿದ ನೆಟ್ಟಿಗರು
Gender Reveal : ‘ಇವರಿಗೆ 10 ವರ್ಷ ಜೈಲುವಾಸವೇ ಸರಿ’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಮಗುವಿನ ಲಿಂಗ ಬಹಿರಂಗಪಡಿಸುವ ಸಮಾರಂಭವನ್ನು ಯಾಕೆ ಮಾಡುತ್ತಾರೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ’ ಎಂದಿದ್ದಾರೆ ಮತ್ತೊಬ್ಬರು.
Viral : ವಿದೇಶಗಳಲ್ಲಿ ದಂಪತಿ, ತಮಗೆ ಹುಟ್ಟುವ ಮಗು ಗಂಡೋ ಹೆಣ್ಣೋ ಎನ್ನುವುದನ್ನ ಬಂಧು-ಬಳಗದವರನ್ನು ಕರೆದು ಸಮಾರಂಭವೇರ್ಪಡಿಸಿ ಮಗುವಿನ ಲಿಂಗವನ್ನು ಬಹಿರಂಗವಾಗಿ ಘೋಷಿಸುವುದು ವಾಡಿಕೆ. ಗಂಡುಮಗುವನ್ನು ನೀಲಿ, ಹೆಣ್ಣುಮಗುವನ್ನು ಗುಲಾಬಿ ಬಣ್ಣಗಳಿಂದ ಸಾಂಕೇತಿಸುವುದು ಹಲವಾರು ವರ್ಷಗಳಿಂದ ಇದು ಅನೇಕ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಈಗಿಲ್ಲಿ ಬ್ರೆಝಿಲ್ನ ದಂಪತಿ ತಮಗೆ ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಜಾಗ ನೋಡಿ, ಮಹಾನ್ ಪರಿಸರವಾದಿಗಳು ಇವರು ಎಂದುಕೊಂಡರೆ ಖಂಡಿತ ತಪ್ಪು! ಇವರ ಈ ‘ಮಹಾನ್’ ಐಡಿಯಾದಿಂದ ನೆಟ್ಟಿಗರಂತೂ ಕಿಡಿಕಿಡಿಯಾಗಿದ್ದಾರೆ. ಹೇಗೆ ಸುಮ್ಮನಿರುವುದು ನದಿಗೇ ಹೀಗೆ ನೀಲಿ ಬಣ್ಣ ಬೆರೆಸಿದರೆ?
É sério que acharam uma boa ideia colocar corante numa cachoeira?!Tantas maneiras de fazer um chá revelação e conseguiram escolher justo uma com impacto ambiental. pic.twitter.com/YePJ0lPhhQ
ಇದನ್ನೂ ಓದಿ— A Eng. Florestal do YouTube ? (@vanecosta10) September 26, 2022
ತಮಗೆ ಹುಟ್ಟುವ ಮಗು ಗಂಡು ಎಂದು ಬಹಿರಂಗಪಡಿಸಿ ಸಂತೋಷಿಸಲು ಇವರು ಮಾಡಿದ ಭಯಂಕರ ಐಡಿಯಾ ನೋಡಿ ಕೆರಳಿದವರ ಸಂಖ್ಯೆ ಬರೋಬ್ಬರಿ 3 ಮಿಲಿಯನ್. ಇಂಟರ್ನೆಟ್ನಲ್ಲಿ ಹುಡುಕಿದರೆ ಅಥವಾ ನಮ್ಮಷ್ಟಕ್ಕೆ ನಾವು ಯೋಚಿಸಿದರೆ ಸಾಕಷ್ಟು ಸೃಜನಾತ್ಮಕ ಪರಿಕಲ್ಪನೆಗಳು ಸಿಗುತ್ತವೆ. ಆದರೆ ಈ ದಂಪತಿ ನದಿಗೆ ನೀಲಿಬಣ್ಣ ಬೆರೆಸಿ ನೀರನ್ನು ಕಲುಷಿತಗೊಳಿಸಿದ್ದಾರಲ್ಲ ಎಂದು ತೀವ್ರ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು.
ಈ ವಿಡಿಯೋ ಅನ್ನು ಪರಿಸರ ಕಾರ್ಯಕರ್ತ ವೇನ್ ಕೋಸ್ಟಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜಲಪಾತದಿಂದ ನೀಲಿಬಣ್ಣದ ನೀರು ಹರಿಯುವುದಷ್ಟೇ ಅಲ್ಲ ಜಲಪಾತದ ಸುತ್ತಮುತ್ತ ನೀಲಿಬಣ್ಣದ ಸ್ಮೋಕ್ ಬಾಂಬ್ ಕೂಡ ಹಾರಿಸಿದ್ದಾರೆ. ‘ಜಲಪಾತಕ್ಕೆ ಹೀಗೆ ಬಣ್ಣ ಹಾಕುವುದು ಒಳ್ಳೆಯದು ಎಂದು ಅವರು ತಿಳಿದುಕೊಂಡಿದ್ದಾರೆಯೇ?’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇವರಿಗೆ 10 ವರ್ಷ ಜೈಲುವಾಸವೇ ಸರಿ’ ಎಂದಿದ್ದಾರೆ ಇನ್ನೊಬ್ಬರು. ಮತ್ತೊಬ್ಬರು, ಮಗುವಿನ ಲಿಂಗ ಬಹಿರಂಗಪಡಿಸುವ ಸಮಾರಂಭವನ್ನು ಯಾಕೆ ಮಾಡುತ್ತಾರೆ ಎನ್ನುವುದೇ ನನಗೆ ಅರ್ಥವಾಗುವುದಿಲ್ಲ’ ಎಂದಿದ್ದಾರೆ ಮಗದೊಬ್ಬರು.
ವೈಯಕ್ತಿಕ ಖುಷಿ, ಆಚರಣೆಗಳು ಹೀಗೆ ಯಾರಿಗೂ, ಪರಿಸರಕ್ಕೂ ತೊಂದರೆ ಕೊಡುವಂತಿರಬಾರದು ಎನ್ನುವ ಸೂಕ್ಷ್ಮತೆ ಬೆಳೆಸಿಕೊಳ್ಳುವುದು ಒಳ್ಳೆಯದು. ಇಲ್ಲ ದೊಡ್ಡ ದಂಡ ತೆರಬೇಕಾಗುತ್ತದೆ. ಮರ್ಯಾದೆಯನ್ನು ಹೀಗೆ ಹರಾಜಿಗಿಟ್ಟುಕೊಳ್ಳಬೇಕಾಗುತ್ತದೆ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:06 pm, Mon, 3 October 22