Monday Motivation: 7 ಸೇನಾ ಜನರಲ್ಗಳಿಗೆ ಇನ್ಸ್ಟ್ರಕ್ಟರ್ ಆಗಿದ್ದ 100 ವರ್ಷದ ಯೋಧ ಬೆಂಗಳೂರಿನ ಸ್ವಾಮಿ ಎದೆಸೆಟೆಸಿ ಸೆಲ್ಯೂಟ್ ಹೊಡೆದಾಗ! ವಿಡಿಯೊ ನೋಡಿ
Anand Mahindra: ಇನ್ನು ಜಗತ್ತಿನ ಇಂತಹ ಆಗುಹೋಗುಗಳಿಗೆ ಸಕಾಲಿಕವಾಗಿ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು ಶತಾಯುಷಿ ಯೋಧನ ಹುಟ್ಟುಹಬ್ಬ ಆಚರಣೆಯ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ವಾರಾರಂಭಕ್ಕೆ ಇದು ಪ್ರೇರಣಾದಾಯಕ ಎಂದು ಷರಾ ಬರೆದಿದ್ದಾರೆ.
ಅವರು ಬರೋಬ್ಬರಿ ಏಳು ಸೇನಾ ಜನರಲ್ಗಳಿಗೆ ಇನ್ಸ್ಟ್ರಕ್ಟರ್ (Drill Instructor) ಆಗಿದ್ದವರು. ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಲು ವೀಲ್ ಚೇರಿನಲ್ಲಿ ಬಂದಿದ್ದರು. ಆದರೆ ತಾವು ಎದೆಯಾಳದಿಂದ ಪ್ರೀತಿಸುವ ಯೋಧರನ್ನು ಕಂಡವರೆ ಆ ಯೋಧರ ಎದುರು ಎದೆಯುಬ್ಬಿಸಿ ಜೈ ಹಿಂದ್ ಎಂದು ಅದೇ ಗತ್ತು ಗಾಂಭೀರ್ಯದಿಂದ ಸೆಲ್ಯೂಟ್ ಹೊಡೆದರು. ಹಾಗೆ ಎದೆಸೆಟೆಸಿ ಸೆಲ್ಯೂಟ್ ಹೊಡೆದವರು ಮಾಜಿ ಯೋಧ, ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತ ಗೋವಿಂದ ಸ್ವಾಮಿ ಅವರು (VSM Govinda Swami)
ಹೌದು ಮೇಜರ್ ಸ್ವಾಮಿ ಅವರ 100ನೇ ಹುಟ್ಟುಹಬ್ಬವನ್ನು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (National Defence Academy) ಔಪಚಾರಿಕವಾಗಿ ಆಚರಿಸಿದೆ. ಅವರು ವೀಲ್ ಚೇರಿನಲ್ಲಿ ಬಂದು ಗೌರವ ವಂದನೆ ಸ್ವೀಕರಿಸಲು ನಡುಗುವ ದೇಹವನ್ನು ಆರ್ಮಿ ಪೊಸಿಷನ್ ನಲ್ಲಿ ನಿಲ್ಲಿಸಿ, ಸೆಲ್ಯೂಟ್ ಹೊಡೆದಾಗ ಎಂತಹವರ ಎದೆಯಲ್ಲೇ ಆಗಲಿ ದೇಶಭಕ್ತಿಯ ಕಿಚ್ಚು ಹಬ್ಬುವುದು ಖಚಿತ. ಹಾಗಿತ್ತು ಅವರ ಗಾರ್ಡ್ ಆಫ್ ಆನರ್!
ಇನ್ನು ಜಗತ್ತಿನ ಇಂತಹ ಆಗುಹೋಗುಗಳಿಗೆ ಸಕಾಲಿಕವಾಗಿ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು (Anand Mahindra) ಶತಾಯುಷಿ ಯೋಧನ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ವಾರಾರಂಭಕ್ಕೆ ಇದು ಪ್ರೇರಣಾದಾಯಕ ಎಂದು (#MondayMotivation) ಷರಾ ಬರೆದಿದ್ದಾರೆ. ನಿಮಗೂ ಇದು ಮಂಡೆ ಮೋಟಿವೇಶನ್ ಆಗಬಹುದು ವಿಡಿಯೋ ನೋಡಿ.
Anand Mahindra ಟ್ವೀಟ್ ಸಾರಾಂಶ ಹೀಗಿದೆ:
“Sub Major Swamy, ex Drill Instructor of the National Defence Academy being felicitated on his 100th birthday. He Instructed 7 Indian Army Generals” Army as well as Indian tradition of enduring respect for our Gurus. I had goosebumps when he saluted.This is my #MondayMotivation
“Sub Major Swamy, ex Drill Instructor of the National Defence Academy being felicitated on his 100th birthday. He Instructed 7 Indian Army Generals” Army as well as Indian tradition of enduring respect for our Gurus. I had goosebumps when he saluted.This is my #MondayMotivation pic.twitter.com/Oa6gLkjjNR
— anand mahindra (@anandmahindra) October 3, 2022
ಕಾರ್ಯಕ್ರಮ ನಡೆದಿದ್ದು ಬೆಂಗಳೂರಿನ MEG ಕೇಂದ್ರದಲ್ಲಿ! ಅದರ ವಿಶೇಷತೆ ಏನು ಗೊತ್ತಾ!?
ಈ ಕಾರ್ಯಕ್ರಮ ಆಯೋಜಿಸಿದ್ದ ಮೆಡ್ರಾಸ್ ಎಂಜಿನಿಯರಿಂಗ್ ಗ್ರೂಪ್ (MEG – Madras Sappers Bangalore) ಮತ್ತು ಭಾರತೀಯ ಸೇನೆಯ (ಸದರನ್ ಕಮಾಂಡ್ -Southern Command Indian Army) ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬೆಂಗಳೂರಿನಲ್ಲಿರುವ MEG ಕೇಂದ್ರದಲ್ಲಿ! Madras Sappers ವಿಭಾಗದವರ 242ನೇ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಗಮನಾರ್ಹವೆಂದರೆ ಗೌರವಾನ್ವಿತ ಕ್ಯಾಪ್ಟನ್ ಗೋವಿಂದ ಸ್ವಾಮಿ ಅವರ ಪ್ರತಿಮೆಯನ್ನು ಬೆಂಗಳೂರಿನ MEG ಕೇಂದ್ರದಲ್ಲಿ ಇದೇ ವೇಳೆ ಸ್ಥಾಪಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ಇನ್ನು ಅನಾವರಣ ಮಾಡಿದ್ದು ಸ್ವತಃ ಗೋವಿಂದ ಸ್ವಾಮಿ ಅವರೇ.
A bust of "Hony Capt Govindswamy, VSM, Retd", an Icon & Epitome of Drill in #MADRASSAPPERS, was also unvieled at #MEG by the Legend himself. He has been the force behind MEG winning "Best Marching Contingent Trophy" of Republic/Army Day Parade, all "Nine" times it participated. pic.twitter.com/WHbuJ8Qg4G
— Southern Command INDIAN ARMY (@IaSouthern) September 30, 2022