Viral Video : ಅಂತರ್ಜಾಲದ ಸೌಲಭ್ಯದಿಂದಾಗಿ ಎಂಥ ದೂರವೂ ಇಂದು ಹತ್ತಿರ. ಎದ್ದಾಗಿನಿಂದ ಮಲಗುವವರೆಗೂ ನಾವೆಲ್ಲರೂ ಇದರ ಮೇಲೆಯೇ ವಿವಿಧ ಕಾರಣಗಳಿಂದಾಗಿ ಬೇಕೋ ಬೇಡವೋ ಅವಲಂಬಿತರಾಗಿದ್ದೇವೆ. ಆದರೆ ಮಕ್ಕಳು ಮತ್ತು ಹಿರಿಯರ ವಿಷಯದಲ್ಲಿ ಮಾತ್ರ ಇದು ಬೇರೆಯೇ. ಹಿರಿಯರನ್ನು ತಂತ್ರಜ್ಞಾನಕ್ಕೆಳೆದುಕೊಂಡು ಬರುವ ಕಿರಿಯರ ಉತ್ಸಾಹ ತಾಳ್ಮೆ ಮಾತ್ರ ಅದ್ಭುತ. ಇಲ್ಲೊಬ್ಬ ಹುಡುಗಿ ಅಜ್ಜನನ್ನು ಸೋಶಿಯಲ್ ಮೀಡಿಯಾಗಿ ಕರೆದುಕೊಂಡು ಬಂದಿದ್ದಾಳೆ.
View this post on Instagram
ಮಿಹಿಕಾ, ‘ಇವರು ನನ್ನ ಅಜ್ಜ’ ಎಂದು ಹೇಳುತ್ತಾಳೆ. ಅದಕ್ಕೆ ಪ್ರತಿಯಾಗಿ, ‘ಹೇಳಿ ಅಜ್ಜಾ ನಾನು ನಿಮ್ಮ ಮೊಮ್ಮಗಳು ಎಂದು’ ಅಜ್ಜನಿಗೆ ಹೇಳುತ್ತಾಳೆ. ಆ ಪ್ರಕಾರ ಅಜ್ಜ ಪುನರುಚ್ಚರಿಸುತ್ತಾರೆ. ಈ ಮುದ್ಧಾದ ವಿಡಿಯೋ ನೆಟ್ಟಿರನ್ನು ಆಕರ್ಷಿಸಿದೆ. ಈತನಕ 14 ಮಿಲಿಯನ್ಗೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ.
ವಯಸ್ಸಾದವರೂ ಕೂಡ ಬರುಬರುತ್ತ ಮಕ್ಕಳಂತೆಯೇ ಎನ್ನುತ್ತಾರಲ್ಲ ಈ ವಿಡಿಯೋ ನೋಡಿದಾಗ ಅದು ನಿಜವೆನ್ನಿಸುತ್ತದೆ. ಏನೂ ಸಂಕೋಚ ಮಾಡಿಕೊಳ್ಳದೆ ನೇರವಾಗಿ ಮೊಮ್ಮಗಳು ಹೇಳಿಕೊಟ್ಟಿದ್ದನ್ನು ಈ ಅಜ್ಜ ಎಷ್ಟು ಚೆಂದ ಹೇಳುತ್ತಾರಲ್ಲ?
ಇನ್ಸ್ಟಾಗ್ರಾಂನ ಬಯೋದಲ್ಲಿ ‘ಈ ಖಾತೆಯನ್ನು ನನ್ನ ತಂಗಿ ನಿರ್ವಹಿಸುತ್ತಾಳೆ’ ಎಂದಿದೆ. ಮಿಹಿಕಾ ತನ್ನ ಸಾಕಷ್ಟು ವಿಡಿಯೋಗಳನ್ನು ಈ ಅಕೌಂಟಿನಲ್ಲಿ ಹಂಚಿಕೊಂಡಿದ್ದಾಳೆ. ಈ ಪುಟ್ಟ ಹುಡುಗಿ ಸಾಕಷ್ಟು ರೀಲ್ಸ್ಗಳನ್ನು ತುಂಬಾ ಅತ್ಯಾಕರ್ಷಕವಾಗಿ ಮಾಡಿ ಅಪ್ಲೋಡ ಮಾಡಿದೆ. ಮುದ ಕೊಡುವಂಥ ವಿಡಿಯೋಗಳು ಇಲ್ಲಿವೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ