ವಾಟ್ಪಸ್​ ಸ್ಥಗಿತಗೊಂಡ ಆ ಹೊತ್ತಿನಲ್ಲಿ ಹರಿದಾಡಿದ ಈ ಮೀಮ್​ಗಳು

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Oct 25, 2022 | 4:31 PM

WhatsApp : ಮುಗೀತು, ಇನ್ನು ಬದುಕೇ ಇಲ್ಲ ಎಂಬಂತೆ ಕ್ಷಣ ಕಂಗಾಲಾಗಿ ಒದ್ದಾಡಿದವರು ಅದೆಷ್ಟು ಜನರೋ? ಝ್ಯೂಕರ್​ ಬರ್ಗ್​ಗೇ ಗೊತ್ತು! ವಾಟ್ಸಪ್​ ‘ಇಲ್ಲ’ವನ್ನೇ ಸರಕಾಗಿಸಿ ತಲೆ ಓಡಿಸಿದ್ದಂತೂ ಭಯಂಕರ! ಇದು ಮೀಮ್​ವೀರರ ಲೋಕ.

ವಾಟ್ಪಸ್​ ಸ್ಥಗಿತಗೊಂಡ ಆ ಹೊತ್ತಿನಲ್ಲಿ ಹರಿದಾಡಿದ ಈ ಮೀಮ್​ಗಳು
WhatsApp Outage Meme

Whatsapp Outage : ಅದೆಷ್ಟೋ ಜನ ವಾಟ್ಸಪ್​  ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಮ್ಮ ಇಂಟರ್​ನೆಟ್​ ಸರ್ವೀಸ್​ ಚೆಕ್ ಮಾಡಿದರೋ ಅಥವಾ ದೂರು ಸಲ್ಲಿಸಿದರೋ, ಮೊಬೈಲ್​ ಸೆಟಿಂಗ್ಸ್ ಚೆಕ್ ಮಾಡಿದರೋ, ರೀಬೂಟ್​ ಮಾಡಿದರೋ, ಪರಸ್ಪರ ಈ ಬಗ್ಗೆ ಫೋನ್​ ಮಾಡಿ ವಿಚಾರಿಸಿಕೊಂಡರೋ ಗೊತ್ತಿಲ್ಲ. ವಾಟ್ಸಪ್​ ನಲ್ಲೇ ಬದುಕುತ್ತಿರುವ ಅನೇಕರಿಗೆ ಈ ಸಂದರ್ಭದಲ್ಲಿ ಇಂಟರ್​ನೆಟ್​ ಇದೆಯೋ ಇಲ್ಲವೋ ಎಂದು ಬೇರೆ ಅಪ್ಲಿಕೇಷನ್​ ಅಥವಾ ವೆಬ್​ ಮೂಲಕ ಚೆಕ್ ಮಾಡಬೇಕು ಎನ್ನುವುದೂ ಹೊಳೆಯದೇ ಇರದ ಸಾಧ್ಯತೆಯೂ ಉಂಟಾಗಿತ್ತು. ಹಾಗಿದೆ ವಾಟ್ಸಪ್ಪನ ಮಹಿಮೆ!

ಈವತ್ತು ದೊಡ್ಡ ದೊಡ್ಡ ಕಂಪೆನಿಗಳಿಂದ ಹಿಡಿದು ಕೂಲಿ ಕೆಲಸ ಮಾಡುವವರೂ ವಾಟ್ಸ್​ಪ್​ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ವ್ಯವಹಾರ ಮಾಡುತ್ತಿದ್ದಾರೆ. ಅದೊಂದು ನಿತ್ಯಜೀವನದ ಸುಲಭ ಸಂವಹನ ವಿಧಾನವೆಂಬಂತೆ ಜನಜನಿತ. ಆದರೆ ಹೀಗೆ ಇದ್ದಕ್ಕಿದ್ದಂತೆ ಮಧ್ಯಾಹ್ನ 12.30ರ ಸುಮಾರಿಗೆ ವಾಟ್ಸಪ್​ ತನ್ನ ಕಾರ್ಯ ಸ್ಥಗಿತಗೊಳಿಸಿದಾಗ ಕೆಲವರು ಕಂಗಾಲಾದರೆ ಇನ್ನೂ ಕೆಲವರು ಮೆದುಳಿಗೆ ಕೆಲಸ ನೀಡಿದರು.

ಝ್ಯೂಕರ್​ ಬರ್ಗ್​ನಿಗೆ ಸಾಕಷ್ಟು ವೇಷಗಳನ್ನು ತೊಡಿಸಿ ನೆಟ್ಟಿಗರು ಸಾಕಷ್ಟು ಮೀಮ್​ಗಳನ್ನು ಸೃಷ್ಟಿಸಿದರು. ಅನೇಕ ಚಿತ್ರನಟರ ಫೋಟೋ ಹಾಕಿ ಮೀಮ್ಸ್​ ಸೃಷ್ಟಿಸಿದರು. ವಾಟ್ಸಪ್​ ಯೂನಿವರ್ಸಿಟಿಗಳ ಕಥೆ ಎಂತೋ ಏನೋ ತಮಾಷೆ ಮಾಡಿಕೊಂಡರು. ಅಂತೂ ವಾಟ್ಸಪ್​ನ ಟಿಕ್ ಮಾರ್ಕ್​ ಬಂದ ನಂತರ ಸಾಕಷ್ಟು ಜನರು ನಿರಾಳ ಉಸಿರಾಟ ನಡೆಸಿದ್ದಂತೂ ನಿಜ.

life is about opportunities 😏😏😈#WhatsApp #whatsappdown #meme #girl #fire #rt pic.twitter.com/gFExGKtVx8

ಅಂತೂ ದೀಪಾವಳಿ ಸಮಯದಲ್ಲಿ ವಾಟ್ಸಪ್​ ಹೀಗೆಲ್ಲಾ ಇಂಟರ್​ನೆಟ್ ತುಂಬಾ ನಗೆಪಟಾಕಿ ಹೊಡೆದಿದೆ. ನಿಮ್ಮ ಮೊಬೈಲ್​ನಲ್ಲಿಯೂ ಈಗ ರಾಶಿ ಮೀಮ್​ಗಳು ತುಂಬಿ ತುಳುಕುತ್ತಿರಬಹುದು. ಒಟ್ಟಿನಲ್ಲಿ ಯಾವುದೂ ನಿಲ್ಲುವುದಿಲ್ಲ ಜಗತ್ತಿನಲ್ಲಿ ಇಂಟರ್​ನೆಟ್​ ಇರುವತನಕ! ಒಂದು ಸ್ಥಗಿತಗೊಂಡರೆ ಇನ್ನೊಂದು ವೇಗ ಪಡೆದುಕೊಳ್ಳುತ್ತದೆ ಮತ್ತೊಂದು ಬಾಗಿಲಿನಿಂದ.

ಇದನ್ನೂ ಓದಿ

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada