WhatsApp Down: ಸ್ಥಗಿತವಾಗಿದ್ದ ವಾಟ್ಸ್ಆ್ಯಪ್ ಸೇವೆ ಈಗ ಲಭ್ಯ: ಸಮಸ್ಯೆ ಬಗೆಹರಿಸಿದ ಮೆಟಾ
ಅಕ್ಟೋಬರ್ 25 ಇಂದು ಮಧ್ಯಾಹ್ನ 12:30 ನಂತರ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುತ್ತಿಲ್ಲ. ಆಂಡ್ರ್ಯಾಯ್ಡ್ , ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್ಸ್‌ಗಳಲ್ಲೂ ಕೆಲಸ ಮಾಡುತ್ತಿಲ್ಲ.
ಭಾರತ ಹಲವು ನಗರಗಳಲ್ಲಿ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಅಕ್ಟೋಬರ್ 25 ಇಂದು ಮಧ್ಯಾಹ್ನ 12:30 ನಂತರ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದರೀಗ ಮೆಟಾ ಈ ಸಮಸ್ಯೆಯನ್ನು ಬರೆ ಹರಿಸಿದೆ. ಮಧ್ಯಾಹ್ನ 2:30 ರಿಂದ ಮೆಸೇಜ್ ಕಳುಹಿಸಲು ಮತ್ತು ರಿಸೀವ್ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕೂ ಮುನ್ನ ಆಂಡ್ರ್ಯಾಯ್ಡ್ (Android), ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್ಸ್‌ಗಳಲ್ಲೂ ಕೆಲಸ ಮಾಡುತ್ತಿರಲಿಲ್ಲ. ವಾಟ್ಸ್ಆ್ಯಪ್ನಲ್ಲಿ ಯಾರಿಗೂ ಮೆಸೇಜ್ ಸೆಂಡ್ ಮಾಡಲು ಆಗುತ್ತಿರಲಿಲ್ಲ. ಅಂತೆಯೆ ಯಾವುದೇ ಮೆಸೇಜ್ ರಿಸಿವ್ ಆಗುತ್ತಿರಲಿಲ್ಲ. ಸ್ಟೇಟಸ್‌ಗಳು ಅಪ್‌ಲೋಡ್ ಆಗುತ್ತಿರಲಿಲ್ಲ. ಈ ಬಗ್ಗೆ ಅನೇಕರು ಟ್ವಿಟರ್ನಲ್ಲಿ ದೂರು ನೀಡಿದ್ದರು. ಬಳಕೆದಾರರು ವಾಟ್ಸ್ಆ್ಯಪ್ ಅಪ್ಲಿಕೇಷನ್ ಬಳಕೆಯಲ್ಲಿ ಎದುರಿಸುತ್ತಿರುವ ತೊಂದರೆಯ ಕುರಿತು ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ವಾಟ್ಸ್ಆ್ಯಪ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿವೆ.
2000 ಕ್ಕೂ ಅಧಿಕ ಬಳಕೆದಾರರು ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಶೇ. 69 ರಷ್ಟು ಬಳಕೆದಾರರು ವಾಟ್ಸ್ಆ್ಯಪ್ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಮುಖ ಟ್ರ್ಯಾಕರ್ ಡೌನ್ಡಿಟೆಕ್ಟರ್ ಹೇಳಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ವಾಟ್ಸ್ಆ್ಯಪ್ನಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ. ಸದ್ಯ ವಾಟ್ಸ್ಆ್ಯಪ್ ಈ ಸಮಸ್ಯೆಯನ್ನು ಬಗೆಹರಿಸಿದೆ.
ಈ ಬಗ್ಗೆ ವಾಟ್ಸ್ಆ್ಯಪ್ ಮಾಹಿತಿ ಹಂಚಿಕೊಂಡಿದ್ದು, ”ಕಳೆದ ಕೆಲವು ಸಮಯದಿಂದ ಬಳಕೆದಾರರು ವಾಟ್ಸ್ಆ್ಯಪ್ ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ಸಮಸ್ಯೆಯನ್ನು ಪರಿಗಣಿಸಿ ಇದನ್ನು ಸರಿಪಡಿಸಿದ್ದೇವೆ. ಈಗ ಎಲ್ಲರೂ ವಾಟ್ಸ್ಆ್ಯಪ್ ಹಿಂದಿನಂತೆ ಉಪಯೋಗಿಸಬಹುದು,” ಎಂದು ಹೇಳಿದೆ.
#UPDATE: #WhatsApp services have resumed after over an hour of outage pic.twitter.com/ggIkHO1mKo
— ANI (@ANI) October 25, 2022
ಟ್ವಿಟ್ಟರ್‌ನಲ್ಲಿ ವಾಟ್ಸ್ಆ್ಯಪ್ ಡೌನ್ ಕುರಿತ ಮೀಮ್ಸ್ ಸಖತ್ ವೈರಲ್ ಆಗುತ್ತಿದೆ.
People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022
WhatsApp Engineer right now #WhatsAppDown pic.twitter.com/vRg0RZXYTd
— MB (@bowx_) October 25, 2022
So I was blaming my WiFi but actually I got to check on Twitter that the WhatsApp is down. @WhatsApp#whatsappdown pic.twitter.com/pKwOgETsEc
— ? (@IronMan_1128) October 25, 2022
LIVE from Whatsapp headquarters.#WhatsAppDown pic.twitter.com/UXeZBywsDV
— Krishna (@Atheist_Krishna) October 25, 2022
ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ…
Published On - 1:08 pm, Tue, 25 October 22