22 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆ ತುಂಡರಿಸಿ 54 ವರ್ಷದ ಮಹಿಳೆಯನ್ನು ರಕ್ಷಿಸಿದ ಗ್ರಾಮಸ್ಥರು
Python Swallowed Woman : ಹುಡುಕಿಕೊಂಡು ಬಂದ ಮನೆಯವರಿಗೆ ಆಕೆಯ ಸ್ಯಾಂಡಲ್ಸ್, ಬ್ಯಾಟರಿ ಕಂಡಿದೆ. ಹಾಗೆಯೇ ಸ್ವಲ್ಪ ದೂರದಲ್ಲಿಯೇ ಹೆಬ್ಬಾವೂ. ಗ್ರಾಮಸ್ಥರು ಅದರ ಹೊಟ್ಟೆ ಸೀಳಿ ಅಂತೂ ಆಕೆಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
Viral : ಈ ಭಯಂಕರ ಘಟನೆ ನಡೆದಿದ್ದು ಇಂಡೋನೇಷಿಯಾದಲ್ಲಿ. 22 ಅಡಿ ಉದ್ದದ ಈ ಹಾವು 54 ವರ್ಷದ ಮಹಿಳೆಯನ್ನು ನುಂಗಿಬಿಟ್ಟಿದೆ. ವಿಷಯ ತಿಳಿದ ಗ್ರಾಮಸ್ಥರು ಅದರ ಹೊಟ್ಟೆಯನ್ನು ಸೀಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಆಗ್ನೇಯ ಸುಲಾವೇಸಿಯಲ್ಲಿರುವ ಮುನಾ ದ್ವೀಪದಲ್ಲಿ ಗುರುವಾರದ ಸಂಜೆ ವಾ ಟಿಬಾ ಎಂಬ ಮಹಿಳೆ ತನ್ನ ತರಕಾರಿ ತೋಟದಲ್ಲಿ ತರಕಾರಿ ತೆಗೆದುಕೊಳ್ಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಹೊತ್ತಾದರೂ ಈಕೆ ಮನೆಗೆ ಮರಳದೇ ಇದ್ದಾಗ ಆತಂಕಗೊಂಡ ಮನೆಮಂದಿ ಮತ್ತು ಗ್ರಾಮಸ್ಥರು ಹುಡುಕಲು ಆರಂಭಿಸಿದ್ದಾರೆ.
ಹಾಗೆ ಹುಡುಕುತ್ತ ತೋಟಕ್ಕೆ ಬಂದಿದ್ದಾರೆ. ಅಲ್ಲಿ ಆಕೆಯ ಸ್ಯಾಂಡಲ್ಸ್ ಮತ್ತು ಬ್ಯಾಟರಿ ಪತ್ತೆಯಾಗಿದೆ. ಇಲ್ಲೇ ಎಲ್ಲೋ ಹತ್ತಿರದಲ್ಲೇ ಇರಬೇಕು ಎಂದು ಹುಡುಕಾಟ ಮುಂದುವರಿಸಿದ್ದಾರೆ. ನೋಡಿದರೆ ಹೆಬ್ಬಾವು! ಅದರ ಹೊಟ್ಟೆ ಉಬ್ಬಿರುವುದರ ಕಡೆಗೆ ಅವರ ಗಮನ ಹೋಗಿದೆ. ನಂತರ ಗ್ರಾಮಸ್ಥರು ಅದರ ಹೊಟ್ಟೆಯನ್ನು ಸೀಳಿದ್ದಾರೆ. ಆಗ ಟಿಬಾ ಬಟ್ಟೆಸಮೇತ ಕಂಡಿದ್ದಾಳೆ. ಹೆಬ್ಬಾವು ಆಕೆಯ ತಲೆಬದಿಯಿಂದ ನುಂಗಿತ್ತು.
ಈಕೆಯ ಮನೆಯಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ದೊಡ್ಡದೊಡ್ಡ ಗುಹೆಗಳು, ಕಲ್ಲುಬಂಡೆಗಳು ಇರುವುದರಿಂದ ಸಾಕಷ್ಟು ಹಾವುಗಳು ಇಲ್ಲಿ ವಾಸಿಸುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಳೆದ ವರ್ಷದ ಮಾರ್ಚ್ನಿಂದ ಈತನಕ ಗಮನಿಸಿದರೆ ಇಂಡೋನೇಷಿಯಾದಲ್ಲಿ ಇದು ಎರಡನೇ ಹೆಬ್ಬಾವು ದಾಳಿ ಪ್ರಕರಣ. 25 ವರ್ಷದ ಯುವಕನನ್ನು ಹೆಬ್ಬಾವೊಂದು ಸಂಪೂರ್ಣ ನುಂಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾಮಾನ್ಯವಾಗಿ ಮನುಷ್ಯನನ್ನು ನುಂಗಿದ ಹೆಬ್ಬಾವುಗಳು ಬದುಕುಳಿಯಲಾರವು. ಹಾಗಾಗಿ ಕಾಡಿನಲ್ಲಿ ಸಿಗುವ ಮಂಗ, ಹಂದಿ ಮತ್ತು ಇತರೇ ಸಸ್ತನಿಗಳೇ ಇವುಗಳ ಆಹಾರ.
ಅಂತೂ ಈ ಮಹಿಳೆ ಬದುಕಿದಳು!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ