ಉತ್ತರ ಪ್ರದೇಶದ ಎಟಿಎಂ ಒಂದರಲ್ಲಿ ರೂ. 200 ನಕಲಿ ನೋಟುಗಳು ಪತ್ತೆ; ಏನಿದು ‘ಫುಲ್ ಆಫ್ ಫನ್‘
Fake Note : ‘ಯೋಗಿ ಆದಿತ್ಯನಾಥರೇ, ನೀವಿದನ್ನು ಸಾಧಿಸಿದ್ದೀರಿ! ಕಾನೂನು, ಆದೇಶಗಳ ಪಾಲನೆ ವಿಷಯದಲ್ಲಿ ನಿಮಗೆ ಸರಿಸಾಟಿಯಾದವರು ಯಾರೂ ಇಲ್ಲ. ಜನರು ಅಸಲಿ-ನಕಲಿ ನೋಟುಗಳನ್ನು ಗುರುತಿಸುವಷ್ಟು ಶಕ್ತರಾಗಿದ್ದಾರೆ. ಅವರನ್ನು ಸುಶೀಕ್ಷಿತಗೊಳಿಸುವ ನಿಮ್ಮ ಈ ಪರಿ ಅನುಕರಣೀಯ!’
Viral Video : ಬೆವರು ಸುರಿಸಿ ದುಡಿದ ಹಣ ಬ್ಯಾಂಕಿನಲ್ಲಿ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಜನರದ್ದು. ಹಬ್ಬ ಬರುತ್ತಿದ್ದಂತೆ ದೇವಸ್ಥಾನದ ಮುಂದಿನ ಸರದಿಗಿಂತ ದೊಡ್ಡ ಸರದಿ ಎಟಿಎಂಗಳ ಮುಂದೆ ಇರುತ್ತದೆ. ಅದರಲ್ಲೂ ದೀಪಾವಳಿ! ಕೇಳಬೇಕೆ? ಇದೀಗ ಉತ್ತರ ಪ್ರದೇಶದ ಅಮೇಥಿಯು ಸುದ್ದಿಮಾಧ್ಯಮದಲ್ಲಿ ಚಾಲ್ತಿಯಲ್ಲಿದೆ. ಸ್ಥಳೀಯರು ಎಟಿಎಂಗೆ ಹಣ ಪಡೆಯಲು ಹೋದಾಗ ಯಂತ್ರದ ಮೂಲಕ ನಕಲಿ ನೋಟುಗಳು ಹೊರಬಂದಿವೆ. ಇದನ್ನು ಕಂಡ ಅವರು ಆಘಾತಕ್ಕೆ ಒಳಪಟ್ಟಿದ್ದಾರೆ.
Congratulations Karmayogi @myogiadityanath you have done it. Your law & order has no comparison. Master Stroke by your Bankers under your guidance. Now, people able to find which is original and which is tampered note. Your style of educating people is exemplary. https://t.co/uZFv2pHjWA
ಇದನ್ನೂ ಓದಿ— Voleti (@Voleti5) October 25, 2022
ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಈ ಪ್ರಕರಣಕ್ಕೆ ಸಾಕ್ಷಿ. ಮಶೀನಿನಿಂದ ರೂ. 200 ನಕಲಿ ನೋಟುಗಳು ಹೊರಬರುತ್ತಿದ್ದಂತೆ ಯಾರೋ ಒಬ್ಬರು ಈ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನೋಡಲು ಅಸಲಿ ನೋಟಿನಂತೆಯೇ ಕಂಡರೂ, ಸೂಕ್ಷ್ಮವಾಗಿ ಗಮನಿಸಿದಾಗ ಬದಲಾವಣೆಗಳನ್ನು ಈ ನೋಟಿನ ಮೇಲೆ ಕಾಣಬಹುದಾಗಿದೆ. ವಿಶೇಷವಾಗಿ ಗಮನಿಸಬೇಕಾದುದೆಂದರೆ, Full of Fun ಮತ್ತು Children of India ಎಂಬ ಪದಪುಂಜಗಳನ್ನು!
ನಕಲಿ ನೋಟುಗಳನ್ನು ವಿತರಿಸುತ್ತಿರುವ ಎಟಿಎಂ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ.
Rahul Gandhi Aye the kiya pic.twitter.com/INMp175uWw
— Sk Ahid (@SkAhid9) October 26, 2022
‘ಯೋಗಿ ಆದಿತ್ಯನಾಥ ಅವರೇ, ನೀವಿದನ್ನು ಸಾಧಿಸಿದ್ದೀರಿ! ಕಾನೂನು ಮತ್ತು ಆದೇಶಗಳ ಪಾಲನೆ ವಿಷಯದಲ್ಲಿ ನಿಮಗೆ ಸರಿಸಾಟಿಯಾದವರು ಯಾರೂ ಇಲ್ಲ. ಇದೀಗ ಜನರು ಅಸಲಿ ನೋಟು ಯಾವುದು ನಕಲಿ ನೋಟು ಯಾವುದು ಎನ್ನುವುದನ್ನು ಕಂಡುಕೊಳ್ಳಲು ಶಕ್ತರಾಗಿದ್ದಾರೆ. ಜನರನ್ನು ಸುಶೀಕ್ಷಿತಗೊಳಿಸುವ ನಿಮ್ಮ ಈ ಪರಿ ಅನುಕರಣೀಯ!’
ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸ್ಮೃತಿ ಇರಾನಿ ಕಾ ವಿಕಾಸ್ ಎಂದು ಒಬ್ಬರು ಹೇಳಿದ್ದಾರೆ. ದಯವಿಟ್ಟು ಬ್ಯಾಂಕಿನ ಹೆಸರನ್ನು ತಿಳಿಸಿ ಎಂದಿದ್ದಾರೆ ಇನ್ನೂ ಒಬ್ಬರು. ವ್ಹಾರೆವ್ವಾ! ಉತ್ತರ ಪ್ರದೇಶದ ಸರ್ಕಾರದಲ್ಲಿ ಇನ್ನೂ ಏನೆಲ್ಲಾ ಆಗುತ್ತದೆಯೋ ಎಂದಿದ್ದಾರೆ ಮತ್ತೊಬ್ಬರು. ಡಿಜಿಟಲ್ ಇಂಡಿಯಾದಿಂದ ಭಾರತದಲ್ಲಿ ನಷ್ಟವೇ ಆಗುತ್ತಿದೆ ಎಂದಿದ್ದಾರೆ ಮಗದೊಬ್ಬರು. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಈ ನಕಲಿ ನೋಟುಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ್ದಾರೆ ಯಾರೋ ಒಬ್ಬರು. ಇನ್ನೊಮ್ಮೆ ನೋಟು ರದ್ಧತಿ ಮಾಡುವಂಥ ಸಮಯ ಬಂದಿದೆ! ಎಂದು ಒಬ್ಬರು ಹೇಳಿದ್ದಾರೆ. ಬೋಲೋ ಜೈ ಶ್ರೀರಾಮ್ ಎಂದು ಜೈಕಾರ ಹಾಕಿದ್ದಾರೆ ಹೀಗೇ ಒಬ್ಬರು.
ಯಾವುದಕ್ಕೂ ಎಟಿಎಂ ನಿಂದ ಹಣ ಪಡೆಯುವಾಗ ಒಮ್ಮೆ ಪರಿಶೀಲಿಸುವುದು ಒಳ್ಳೆಯದು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:29 pm, Wed, 26 October 22