ಇಲ್ಲಿರುವ ಹಸುಗಳ ರಾಶಿಯಲ್ಲಿ ನಾಯಿಯೊಂದು ಅಡಗಿದೆ, ಕಂಡುಹಿಡಿಯುವಿರಾ
Optical Illusion : ಈ ಸಲ 5 ಅಲ್ಲ, 10 ಅಲ್ಲ, ಬರೋಬ್ಬರಿ 30 ಸೆಕೆಂಡುಗಳ ಕಾಲಾವಕಾಶ. ಇತ್ತೀಚೆಗೆ ಈ ಹಸುಗಳು ಗ್ರೂಪ್ ಫೋಟೋ ತೆಗೆಸಿಕೊಂಡಿವೆ. ಇವುಗಳ ಮಧ್ಯೆ ಯಾರಿಗೂ ತಿಳಿಯದಂತೆ ನಾಯಿಯೊಂದು ಅಡಗಿ ಕುಳಿತುಬಿಟ್ಟಿದೆ. ಪತ್ತೆಹಚ್ಚಿ.
Viral Optical Illusion : ಗಂಟೆಗಳು ಹೇಗೆ ಕಳೆಯುತ್ತವೆಯೋ ಗೊತ್ತಾಗುವುದಿಲ್ಲ. ಜಗತ್ತೇ ಯಂತ್ರಮಯವಾಗಿದೆ. ಈ ವೇಗಕ್ಕೆ ತಕ್ಕಂತೆ ತಲೆಯನ್ನೂ ಓಡಿಸುತ್ತ ಕೆಲಸ ಮಾಡುತ್ತಿರುತ್ತೀರಿ. ಎಲ್ಲೋ ಒಂದು ಕಡೆ ತಲೆ ಓಡುವುದೇ ಇಲ್ಲ. ಏಕೆಂದರೆ ತಲೆ ಯಂತ್ರವಲ್ಲವಲ್ಲ? ಆಗ ಸ್ವಲ್ಪ ವಿಶ್ರಾಂತಿ ಮತ್ತು ಸಣ್ಣ ಬದಲಾವಣೆ ಅತ್ಯವಶ್ಯ ಬೇಕಾಗುತ್ತದೆ. ಆಗೆಲ್ಲಾ ಸಹಾಯಕ್ಕೆ ಬರುವಂಥವು ಇಂಥ ಬ್ರೇನ್ ಟೀಸರ್ಸ್ ಅಥವಾ ಆಪ್ಟಿಕಲ್ ಇಲ್ಲ್ಯೂಷನ್ ಚಿತ್ರಗಳು. ಈಗ ಇಷ್ಟೊಂದು ಹಸುಗಳು ಅಡಗಿರುವ ಚಿತ್ರವನ್ನು ನೋಡುತ್ತಿದ್ದೀರಿ. ಈ ಹಸುಗಳ ಮಧ್ಯೆ ಒಂದು ನಾಯಿ ಅಡಗಿದೆ. ನಿಮಗೆ ಕೊಡುವ ಸಮಯ 30 ಸೆಕೆಂಡುಗಳು. ನಾಯಿಯನ್ನು ಪತ್ತೆ ಹಚ್ಚಬಲ್ಲಿರಾ?
ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ನಿಮ್ಮ ಗ್ರಹಿಕಾ ಸಾಮರ್ಥ್ಯ, ವೀಕ್ಷಣಾ ಸಾಮರ್ಥ್ಯ ಹೆಚ್ಚುತ್ತದೆ. ಮೆದುಳು ಚುರುಕಿನಿಂದ ಕೆಲಸ ಮಾಡಲು ತೊಡಗುತ್ತದೆ. ಹಾಗಾಗಿ ದಿನಕ್ಕೆ ಒಂದೆರಡು ಬಾರಿಯಾದರೂ ಇಂಥ ಆಪ್ಟಿಕಲ್ ಇಲ್ಲ್ಯೂಷನ್ ನೋಡುವುದನ್ನು ರೂಢಿಸಿಕೊಳ್ಳಿ. ಮೆದುಳನ್ನು ಹದಗೊಳಿಸಿಕೊಳ್ಳುವ ಕೆಲಸವನ್ನು ನಾವೇ ಕೊಟ್ಟುಕೊಳ್ಳಬೇಕು.
ಈ ಹಸುಗಳ ಮಧ್ಯೆ ಇರುವ ನಾಯಿಯನ್ನು ಗುರುತಿಸಲು ಸುಳಿವು ಬೇಕಾ? ಅವುಗಳ ಆಕಾರ ಗಮನಿಸಿ, ಕೋಡು, ಕಣ್ಣು, ಮೂಗು, ಬಾಯಿ ಮತ್ತೆ ಬಣ್ಣ… ಎಲ್ಲವನ್ನೂ ಗಮನಿಸುತ್ತಾ ಹೋಗಿ. ಹಸುಗಳ ಆಕಾರ ಸಾಮಾನ್ಯವಾಗಿ ಒಂದೇ ಥರ ಇದೆ. ಆದರೆ ಅವುಗಳ ದೃಷ್ಟಿ ಮಾತ್ರ ಬೇರೆಬೇರೆ ಕಡೆ ಹೊರಳಿದೆ. ಈ ಎಲ್ಲ ಹೊರಳುಗಳ ಮಧ್ಯೆಯೇ ನಾಯಿಯೊಂದು ಕಿವಿ ನಿಗುರಿಸಿಕೊಂಡು ಬಚ್ಚಿಟ್ಟುಕೊಂಡು ಕುಳಿತಿದೆ.
ಖಂಡಿತ ನಾಯಿ ನಿಮ್ಮ ಕಣ್ಣಿಗೆ ಕಂಡೇ ಕಾಣುತ್ತದೆ. ಪತ್ತೆಹಚ್ಚಿ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:31 pm, Fri, 21 October 22