AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಪ್ಪಳದ ಹೊದಿಕೆ; ನಿಮ್ಮ ಪ್ರೀತಿಯ ನಾಯಿ ಇನ್ನೆಂದೂ ನಿಮ್ಮನ್ನಗಲುವುದೇ ಇಲ್ಲ

Dog Love : ಈ ವಿಡಿಯೋದಲ್ಲಿರುವ ತುಪ್ಪಳದ ಹೊದಿಕೆ ಆಸ್ಟ್ರೇಲಿಯಾದಲ್ಲಿ ತೀರಿಹೋದ ಗೋಲ್ಡನ್​ ರಿಟ್ರೈವರ್​ ನಾಯಿಯದು. ನಿಮ್ಮ ನಿಮ್ಮ ಸಾಕುಪ್ರಾಣಿಗಳನ್ನು ಹೀಗೆ ಈ ರೂಪದಲ್ಲಿ ನಿಮ್ಮೊಂದಿಗೆ ಕೊನೆತನಕ ಇರಿಸಿಕೊಳ್ಳಬಹುದಾಗಿದೆ.

ತುಪ್ಪಳದ ಹೊದಿಕೆ; ನಿಮ್ಮ ಪ್ರೀತಿಯ ನಾಯಿ ಇನ್ನೆಂದೂ ನಿಮ್ಮನ್ನಗಲುವುದೇ ಇಲ್ಲ
Australian family preserves their dead pet dog as a rug
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 03, 2022 | 5:27 PM

Viral Video : ಪ್ರಾಣಿಗಳನ್ನು ಸಾಕುವುದಕ್ಕಿಂತ ಅವುಗಳನ್ನು ಕಳೆದುಕೊಂಡಾಗ ಅನುಭವಿಸುವ ನೋವು ದೊಡ್ಡದು. ಅದು ನಮ್ಮ ಜೀವವಿರುವವರೆಗೂ ನಮ್ಮನ್ನು ಕಾಡುತ್ತದೆ. ಹಾಗಾಗಿ ಪ್ರಾಣಿಪ್ರಿಯರು ತಮ್ಮ ಸಾಕುಪ್ರಾಣಿಗಳನ್ನು ಹಲವಾರು ವಿಧಗಳಲ್ಲಿ ನೆನಪಿನಲ್ಲಿಟ್ಟಕೊಳ್ಳಲು ಬಯಸುತ್ತಾರೆ. ಆದರೆ ಆಸ್ಟ್ರೇಲಿಯಾದ ಒಂದು ಕುಟುಂಬ ಮಾತ್ರ ತಮ್ಮ ನಾಯಿಯ ನೆನಪನ್ನು ಮಾತ್ರ ವಿಶಿಷ್ಟವಾಗಿ ಇರಿಸಿಕೊಂಡಿದೆ. ತೀರಿಹೋದ ಅವರ ನಾಯಿ ಅವರೊಂದಿಗೇ ಇರುತ್ತದೆ. ಹೇಗಂತೀರಾ? ನೋಡಿ ವಿಡಿಯೋ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by @chimerataxidermy

chimerataxidermy ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿರುವ ಈ ತುಪ್ಪಳದ ಹೊದಿಕೆ ತೀರಿಹೋದ ಗೋಲ್ಡನ್​ ರಿಟ್ರೈವರ್​ ನಾಯಿಯದು. ನಾಯಿಯ ತಲೆ ಮತ್ತು ಉಗುರುಗಳು ಹಾಗೆಯೇ ಇವೆ. ಈ ಇಡಿಯಾದ ಹೊದಿಕೆಯನ್ನು ಬಹುಕಾಲದವರೆಗೆ ಸಂರಕ್ಷಿಸಿ ಇಡಲು ಸಾಧ್ಯವಿದೆ.

ಈ ತನಕ ಈ ವಿಡಿಯೋ ಅನ್ನು 29,000 ಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಆದರೆ ಇದನ್ನು ನೋಡಿ ಅಚ್ಚರಿ ಆತಂಕ ವ್ಯಕ್ತಪಡಿಸಿದವರೇ ಹೆಚ್ಚು. ಸಾಕಷ್ಟು ಜನ ಈ ವಿಧಾನವನ್ನು ನೋಡಿ ಕೋಪಗೊಂಡಿದ್ದಾರೆ, ಅಸಹ್ಯಪಟ್ಟುಕೊಂಡಿದ್ದಾರೆ. ಈ ನಾಯಿಯ ಆತ್ಮಕ್ಕೆ ಅವರು ಶಾಂತಿ ಕೋರುವ ಬದಲಾಗಿ ಹೀಗಿಟ್ಟುಕೊಂಡಿರುವುದು ಸರಿಯಲ್ಲ ಎಂದಿದ್ದಾರೆ.

ಇನ್ನೂ ಕೆಲವರು, ಇದನ್ನು ನೋಡಿ ಖುಷಿಯಾಗುತ್ತಿದೆ. ಅನೇಕ ಜನ ಈ ವಿಧಾನವನ್ನು ಅನುಸರಿಸುತ್ತಿದ್ದಾರೆ ಎಂದಿದ್ದಾರೆ. ಕೆಲವರು ಈ ಪ್ರಕ್ರಿಯೆಗೆ ಒಳಪಡಿಸಲು ಎಷ್ಟು ಹಣ ಖರ್ಚಾಗುತ್ತದೆ ಎಂದು ವಿಚಾರಿಸಿದ್ದಾರೆ.

ನಾಯಿ ಕಳೆದುಕೊಂಡ ನೋವು ಬಹಳ ದೊಡ್ಡದು. ಅದನ್ನು ವಿವರಿಸಲು ಅಸಾಧ್ಯ. ಹೀಗಾದರೂ ಕಣ್ಣಮುಂದೆ ಇದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ ಎಂದಿದ್ದಾರೆ ಕೆಲವರು.

ನಿಮಗೇನು ಅನ್ನಿಸುತ್ತದೆ ಇದನ್ನು ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:14 pm, Thu, 3 November 22

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್