AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನದ ಪಾಂಡಾ, ಮೊಟ್ಟೆಯ ಚಾದರ್, ಶಾವಿಗೆ ನಾಯಿ ಬೇಕಾ ನಿಮಗೂ?

Food Art : ಯಾರಿಗೆ ಪಾಂಡಾ ಇಷ್ಟ, ಯಾರಿಗೆ ಅವುಗಳು ಹೊದ್ಕೊಂಡಿರೋ ಚಾದರ್ ಇಷ್ಟ, ಯಾರಿಗೆ ಈ ನಾಯಿ ಇಷ್ಟ? ಬೇಗಬೇಗ ಬನ್ನಿ, ಇಲ್ಲ ಬೇರೆಯವರು ತಿಂದುಬಿಡ್ತಾರೆ! ಇದೆಲ್ಲ ಹೇಗೆ ಮಾಡಿದ್ದು ಅಂತ ಯೋಚಿಸ್ತಿದೀರಾ? ನೋಡಿ ವಿಡಿಯೋ.

ಅನ್ನದ ಪಾಂಡಾ, ಮೊಟ್ಟೆಯ ಚಾದರ್, ಶಾವಿಗೆ ನಾಯಿ ಬೇಕಾ ನಿಮಗೂ?
Artist creates an adorable looking panda in a blanket with rice and eggs
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 02, 2022 | 3:21 PM

Viral Video : ಕಲ್ಪನಾಶಕ್ತಿ ಇದ್ದರೆ ಮಾತ್ರ ನಿಮ್ಮೊಳಗೆ ಕಲೆ ಪ್ರವೇಶಿಸುತ್ತದೆ. ಎದುರಿಗಿರುವ ಯಾವ ವಸ್ತುವಿನಲ್ಲಿಯೂ ಒಂದು ನೋಟ ನಿಮಗೆ ಗೋಚರಿಸುತ್ತದೆ. ಅದನ್ನು ಕೇಂದ್ರೀಕರಿಸಿದಲ್ಲಿ ಅದೊಂದು ಸೃಷ್ಟಿಯಾಗಿ ಅರಳುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅನ್ನದ ಪಾಂಡಾಗಳು ಮೊಟ್ಟೆಯ ಚಾದರ್​ ಹೊದ್ದುಕೊಂಡು ಮಲಗಿವೆ. sibatable ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಇಂಥ ಅನೇಕ ರೀತಿಯ ಕಲಾಕೃತಿಗಳನ್ನು ನೋಡಬಹುದಾಗಿದೆ. ಅಡುಗೆಮನೆಯಲ್ಲಿ ಅರಳಿಸುವ ಈ ಮುದ್ದಾದ ಕಲಾಕೃತಿಗಳು ಯಾರನ್ನೂ ಮನಸೆಳೆಯುವಂತಿವೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by 시바테이블 (@sibatable)

ಸುಮಾರು 50,000 ಜನರು ಈ ವಿಡಿಯೋ ನೋಡಿದ್ದಾರೆ. 2000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಎಂಥ ಮುದ್ದಾಗಿವೆ ಈ ಕಲಾಕೃತಿಗಳು ಎಂದು ನೆಟ್ಟಿಗರು ಅಚ್ಚರಿಯಿಂದ ಹೇಳುತ್ತಿದ್ದಾರೆ. ಪಾಂಡಾ ಮತ್ತು ಶಾವಿಗೆಯಿಂದ ಮಾಡಿದ ನಾಯಿ ಬಹಳ ಮುದ್ದಾಗಿವೆ ಎಂದಿದ್ದಾರೆ. ಎಂಥ ಪ್ರೀತಿ ಉಕ್ಕುತ್ತಿದೆ ಇದೆಲ್ಲ ನೋಡುತ್ತಿದ್ದರೆ, ಎಂಥ ಹಸಿವಾಗಿದ್ದರೂ ತಿನ್ನಲು ಮನಸ್ಸಾಗಲಾರದು ಎನ್ನುತ್ತಿದ್ದಾರೆ ಇನ್ನೊಬ್ಬರು. ಅದ್ಭುತವಾದ ಕಲ್ಪನೆ ಎಂದಿದ್ದಾರೆ ಮಗದೊಬ್ಬರು.

ಸ್ವಲ್ಪ ಯೋಚಿಸಿದರೆ, ತಾಳ್ಮೆಯನ್ನೂ ಹೊಂದಿದರೆ ನಿಮ್ಮ ಕಲ್ಪನೆಗೆ ಇಂಥ ಆಕಾರವನ್ನು ಖಂಡಿತ ಕೊಡಬಹುದು. ಅದೂ ನೀವಿದ್ದಲ್ಲಿಯೇ! ಇಂಥ ಅನೇಕ ಐಡಿಯಾಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟಿವೆ. ಒಮ್ಮೆ ಕಣ್ಣು ಹಾಯಿಸಿದರೆ ಸಾಕು. ನಿಮ್ಮ ಆಲೋಚನೆಗಳಿಗೆ ಒಂದು ರೂಪು ಖಂಡಿತ ಸಿಗುತ್ತದೆ. ಮನಸ್ಸಿಗೆ ಒಂದಿಲ್ಲಾ ಒಂದು ಗುಂಗು ಹಿಡಿಸುವುದು ಒಳ್ಳೆಯದೇ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:21 pm, Wed, 2 November 22