AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vibhuti: ಪುಟ್ಟಪರ್ತಿ ಸಾಯಿ ಬಾಬಾ ಪವಾಡ -ಸತ್ಯಸಾಯಿ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು

Puttaparthi Sai Baba: ಸತ್ಯಸಾಯಿ ಫೋಟೋದಿಂದ ವಿಭೂತಿ ಉದುರುತ್ತಿದೆ ಎಂದು ಗ್ರಾಮಸ್ಥರು, ಆ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಷ್ಟಕ್ಕೂ ಆ ಮನೆಯಲ್ಲಿ ಜರುಗಿದ್ದು ಏನು?

Vibhuti: ಪುಟ್ಟಪರ್ತಿ ಸಾಯಿ ಬಾಬಾ ಪವಾಡ -ಸತ್ಯಸಾಯಿ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು
ಪುಟ್ಟಪರ್ತಿ ಸಾಯಿ ಬಾಬಾ ಪವಾಡ: ಸತ್ಯಸಾಯಿ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು
TV9 Web
| Edited By: |

Updated on:Nov 02, 2022 | 3:52 PM

Share

ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಗ್ರಾಮದಲ್ಲಿ ಪವಾಡವೊಂದು ನಡೆದಿದೆ. ಸತ್ಯಸಾಯಿ ಫೋಟೋದಿಂದ ವಿಭೂತಿ (Vibhuti) ಉದುರುತ್ತಿದೆ ಎಂದು ಗ್ರಾಮಸ್ಥರು ಆ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಷ್ಟಕ್ಕೂ ಆ ಮನೆಯಲ್ಲಿ ಜರುಗಿದ್ದು ಏನು? ಪುಟ್ಟಪರ್ತಿ ಪುರಸಭೆಯ ಪೆದ್ದಕಮ್ಮವಾರಿಪಲ್ಲಿ ಗ್ರಾಮದಲ್ಲಿ ಸತ್ಯಸಾಯಿ ಬಾಬಾ (Puttaparthi Sai Baba) ಭಕ್ತೆಯ ಮನೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂಬ ಸುದ್ದಿ ಸುತ್ತಮುತ್ತ ಹಬ್ಬಿದೆ.

ಆ ದೃಶ್ಯವನ್ನು ನೋಡಿದ ಕುಟುಂಬಸ್ಥರು ಪೂಜೆ ಮಾಡತೊಡಗಿದ್ದಾರೆ. ಇದರಿಂದ ಆ ಮನೆಗೆ ಸುತ್ತಮುತ್ತಲ ಗ್ರಾಮಗಳ ಜನರೆಲ್ಲ ಬರತೊಡಗಿದ್ದಾರೆ. ಇದು ಸತ್ಯಸಾಯಿ ಬಾಬಾರವರ ಜನ್ಮ ಮಾಸವಾದ್ದರಿಂದ ಈ ಪವಾಡ ನಡೆದಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಹಿಂದೆಯೂ ಜಿಲ್ಲೆಯಲ್ಲಿ ಹಲವು ವಿಚಿತ್ರಗಳು ನಡೆದಿವೆ.

ಬಾಬಾ ನಮ್ಮ ನಡುವೆ ಇಲ್ಲದಿದ್ದರೂ ಅವರನ್ನು ಪೂಜಿಸುವ ಮತ್ತು ಪೂಜಿಸುವವರಿಗೆ ಅವರು ಯಾವಾಗಲೂ ಜೀವಂತವಾಗಿದ್ದಾರೆ ಎಂದು ಆಗಾಗ ಸಾಬೀತಾಗಿರುತ್ತದೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಹೀಗೆ ವಿಭೂತಿ ಉದುರುವ ಪವಾಡ ನಡೆಯುತ್ತದೆ.. ಇದೆಲ್ಲ ಸತ್ಯಸಾಯಿಯ ಮಹಿಮೆ ಎನ್ನುತ್ತಾರೆ ಸ್ಥಳೀಯರು.

ಇದೇ ವೇಳೆ…ಸತ್ಯಸಾಯಿ ಜಿಲ್ಲೆಯ ಜೀರಿಗೆಪಲ್ಲಿ ಎಂಬ ಗ್ರಾಮದಲ್ಲಿ ಮತ್ತೊಂದು ವಿಚಿತ್ರವೂ ನಡೆದಿದೆ. ರಾತ್ರಿ 9 ಗಂಟೆಗೆ ಸ್ಥಳೀಯ ಅಮ್ಮಾಜಿ ದೇವಸ್ಥಾನಕ್ಕೆ ಎರಡು ಕರಡಿಗಳು ನುಗ್ಗಿವೆ. ದೇವಸ್ಥಾನದ ಮುಖ್ಯ ದ್ವಾರದಿಂದ ದೇವಸ್ಥಾನ ಪ್ರವೇಶಿಸಿವೆ. ಅದಾದ ನಂತರ ಎರಡು ಕರಡಿಗಳ ಪೈಕಿ.. ಒಂದು ಕರಡಿ ದೇವಸ್ಥಾನದ ಗಂಟೆಗೆ ನೇತಾಡುವ ಹಗ್ಗವನ್ನು ಕಚ್ಚಿಕೊಂಡು ಸುತ್ತುತ್ತಿದೆ. ತನ್ನ ಮುಂಭಾಗದ ಕಾಲುಗಳಿಂದ ಎಳೆಯುತ್ತಾ ದೇವಾಲಯದ ಗಂಟೆಯನ್ನು ಬಾರಿಸಿದೆ. ಇದು ಈಗ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದೆ.

Published On - 3:50 pm, Wed, 2 November 22

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು