‘ಸೆರೆಯ ಕುಡಿಯದೆ ಮತ್ತ ನಿಶೆ ಏರಬೇಕ’ ಯಾಕಪ್ಪಾ ಮಂಗಣ್ಣ ಶರೀಫಜ್ಜರ ಮಾತು ಕೇಳೋದಿಲ್ಲೇನು?

Uttar Pradesh : ಉತ್ತರಪ್ರದೇಶದ ಮದ್ಯದಂಗಡಿಯ ಮಾಲೀಕರು ಈ ಕುಡುಕ ಕೋತಿಯಿಂದಾಗಿ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ; ಕಲಿಯುಗದ ಕುಡುಕ ಕೋತಿ ಎಂದಿದ್ದಾರೆ ಒಬ್ಬರು. ಅದಕ್ಕೇ ಮದ್ಯ ತುಟ್ಟಿಯಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. 

‘ಸೆರೆಯ ಕುಡಿಯದೆ ಮತ್ತ ನಿಶೆ ಏರಬೇಕ’ ಯಾಕಪ್ಪಾ ಮಂಗಣ್ಣ ಶರೀಫಜ್ಜರ ಮಾತು ಕೇಳೋದಿಲ್ಲೇನು?
Monkey steals alcohol from shop in Uttar Pradeshs Rae Bareli drinks it
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 02, 2022 | 2:03 PM

Viral : ಶರೀಫಜ್ಜರ ಮಾತನ್ನು ಮನುಷ್ಯರೇ ಕೇಳಲಿಲ್ಲ ಇನ್ನು ಕೋತಿ ಕೇಳೀತೇ? ಅಂತೂ ಮನುಷ್ಯರಷ್ಟೇ ಅಲ್ಲ  ಕೋತಿಗಳು ಅಮಲೇರುವುದನ್ನು ರೂಢಿಸಿಕೊಳ್ಳುತ್ತಿವೆ. ಇನ್ನು ಏನು ಗತಿ? ಉತ್ತರ ಪ್ರದೇಶದ ರಾಯ್‌ಬರೇಲಿಯ ಮದ್ಯದಂಗಡಿಯೊಂದರಲ್ಲಿ ಈ ಕೋತಿಯ ಕಾಟ ಹೆಚ್ಚಾಗಿದೆ. ಅಂಗಡಿಗೆ ಬಂದ ಗ್ರಾಹಕರ ಕೈಯಿಂದ ಬಾಟಲಿಯನ್ನು ಕಸಿದುಕೊಂಡು ಹೋಗುವುದಲ್ಲದೆ ಗಟಗಟನೆ ಕುಡಿಯಲು ಆರಂಭಿಸಿದೆ. ಅಂಗಡಿಯ ಮಾಲೀಕರಿಗೆ ಇದು ದೊಡ್ಡ ಚಿಂತೆಯಾಗಿದೆ. ಅನುರಾಗ ಮಿಶ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಈ ಕೋತಿಯ ಹಾವಳಿಯಿಂದ ಅಂಗಡಿ ಮಾಲೀಕರು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಈ ಕೋತಿಯನ್ನು ಅರಣ್ಯಕ್ಕೆ ಬಿಡಬೇಕೆಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ ಕೂಡ.

ಕೋತಿಗಳಿಗೂ ಮದ್ಯದ ರುಚಿ ಹತ್ತಿದರೆ ಏನು ಗತಿ ಎಂದು ನೆಟ್ಟಿಗರು ಕಳವಳಕ್ಕೆ ಈಡಾಗಿದ್ದಾರೆ. ಹಾಗೆಯೇ ತಮಾಷೆಯನ್ನೂ ಮಾಡಿದ್ದಾರೆ. ಕಲಿಯುಗದ ಕುಡುಕ ಕೋತಿ ಎಂದಿದ್ದಾರೆ ಒಬ್ಬರು. ಅದಕ್ಕೆ ಮದ್ಯ ತುಟ್ಟಿಯಾಗ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಶರೀಫಜ್ಜಾ ಸ್ವಲ್ಪ ಬುದ್ಧಿ ಕೊಡಪ್ಪಾ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:45 pm, Wed, 2 November 22

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್