Viral Video: ಚಲಿಸುವ ರೈಲಿನಿಂದ ಬಿದ್ದ ತಾಯಿ-ಮಗುವನ್ನು ಕಾಪಾಡಿದ ಯೋಧರು; ವಿಡಿಯೋ ವೈರಲ್
ಮಹಿಳೆ ಮತ್ತು ಆಕೆ ಮಗು ರೈಲು ಹತ್ತಲು ಪ್ರಯತ್ನಿಸಿದಾಗ ಕಾಲು ಜಾರಿ ರೈಲ್ವೆ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದರು. ಅಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ನಿಂದ ವೇಗವಾಗಿ ಚಲಿಸಿದ್ದು, ತಕ್ಷಣ ಓಡಿಬಂದ ಎಚ್‌ಪಿಎಫ್ ಸಿಬ್ಬಂದಿ ಕೂಡಲೆ ಅವರನ್ನು ರಕ್ಷಿಸಿದ್ದಾರೆ.
ಮುಂಬೈ: ಮುಂಬೈನ ಮನ್ಖುರ್ದ್ ರೈಲು ನಿಲ್ದಾಣದಲ್ಲಿ ಇಂದು ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬಿದ್ದ ಮಹಿಳೆ ಮತ್ತು ಆಕೆಯ ಮಗುವಿನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಅಪರಾಧ ವಿಭಾಗದ ಇಬ್ಬರು ಯೋಧರು ರಕ್ಷಿಸಿದ್ದಾರೆ. ಚಲಿಸುತ್ತಿದ್ದ ರೈಲಿಗೆ ಹತ್ತಲು ತಾಯಿ- ಮಗ ಹರಸಾಹಸ ಪಡುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ವೈರಲ್ ಆಗಿದೆ. ಮಹಿಳೆ ಮತ್ತು ಆಕೆ ಮಗು ರೈಲು ಹತ್ತಲು ಪ್ರಯತ್ನಿಸಿದಾಗ ಕಾಲು ಜಾರಿ ರೈಲ್ವೆ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದರು. ಅಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ನಿಂದ ವೇಗವಾಗಿ ಚಲಿಸಿದ್ದು, ತಕ್ಷಣ ಓಡಿಬಂದ ಎಚ್‌ಪಿಎಫ್ ಸಿಬ್ಬಂದಿ ಕೂಡಲೆ ಅವರನ್ನು ರಕ್ಷಿಸಿದ್ದಾರೆ.
#WATCH | Mumbai: Two jawans of the Crime Wing of RPF (Railway Protection Force) saved the lives of a woman and her child who fell off a moving local train due to the jostling of passengers after they boarded it at Mankhurd Railway Station.
(Source: RPF) pic.twitter.com/rHKyxhXYXT
— ANI (@ANI) November 2, 2022
ಇದನ್ನೂ ಓದಿ: ಚಾಕೊಲೇಟ್ ಕದ್ದ ವಿಡಿಯೋ ವೈರಲ್, ಮನನೊಂದು ವಿದ್ಯಾರ್ಥಿನಿಗೆ ಆತ್ಮಹತ್ಯೆಗೆ ಶರಣು
ತಾಯಿ ಮತ್ತು ಮಗುವಿನ ರಕ್ಷಣೆಗೆ ಇಬ್ಬರು ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಯೋಧರ ಮಾನವೀಯತೆ ಮತ್ತು ನಿಸ್ವಾರ್ಥ ಸೇವೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.