Chennai Rain Updates: ಚೆನ್ನೈನಲ್ಲಿ 30 ವರ್ಷಗಳಲ್ಲೇ ದಾಖಲೆಯ ಮಳೆ; ಇಬ್ಬರು ಸಾವು, ತಮಿಳುನಾಡಿನ ಶಾಲೆಗಳಿಗೆ ರಜೆ
Tamil Nadu Rain: ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 5ರವರೆಗೆ ಭಾರೀ ಮಳೆಯಾಗಲಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಚೆನ್ನೈನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಮಳೆಯ (Chennai Rain) ಅಬ್ಬರ ಜೋರಾಗಿದ್ದು, ಕಳೆದ 30 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಚೆನ್ನೈನಲ್ಲಿ ಮಂಗಳವಾರ 8.4 ಸೆಂ.ಮೀ ಮಳೆ ದಾಖಲಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಚೆನ್ನೈನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರೆ ಒಬ್ಬ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿದೆ. ಚೆನ್ನೈ ಮತ್ತು ತಮಿಳುನಾಡಿನ (Tamil Nadu Rains) ಇತರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಈಶಾನ್ಯ ಮುಂಗಾರು ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 5ರವರೆಗೆ ಭಾರೀ ಮಳೆಯಾಗಲಿದೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ವೆಲ್ಲೂರು, ತಿರುಪತ್ತೂರು, ಕೃಷ್ಣಗಿರಿ, ಧರ್ಮಪುರಿ ಮತ್ತು ಸೇಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚೆನ್ನೈ, ಚೆಂಗಲ್ಪಟ್ಟು, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಪೆರಂಬಲೂರು, ಅರಿಯಲೂರು, ತಂಜಾವೂರು, ತಿರುವರೂರು, ನಾಗಪಟ್ಟಣಂ, ಮೈಲಾಡುತುರೈ, ಪುದುಕ್ಕೊಟ್ಟೈ, ನಾಮಕ್ಕಲ್ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳಲ್ಲಿ ಕೂಡ ಮಳೆ ಹೆಚ್ಚಾಗಲಿದೆ.
#WATCH | Tamil Nadu: Several parts of Chennai experience waterlogging due to incessant rainfall over the past two days.
Visuals from Kolathur area in Chennai. pic.twitter.com/jXCYaQoIdy
— ANI (@ANI) November 2, 2022
ತಮಿಳುನಾಡಿನ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (RMC) ಮುನ್ಸೂಚನೆ ನೀಡಿದೆ. ತಮಿಳುನಾಡಿನ ಕೆಲವು ಭಾಗಗಳಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಇಂದು ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಇಂದು ಚೆನ್ನೈ, ರಾಣಿಪೇಟ್ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಿದೆ.
2 மணி நேர மழைதான் சிங்கார சென்னை பேக்கேஜ் OUT.#chennairains #ChennaiRain
— Prem Kumar ? (@premnba) November 1, 2022
ಇದನ್ನೂ ಓದಿ: Karnataka Rain: ಕರ್ನಾಟಕದ ಕರಾವಳಿ, ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಇಂದಿನಿಂದ ಮತ್ತೆ ಮಳೆಯ ಅಬ್ಬರ
ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈ ಮತ್ತು ಅದರ ಹೊರವಲಯದಲ್ಲಿ ಜನರು ಜಲಾವೃತಗೊಂಡ ಬೀದಿಗಳಲ್ಲಿ ಸಂಚರಿಸಲು ಪರದಾಡಿದರು. ಪ್ರಾದೇಶಿಕ ಹವಾಮಾನ ಇಲಾಖೆಯ ಪ್ರಕಾರ, ನವೆಂಬರ್ 2ರವರೆಗೆ ಚೆನ್ನೈನಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಮುಂದಿನ ಕೆಲವು ದಿನಗಳಲ್ಲಿ ಪಕ್ಕದ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಭಾರೀ ಮಳೆಯಾಗಲಿದೆ.
— Tamilnadu Weather-IMD (@ChennaiRmc) November 1, 2022
ಹವಾಮಾನ ಮುನ್ಸೂಚನೆಯ ಪ್ರಕಾರ ಕಡಲೂರು, ಮೈಲಾಡುತುರೈ, ತಂಜಾವೂರು, ನಾಗಪಟ್ಟಣಂ, ತಿರುವರೂರ್, ಪುದುಕ್ಕೊಟ್ಟೈ, ಶಿವಗಂಗಾ, ರಾಮನಾಥಪುರಂ, ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ, ನೀಲಗಿರಿ, ಕೊಯಮತ್ತೂರು, ತಿರುಪ್ಪೂರು, ದಿಂಡಿಗಲ್ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Bengaluru Rain: ಬೆಂಗಳೂರು, ಮಲೆನಾಡು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ; ತಗ್ಗು ಪ್ರದೇಶಗಳಲ್ಲಿ ಹೈ ಅಲರ್ಟ್
ಕನ್ಯಾಕುಮಾರಿ, ತಿರುನೆಲ್ವೇಲಿ, ತೂತುಕುಡಿ, ತೆಂಕಶಿ, ವಿರುಧುನಗರ, ರಾಮನಾಥಪುರಂ, ಶಿವಗಂಗಾ, ಮಧುರೈ, ಥೇಣಿ, ದಿಂಡಿಗಲ್, ನೀಲಗಿರಿ, ಕೊಯಮತ್ತೂರು, ತಿರುಪ್ಪೂರ್, ಪುದುಕ್ಕೊಟ್ಟೈ, ತಂಜಾವೂರು, ತಿರುವಾರೂರು, ಮೇಯಿಲಾಡುರೈ, ನಾಗಪಟ್ಟಣಂ, ಕಡಲ್‌ವೇಲಿ, ಕಾರೈಕಲ್, ಕಡಲೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Pathetic condition of Chennai just after single day rain. Searching for naysayers who kept ranting about Bengaluru rains few months back. #chennairains
— G Pradeep (@pradeep_gee) November 1, 2022
ಆಯಾ ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ವೆಲ್ಲೂರು, ಕಾಂಜಿಪುರಂ, ವಿಲುಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಮಾತ್ರ ಶಾಲೆಗಳು ಬಂದ್ ಆಗಿವೆ. ತಿರುಪತ್ತೂರು ಶಾಲೆಯ ವಿದ್ಯಾರ್ಥಿಗಳಿಗೆ 8ನೇ ತರಗತಿಯವರೆಗೆ ರಜೆ ಘೋಷಿಸಿ ತಿರುಪತ್ತೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.