ಚಾಕೊಲೇಟ್ ಕದ್ದ ವಿಡಿಯೋ ವೈರಲ್, ಮನನೊಂದು ವಿದ್ಯಾರ್ಥಿನಿಗೆ ಆತ್ಮಹತ್ಯೆಗೆ ಶರಣು
ಚಾಕೋಲೇಟ್ ಕದ್ದ ವಿಡಿಯೋ ವೈರಲ್ ಆಗಿದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ,
ಅಲಿಪುರ್ದಾರ್(ಕೊಲ್ಕತ್ತ): ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಎನ್ನುವಂತೆ ಒಂದು ಚಾಕೊಲೇಟ್ಗೆ ಹೋದ ಮರ್ಯಾದೆಗೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಷಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯಲ್ಲಿ ನಡೆದಿದೆ.
ಸಹೋದರಿಯೊಂದಿಗೆ ಶಾಪಿಂಗ್ ಮಾಲ್ ಗೆ ತೆರಳಿದ್ದ ಪದವಿ ವಿದ್ಯಾರ್ಥಿನಿಯೊಬ್ಬಳು ಈ ವೇಳೆ ಚಾಕೊಲೇಟ್ ಕದ್ದಿದ್ದು, ಇದರ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವಮಾನ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಲಿಪುರ್ ದೌರ್ ಜಿಲ್ಲೆಯ ಈ ವಿದ್ಯಾರ್ಥಿನಿ ಸೆಪ್ಟೆಂಬರ್ 29ರಂದು ಶಾಪಿಂಗ್ ಮಾಲ್ ಗೆ ತೆರಳಿದ್ದು, ಈ ವೇಳೆ ಚಾಕೊಲೇಟ್ ಕದ್ದಿದ್ದಳು. ಬಳಿಕ ಚಾಕೊಲೇಟ್ ಕದ್ದಿರುವುದನ್ನು ಅಂಗಡಿ ಮಾಡಿ ಸಿಸಿಟಿವಿಯಲ್ಲಿ ಮೋಡಿ ವಿದ್ಯಾರ್ಥಿನಿಯನ್ನು ವಿಚಾರಿಸಿದ್ದಾನೆ. ಆಕೆಗೆ ತಪ್ಪಿನ ಅರಿವಾಗಿ ಅಂಗಡಿ ಮಾಲೀಕ ಬಳಿ ಕ್ಷಮೆಯಾಚಿಸಿ ಕದ್ದ ಚಾಕೊಲೇಟ್ನ ಹಣವನ್ನೂ ಪಾವತಿಸಿದ್ದಾಳೆ. ಆ ವೇಳೆ ಅಲ್ಲೇ ಇದ್ದ ಒಂದು ಗುಂಪು ಅಂಗಡಿ ಮಾಲೀಕ ಹಾಗೂ ವಿದ್ಯಾರ್ಥಿನಿಯನ್ನು ಚಾಕೊಲೇಟ್ ಕದ್ದಿರುವ ಬಗ್ಗೆ ವಿಚಾರಿಸುವುದನ್ನು ವಿಡಿಯೋ ಮಾಡಿದೆ.
ಬಳಿಕ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದೆ. ವಿಡಿಯೋ ವೈರಲ್ ಅಗುತ್ತಿದ್ದಂತೆಯೇ ಮನನೊಂದು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ವಿದ್ಯಾರ್ಥಿನಿಯ ಸಾವನ್ನು ಖಂಡಿಸಿದ ಸ್ಥಳೀಯರು ಶಾಪಿಂಗ್ ಮಾಲ್‌ನ ಹೊರಗೆ ಪ್ರತಿಭಟನೆ ನಡೆಸಿದ್ದು, ವಿಡಿಯೋ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಜೈಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಸ್ ಪಲ್ಲಿಯಲ್ಲಿರುವ ಮನೆಯಲ್ಲಿ ಮೂರನೇ ವರ್ಷದ ಪದವಿ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜೈಗಾಂವ್‌ನ ಪೊಲೀಸ್ ಅಧಿಕಾರಿ ಪ್ರಬೀರ್ ದತ್ತಾ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ