AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ​ನಲ್ಲಿ ಮಹತ್ವದ ಬದಲಾವಣೆ: ಒಂದು ತಂಡಕ್ಕೆ ಎಷ್ಟು ಪಂದ್ಯಗಳು?

IPL 2026: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸದ್ಯಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಂತೆ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ.

IPL ​ನಲ್ಲಿ ಮಹತ್ವದ ಬದಲಾವಣೆ: ಒಂದು ತಂಡಕ್ಕೆ ಎಷ್ಟು ಪಂದ್ಯಗಳು?
Ipl 2026
ಝಾಹಿರ್ ಯೂಸುಫ್
|

Updated on: Mar 16, 2026 | 10:00 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯಂತೆ ಈ ಬಾರಿಯ ಐಪಿಎಲ್​ ಮಾರ್ಚ್ 28 ರಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ.

ಇತ್ತ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದರೂ ಬಿಸಿಸಿಐ ಇನ್ನೂ ಕೂಡ ಫಾರ್ಮ್ಯಾಟ್​ನ ಸ್ವರೂಪವನ್ನು ಬಹಿರಂಗಪಡಿಸಿಲ್ಲ ಎಂಬುದು ವಿಶೇಷ. ಅಂದರೆ ಈ ಬಾರಿ ಲೀಗ್​ ಹಂತದಲ್ಲಿ ಎಷ್ಟು ಮ್ಯಾಚ್​ಗಳನ್ನು ಆಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಪಂದ್ಯಗಳ ಹೆಚ್ಚಳಕ್ಕೆ ಡಿಮ್ಯಾಂಡ್:

ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-18 ಮತ್ತು 19 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೆ ಕಳೆದ ಬಾರಿ ಆಟಗಾರರ ಅಲಭ್ಯತೆಯ ಕಾರಣ 84 ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಆದರೆ ಈ ಬಾರಿ 84 ಮ್ಯಾಚ್​ಗಳ ಟೂರ್ನಿ ಆಯೋಜಿಸಲು ಪ್ರಸಾರಕ ಕಂಪೆನಿ ಸ್ಟಾರ್ ಸ್ಪೋರ್ಟ್ಸ್ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ.

ಇತ್ತ 84 ಮ್ಯಾಚ್​ಗಳನ್ನು ಆಯೋಜಿಸಿದರೆ ಫಾರ್ಮ್ಯಾಟ್ ಬದಲಾಗಲಿದೆ. ಅಂದರೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಬೇಕಾಗುತ್ತದೆ. ಹೀಗಾಗಿಯೇ ಬಿಸಿಸಿಐ ಇನ್ನೂ ಕೂಡ ಟೂರ್ನಿಯ ಸ್ವರೂಪವನ್ನು ಬಹಿರಂಗಪಡಿಸಿಲ್ಲ.

80+4 ಮ್ಯಾಚ್​ಗಳು:

ಐಪಿಎಲ್​ನಲ್ಲಿ ಪಂದ್ಯಗಳ ಹೆಚ್ಚಳವಾದರೆ ಪ್ರತಿಯೊಂದು ತಂಡವು ಒಟ್ಟು 16 ಲೀಗ್ ಪಂದ್ಯಗಳನ್ನು ಆಡಲಿದೆ. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ 10 ಮ್ಯಾಚ್​ಗಳು ಹೆಚ್ಚಾಗಲಿದೆ. ಅಂದರೆ ಕಳೆದ ಸೀಸನ್​ನಲ್ಲಿ 74 ಮ್ಯಾಚ್​ಗಳನ್ನು ಆಡಲಾಗಿತ್ತು.

ಇದೀಗ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ಆಯೋಜಿಸಿದರೆ 84 ಪಂದ್ಯಗಳ ಟೂರ್ನಿ ನಡೆಯಲಿದೆ. ಇಲ್ಲಿ ಲೀಗ್ ಹಂತದಲ್ಲಿ 80 ಪಂದ್ಯಗಳು ನಡೆದರೆ, ಪ್ಲೇಆಫ್ ಹಂತದಲ್ಲಿ 4 ಮ್ಯಾಚ್​ಗಳನ್ನು ಆಡಲಾಗುತ್ತದೆ.

ಪಂದ್ಯಗಳ ವಿಂಗಡಣೆ ಹೇಗೆ?

  • 84 ಪಂದ್ಯಗಳ ಟೂರ್ನಿ ಆಯೋಜಿಸಬೇಕಿದ್ದರೆ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬೇಕಾಗುತ್ತದೆ.
  • ಇಲ್ಲಿ ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ತಂಡಗಳೊಂದಿಗೆ ತಲಾ 2 ಪಂದ್ಯಗಳನ್ನು (ಹೋಮ್ & ಅವೇ) ಆಡಲಿದೆ.
  • ಉಳಿದ ಪಂದ್ಯಗಳನ್ನು ಎರಡನೇ ಗುಂಪಿನ ತಂಡಗಳೊಂದಿಗೆ ಆಡುವ ಮೂಲಕ ಒಟ್ಟು 16 ಪಂದ್ಯಗಳನ್ನು ಆಡಲಿದೆ.

ಅಂದರೆ ಇಲ್ಲಿ ಒಂದು ಗ್ರೂಪ್​ನಲ್ಲಿ 5 ತಂಡಗಳಿರಲಿದೆ. ಈ ಗ್ರೂಪ್​ನಲ್ಲಿರುವ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿದೆ. ಈ ಮೂಲಕ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ.

ಹಾಗೆಯೇ ಮತ್ತೊಂದು ಗ್ರೂಪ್​ನಲ್ಲಿರುವ 5 ತಂಡಗಳ ಪೈಕಿ 3 ತಂಡಗಳ ವಿರುದ್ಧ ತಲಾ 2 ಬಾರಿ (6 ಪಂದ್ಯ) ಮತ್ತು ಉಳಿದ 2 ತಂಡಗಳ ವಿರುದ್ಧ ತಲಾ 1 ಬಾರಿ (2 ಪಂದ್ಯ) ಆಡಲಿದ್ದಾರೆ. ಈ ಮೂಲಕ ಒಟ್ಟು 16 ಪಂದ್ಯಗಳನ್ನಾಡಬಹುದು.

ಇದನ್ನೂ ಓದಿ: IPL 2026: ಈ ಬಾರಿಯ ಐಪಿಎಲ್​ನಲ್ಲಿ RCBಗೆ ‘ಗೋಲ್ಡನ್’ ಗೌರವ!

ಆದರೆ ಇತ್ತ ಮೊದಲ ಹಂತದ ವೇಳಾಪಟ್ಟಿ ಪ್ರಕಟಣೆಯ ವೇಳೆ ಬಿಸಿಸಿಐ ತಂಡಗಳ ಗ್ರೂಪ್​ಗಳನ್ನು ಪ್ರಕಟಿಸಿಲ್ಲ ಎಂಬುದು ವಿಶೇಷ. ಹೀಗಾಗಿಯೇ ಈ ಬಾರಿ ಒಂದು ತಂಡದ ಎಷ್ಟು ಪಂದ್ಯಗಳನ್ನಾಡಲಿದೆ ಎಂಬುದು ಅಧಿಕೃತವಾಗಿ ಖಚಿತವಾಗಲು ದ್ವಿತೀಯ ಹಂತದ ವೇಳಾಪಟ್ಟಿ ಪ್ರಕಟವಾಗುವವರೆಗೆ ಕಾಯಲೇಬೇಕು.

Follow Us
ಇಲ್ಲಿ ನಮ್ಮ ಮಾತಿಗೆ ಗೌರವವೇ ನೀಡುತ್ತಿಲ್ಲ ಅಧಿಕಾರಿಗಳು
ಇಲ್ಲಿ ನಮ್ಮ ಮಾತಿಗೆ ಗೌರವವೇ ನೀಡುತ್ತಿಲ್ಲ ಅಧಿಕಾರಿಗಳು
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
ಕೊಡವ ಭಾಷೆಯಲ್ಲಿ ವಿಜಯ್ ದೇವರಕೊಂಡ ಬಗ್ಗೆ ಮಾತಾಡಿದ ರಶ್ಮಿಕಾ ಮಂದಣ್ಣ
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು