AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು

ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು

ರಾಜೇಶ್ ದುಗ್ಗುಮನೆ
|

Updated on:Aug 10, 2026 | 11:22 AM

Share

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಅದ್ಧೂರಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಭಾಗವಹಿಸಿ, ನಟಿ ರಾಧಿಕಾ ಪಂಡಿತ್ ಬಗ್ಗೆ ಅತ್ಯಂತ ಪ್ರೀತಿ ಮತ್ತು ಗೌರವದ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಮೆಚ್ಚುಗೆ ಸಿಕ್ಕಿದೆ.

‘ಟಾಕ್ಸಿಕ್’ ಟ್ರೇಲರ್ ಲಾಂಚ್ ಈವೆಂಟ್​​ ಅಲ್ಲಿ ಯಶ್ ಬಗ್ಗೆ ಎಲ್ಲರೂ ಮಾತನಾಡಿದರು. ಆದರೆ, ನಯನತಾರಾ ಅವರು ಯಶ್​​ಗೆ ಶಕ್ತಿಯಾಗಿ ನಿಂತ ರಾಧಿಕಾ ಬಗ್ಗೆ ಮಾತನಾಡಿದರು. ವೇದಿಕೆ ಮೇಲೆ ಮಾತನಾಡಿದ ನಯನತಾರಾ, ‘ಸಿನಿಮಾ ಹಿಟ್ ಆದಾಗ ಪ್ರತಿಯೊಬ್ಬರೂ ಚಿತ್ರದ ನಟ-ನಟಿಯರು, ತಾಂತ್ರಿಕ ತಂಡ ಮತ್ತು ಅವರ ಕಠಿಣ ಪರಿಶ್ರಮದ ಬಗ್ಗೆ ಮಾತನಾಡುತ್ತಾರೆ. ಆದರೆ ಆ ಯಶಸ್ಸಿನ ಹಿನ್ನೆಲೆಯಲ್ಲಿ ಕುಟುಂಬದವರು ಮಾಡುವ ತ್ಯಾಗ ಮತ್ತು ಬೆಂಬಲದ ಬಗ್ಗೆ ಯಾರೂ ಮಾತನಾಡುವುದಿಲ್ಲ’ ಎಂದರು.

ಯಶ್ ಅವರ ಪಕ್ಕದಲ್ಲಿ ಕುಳಿತಿದ್ದ ರಾಧಿಕಾ ಪಂಡಿತ್ ಅವರನ್ನು ತೋರಿಸುತ್ತಾ, ‘ರಾಧಿಕಾ ಅವರು ಯಶ್ ಅವರ ಪಾಲಿನ ಅತಿ ದೊಡ್ಡ ಶಕ್ತಿ. ಯಶ್ ಅವರ ಕನಸು ಮತ್ತು ದೂರದೃಷ್ಟಿಗಾಗಿ ರಾಧಿಕಾ ತಮ್ಮ ಸಮಯವನ್ನು ತ್ಯಾಗ ಮಾಡಿ ನೀಡುತ್ತಿರುವ ಬೆಂಬಲ ನಿಜಕ್ಕೂ ಅದ್ಭುತವಾದದ್ದು. ರಾಧಿಕಾ ಅವರ ಮೇಲೆ ನನಗೆ ಅಪಾರವಾದ ಗೌರವ ಹಾಗೂ ಪ್ರೀತಿಯಿದೆ’ ಎಂದು ಹೇಳಿದರು.

ನಯನತಾರಾ ಅವರ ಈ ಭಾವುಕ ಮಾತುಗಳನ್ನು ಕೇಳಿ ಸಭೆಯಲ್ಲಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಮುಗುಳ್ನಕ್ಕು ಧನ್ಯವಾದ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Aug 10, 2026 11:21 AM

Follow Us