Fire Accident: ಪುಣೆಯ ರೆಸ್ಟೋರೆಂಟ್​​ನಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಮೇಲಿನ ಮಹಡಿ

ಪುಣೆಯ ಮಾರ್ವೆಲ್ ವಿಸ್ಟಾ ವಾಣಿಜ್ಯ ಕಟ್ಟಡದ 7ನೇ ಮಹಡಿಯಲ್ಲಿರುವ ವೆಜಿಟಾ ರೆಸ್ಟೋರೆಂಟ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. 6 ಅಗ್ನಿಶಾಮಕ ವಾಹನಗಳು ಮತ್ತು ಮೂರು ನೀರಿನ ಟ್ಯಾಂಕರ್‌ಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿವೆ.

Fire Accident: ಪುಣೆಯ ರೆಸ್ಟೋರೆಂಟ್​​ನಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಮೇಲಿನ ಮಹಡಿ
ಪುಣೆಯಲ್ಲಿ ಬೆಂಕಿ ಅವಘಡ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 01, 2022 | 10:08 AM

ಪುಣೆ: ಮಹಾರಾಷ್ಟ್ರದ ಪುಣೆಯ ಲುಲ್ಲಾನಗರ (Lullanagar) ಪ್ರದೇಶದ ಕಟ್ಟಡದ ಮೇಲಿನ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಇಂದು (ಮಂಗಳವಾರ) ಮುಂಜಾನೆ ಭಾರೀ ಬೆಂಕಿ (Fire Accident) ಕಾಣಿಸಿಕೊಂಡಿದೆ. ಬೆಳಗಿನ ಜಾವ ಈ ದುರಂತ ಸಂಭವಿಸಿದ್ದರಿಂದ ರೆಸ್ಟೋರೆಂಟ್​ನೊಳಗೆ ಯಾರೂ ಇರಲಿಲ್ಲ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ತಕ್ಷಣ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದಾರೆ.

6 ಅಗ್ನಿಶಾಮಕ ವಾಹನಗಳು ಮತ್ತು ಮೂರು ನೀರಿನ ಟ್ಯಾಂಕರ್‌ಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿವೆ. ಮಾರ್ವೆಲ್ ವಿಸ್ಟಾ ವಾಣಿಜ್ಯ ಕಟ್ಟಡದ 7ನೇ ಮಹಡಿಯಲ್ಲಿರುವ ವೆಜಿಟಾ ರೆಸ್ಟೋರೆಂಟ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರು- ದೆಹಲಿ ವಿಮಾನದಲ್ಲಿ ಬೆಂಕಿಯ ವಿಡಿಯೋ ವೈರಲ್; ವರದಿ ಕೇಳಿದ ವಿಮಾನಯಾನ ಸಚಿವಾಲಯ

6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ವರದಿಯ ಪ್ರಕಾರ, ಕ್ರಿಕೆಟಿಗ ಜಹೀರ್ ಖಾನ್ ಅವರ ರೆಸ್ಟೋರೆಂಟ್ ಇದೇ ಕಟ್ಟಡದ ನೆಲ ಮಹಡಿಯಲ್ಲಿದೆ.

ಬೆಂಕಿ ಅನಾಹುತಕ್ಕೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ. ಬೆಂಕಿ ಅವಘಡದಲ್ಲಿ ರೆಸ್ಟೋರೆಂಟ್‌ಗೆ ಸಾಕಷ್ಟು ಹಾನಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ