ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ
Guinness World Record : ಇದೀಗ ಗಿನ್ನೀಸ್ ವಿಶ್ವ ದಾಖಲೆ ಪಡೆದಿರುವ ಈ ವೈದ್ಯರು ಈಗಲೂ ನಿವೃತ್ತಿ ಹೊಂದಲು ಆಲೋಚಿಸಿಲ್ಲ. ಇಷ್ಟೇ ಅಲ್ಲ, 89 ವರ್ಷದ ಇವರ ಪತ್ನಿ ಈತನಕವೂ ಮನೋವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ!
Viral : 60ರ ಗಡಿ ತಲುಪುತ್ತಿದ್ದಂತೆ ಎಲ್ಲರೂ ವಿಶ್ರಾಂತ ಜೀವನಕ್ಕೆ ಜಾರಿಬಿಡುತ್ತಾರೆ. ಆದರೆ ಈ ವೈದ್ಯರು ಮಾತ್ರ 100 ವರ್ಷಕ್ಕೆ ಕಾಲಿಟ್ಟರೂ ತಮ್ಮ ವೃತ್ತಿಯಲ್ಲಿಯೇ ತನ್ಮಯರಾಗಿದ್ದಾರೆ. ಈ ಮೂಲಕ ವಿಶ್ವದ ಅತ್ಯಂತ ಹಿರಿಯ ವೈದ್ಯ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನೀಸ್ ವಿಶ್ವ ದಾಖಲೆಗೆ ಭಾಜನರಾಗಿದ್ದಾರೆ. ಓಹಿಯೋದ ಡಾ. ಹೊವಾರ್ಡ್ ಟಕರ್ ನರಶಸ್ತ್ರಚಿಕಿತ್ಸಕ. ಇವರು ಈತನಕವೂ ನಿವೃತ್ತಿ ಹೊಂದಲು ಆಲೋಚಿಸಿಲ್ಲ ಎಂದೇ ಹೇಳುತ್ತಾರೆ. ಇಷ್ಟೇ ಅಲ್ಲ, 89 ವರ್ಷದ ಇವರ ಪತ್ನಿ ಡಾ. ಸಾರಾ ಸ್ಯೂ ಸೀಗಲ್ ಕೂಡ ಇನ್ನೂ ಮನೋವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ!
ಹೊವಾರ್ಡ್ ಜುಲೈನಲ್ಲಿ 100ನೇ ವಯಸ್ಸಿಗೆ ಕಾಲಿಟ್ಟರು. ಆಗಲೇ ಕೊವಿಡ್ಗೆ ಕೂಡ ತುತ್ತಾದರು. ಆ ಸಮಯದಲ್ಲಿಯೂ ತನ್ನ ರೋಗಿಗಳಿಗೆ ಆನ್ಲೈನ್ ಮೂಲಕ ವೈದ್ಯಕೀಯ ಸಲಹೆ ಕೊಡುವುದನ್ನು ಇವರು ಮುಂದುವರಿಸಿದರು. ‘1947 ರಲ್ಲಿ ನಾನು ವೃತ್ತಿಜೀವನಕ್ಕೆ ಕಾಲಿಟ್ಟಾಗಿನಿಂದ ಈತನಕವೂ ಹೀಗೇ ಇದ್ದೇನೆ. ನನ್ನ ಸಂತೃಪ್ತ, ಸಂತೋಷಕರ ಜೀವನ ಮತ್ತು ಸುದೀರ್ಘ ವೃತ್ತಿ ಜೀವನಕ್ಕೆ ದೊರೆತ ಏಕೈಕ ಗೌರವವೆಂದು ಪ್ರಸ್ತುತ ಗಿನ್ನೀಸ್ ವಿಶ್ವ ದಾಖಲೆಯ ಮಾನ್ಯತೆಯನ್ನು ಪರಿಭಾವಿಸುತ್ತೇನೆ. ಪ್ರತಿದಿನವೂ ನನ್ನ ರೋಗಿಗಳು, ಸಹೋದ್ಯೋಗಿಗಳಿಂದ ಕಲಿಯುವುದನ್ನು ಈಗಲೂ ಮುಂದುವರಿಸಿಕೊಂಡೇ ಜೀವಿಸುತ್ತೇನೆ’ ಎಂದಿದ್ದಾರೆ ಹೊವಾರ್ಡ್.
ಅತ್ಯಂತ ಹಿರಿಯ ಕ್ಷೌರಿಕರೊಬ್ಬರು ಇತ್ತೀಚೆಗೆ ನಿಧನಗೊಂಡ ಸುದ್ದಿಯನ್ನು ಓದಿದ ನಂತರ ಹೊವಾರ್ಡ್ ಅವರಿಗೆ, ತಾನೂ ಯಾಕೆ ಗಿನ್ನೀಸ್ ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಬಾರದು ಎನ್ನಿಸಿದೆ. ಮೊಮ್ಮಗನ ಸಹಾಯದಿಂದ ಅರ್ಜಿ ಸಲ್ಲಿಸಿದ್ದಾರೆ. ನಂತರ ಈ ದಾಖಲೆ ಇವರ ಮುಡಿಗೇರುತ್ತಿದ್ದಂತೆ ಇವರ ಆಪ್ತರು, ಕುಟುಂಬಸ್ಥರು ಸಂತೋಷದಿಂದ ಭಾವುಕರಾಗಿದ್ದಾರೆ.
ಬದುಕು ಎಷ್ಟೊಂದು ವಿಶಾಲವೂ ಸುದೀರ್ಘವೂ ಆಗಿದೆಯಲ್ಲವೆ? ನಮ್ಮ ಜಗತ್ತಿನಲ್ಲಿ ನಾವು ಮುಳುಗಿ ಕೆಲಸ ಮಾಡುತ್ತಿದ್ದರೆ…
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:36 pm, Thu, 27 October 22