Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್ ತಡವಾಗಿದ್ದಕ್ಕೆ ಯುವತಿಗೆ ಮಿಸ್ ಆಯ್ತು ವಿಮಾನ; ಉಬರ್ ಸಂಸ್ಥೆಗೆ 20,000 ರೂ. ದಂಡ!

ಮುಂಬೈನ ಗ್ರಾಹಕ ನ್ಯಾಯಾಲಯವು ಉಬರ್ ಇಂಡಿಯಾಗೆ ಕ್ಯಾಬ್ ಸೇವೆಯಿಂದ ಉಂಟಾದ ವಿಳಂಬದಿಂದಾಗಿ ತನ್ನ ವಿಮಾನವನ್ನು ಮಿಸ್ ಮಾಡಿಕೊಂಡ ಯುವತಿಗೆ 20,000 ರೂ. ದಂಡವನ್ನು ಪಾವತಿಸುವಂತೆ ಆದೇಶಿಸಿದೆ.

ಕ್ಯಾಬ್ ತಡವಾಗಿದ್ದಕ್ಕೆ ಯುವತಿಗೆ ಮಿಸ್ ಆಯ್ತು ವಿಮಾನ; ಉಬರ್ ಸಂಸ್ಥೆಗೆ 20,000 ರೂ. ದಂಡ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 27, 2022 | 11:55 AM

ಮುಂಬೈ: ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದ ಮುಂಬೈನ ಯುವತಿಯೊಬ್ಬರು ಏರ್​​ಪೋರ್ಟ್​ಗೆ ಹೋಗಲು ಉಬರ್ ಕ್ಯಾಬ್ (Uber Cab) ಬುಕ್ ಮಾಡಿದ್ದರು. ಆದರೆ, ಉಬರ್ ಕ್ಯಾಬ್ ಚಾಲಕ ಬರುವುದು ತಡವಾಗಿದ್ದರಿಂದ ಆಕೆಯ ವಿಮಾನ ಮಿಸ್ ಆಗಿತ್ತು. ಇದರಿಂದಾಗಿ ತುರ್ತು ಕೆಲಸದ ನಿಮಿತ್ತ ಬೇರೆ ಊರಿಗೆ ಹೊರಟಿದ್ದ ಆಕೆ ಆ ದಿನ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಉಬರ್ ಸಂಸ್ಥೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಆಕೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ತಡವಾಗಿ ಕ್ಯಾಬ್ ಸೇವೆಯನ್ನು ನೀಡಿದ ಕಾರಣದಿಂದ ಆಕೆಯ ವಿಮಾನ ಮಿಸ್ ಆಗಿದ್ದಕ್ಕೆ ಆ ಯುವತಿಗೆ 20,000 ರೂ. ಪರಿಹಾರ ಧನವನ್ನು ನೀಡಲು ಉಬರ್​​ಗೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

ಮುಂಬೈನ ಗ್ರಾಹಕ ನ್ಯಾಯಾಲಯವು ಉಬರ್ ಇಂಡಿಯಾಗೆ ಕ್ಯಾಬ್ ಸೇವೆಯಿಂದ ಉಂಟಾದ ವಿಳಂಬದಿಂದಾಗಿ ತನ್ನ ವಿಮಾನವನ್ನು ಮಿಸ್ ಮಾಡಿಕೊಂಡ ಯುವತಿಗೆ 20,000 ರೂ. ದಂಡವನ್ನು ಪಾವತಿಸುವಂತೆ ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಮೊತ್ತದ ಅರ್ಧದಷ್ಟು ಮೊತ್ತವು ಆ ಯುವತಿಯ ಮಾನಸಿಕ ಒತ್ತಡಕ್ಕೆ, ಉಳಿದ 10,000 ರೂ. ಆಕೆ ಮಾಡಿದ ವ್ಯಾಜ್ಯದ ವೆಚ್ಚಕ್ಕಾಗಿ ನೀಡಲು ಸೂಚಿಸಲಾಗಿದೆ. ಕವಿತಾ ಶರ್ಮ ಎಂಬ ವಕೀಲೆ ತನಗಾದ ಅನ್ಯಾಯಕ್ಕೆ 2018ರಿಂದ ಹೋರಾಡುತ್ತಿದ್ದರು. ಕೊನೆಗೂ ಅವರಿಗೆ ಜಯ ಲಭಿಸಿದೆ.

ಇದನ್ನೂ ಓದಿ: ಓಲಾ, ಉಬರ್​ಗೆ ಮೂಗುದಾರ: 2 ಕಿಮೀಗೆ 30 ರೂಪಾಯಿ ನಿಗದಿ, ಶೀಘ್ರ ಹೊಸ ದರಪಟ್ಟಿ

2018ರ ಜೂನ್‌ನಲ್ಲಿ ಮುಂಬೈನಿಂದ ಚೆನ್ನೈಗೆ ಹೋಗಲು ಅವರು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ ಕ್ಯಾಬ್ ಬರುವುದು ತಡವಾಗಿದ್ದರಿಂದ ಸಮಯಕ್ಕೆ ವಿಮಾನ ನಿಲ್ದಾಣವನ್ನು ತಲುಪಲು ಅವರಿಗೆ ಸಾಧ್ಯವಾಗಲಿಲ್ಲ. 2018ರ ಜೂನ್ 12ರಂದು ಸಂಜೆ 5.50ಕ್ಕೆ ವಿಮಾನವು ಹೊರಡಬೇಕಿತ್ತು. ತನ್ನ ಮನೆಯಿಂದ 36 ಕಿಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಆಕೆ ಮಧ್ಯಾಹ್ನ 3.29ಕ್ಕೆ ಕ್ಯಾಬ್ ಅನ್ನು ಬುಕ್ ಮಾಡಿದ್ದರು. ಆದರೆ ಆ ಚಾಲಕ 14 ನಿಮಿಷಗಳ ನಂತರ ಅವರಿದ್ದ ಜಾಗಕ್ಕೆ ಬಂದನು. ಅದಕ್ಕೂ ಮೊದಲು ಎಷ್ಟೇ ಬಾರಿ ಕರೆ ಮಾಡಿದರೂ ಆತ ಸ್ವೀಕರಿಸಿರಲಿಲ್ಲ.

ಇದನ್ನೂ ಓದಿ: ಕುಡಿದ ಅಮಲಿನಲ್ಲಿ ವಿಮಾನ ಸಿಬ್ಬಂದಿಯ ಬೆರಳು ಕಚ್ಚಿದ ಪ್ರಯಾಣಿಕನ ವಿಡಿಯೋ ವೈರಲ್

ಫೋನ್ ಕರೆಯಲ್ಲಿದ್ದ ಕಾರಣ ಚಾಲಕ ಟ್ರಿಪ್ ಆರಂಭಿಸಲು ತಡಮಾಡಿದ್ದಾನೆ ಎಂದು ಕವಿತಾ ಶರ್ಮ ದೂರಿನಲ್ಲಿ ತಿಳಿಸಿದ್ದಾರೆ. ತಡವಾಗಿ ಬಂದಿದ್ದು ಮಾತ್ರವಲ್ಲದೆ ವಿಮಾನ ನಿಲ್ದಾಣಕ್ಕೆ ಹೋಗುವಾಗ ಆತ ಯಾವುದೋ ತಪ್ಪು ಮಾರ್ಗದಲ್ಲಿ ಹೋಗಿ ಇನ್ನೂ 15-20 ನಿಮಿಷ ತಡವಾಗಿ ಏರ್​ಪೋರ್ಟ್​ ತಲುಪಿದನು. ಕವಿತಾ ಶರ್ಮಾ ವಿಮಾನ ನಿಲ್ದಾಣವನ್ನು ತಲುಪುವ ಹೊತ್ತಿಗೆ, ಆಗಲೇ ಸಂಜೆ 5.23 ಆಗಿತ್ತು. ಅಷ್ಟರಲ್ಲಾಗಲೇ ಚೆಕ್ ಇನ್ ಮುಗಿದಿದ್ದರಿಂದ ಅವರಿಗೆ ಆ ವಿಮಾನದಲ್ಲಿ ಹೋಗಲು ಸಾಧ್ಯವಾಗಲಿಲ್ಲ.

ಆ ಕ್ಯಾಬ್ ಬುಕ್ ಮಾಡುವಾಗ ವಿಮಾನ ನಿಲ್ದಾಣಕ್ಕೆ 563 ರೂ. ಎಂದು ತೋರಿಸಿತ್ತು. ಆದರೆ, ಆ ಕ್ಯಾಬ್ ಚಾಲಕ ತಪ್ಪು ದಾರಿಯಲ್ಲಿ ಕರೆದುಕೊಂಡು ಬಂದಿದ್ದರಿಂದ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಷ್ಟೇ ಅಲ್ಲದೆ ಕವಿತಾ ಶರ್ಮ ಅವರಿಗೆ 703 ರೂ. ಬಿಲ್ ಮಾಡಿತು. ಇದರಿಂದ ಕವಿತಾ ಶರ್ಮ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Thu, 27 October 22

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ