AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ನೇಣು ಹಾಕಿಕೊಂಡ ಹೆಂಡತಿಯನ್ನು ಕಾಪಾಡುವ ಬದಲು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಾ ಕುಳಿತ ಗಂಡ!

ಮಹಿಳೆಯೊಬ್ಬರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋವೊಂದು ಹೊರಬಿದ್ದಿದ್ದು, ಆಕೆಯನ್ನು ರಕ್ಷಿಸುವ ಬದಲು ಆಕೆಯ ಪತಿ ಅದನ್ನು ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದ.

Shocking News: ನೇಣು ಹಾಕಿಕೊಂಡ ಹೆಂಡತಿಯನ್ನು ಕಾಪಾಡುವ ಬದಲು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಾ ಕುಳಿತ ಗಂಡ!
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on: Oct 27, 2022 | 9:57 AM

Share

ಉತ್ತರ ಪ್ರದೇಶ: ಹೆಂಡತಿ ಬೆಡ್​ರೂಂನಲ್ಲಿರುವ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿದ್ದರೆ ಆಕೆಯ ಗಂಡ ಅದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡುತ್ತಾ ಕುಳಿತಿರುವ ಆಘಾತಕಾರಿ ಘಟನೆಯೊಂದು ಕಾನ್ಪುರದಲ್ಲಿ (Kanpur)  ನಡೆದಿದೆ. ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಆಕೆಯನ್ನು ಕಾಪಾಡುವುದರ ಬದಲು ಅದನ್ನು ವಿಡಿಯೋ ಮಾಡುತ್ತಿದ್ದ ಪತಿ ಮಹಾಶಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮಹಿಳೆಯೊಬ್ಬರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋವೊಂದು ಹೊರಬಿದ್ದಿದ್ದು, ಆಕೆಯನ್ನು ರಕ್ಷಿಸುವ ಬದಲು ಆಕೆಯ ಪತಿ ಅದನ್ನು ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದ. ಆತನ ಹೆಂಡತಿ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ ಎರಡನೇ ಪ್ರಯತ್ನದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.

ಆ ಮಹಿಳೆಯ ತಂದೆ ರಾಜ್ ಕಿಶೋರ್ ಗುಪ್ತಾ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ಅಳಿಯ ಸಂಜೀವ್ ಗುಪ್ತಾ ಮಧ್ಯಾಹ್ನ ಫೋನ್ ಮಾಡಿ ನನ್ನ ಮಗಳು ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿಸಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್: ಸಾವಿಗೂ ಮುನ್ನ ಸ್ನೇಹಿತನಿಗೆ ಕಳಿಸಿದ್ದ ಸಂದೇಶದಲ್ಲಿತ್ತು ಕಾರಣ

“ನಾನು ಗುಲ್‌ಮೊಹರ್ ನಗರದಲ್ಲಿರುವ ಆಕೆಯ ಮನೆಗೆ ಧಾವಿಸಿ ನೋಡಿದಾಗ ಹಾಸಿಗೆಯ ಮೇಲೆ ಆಕೆಯ ಶವವಿತ್ತು. ಸಂಜೀವ್ ಆಕೆಯ ಎದೆಯನ್ನು ಪಂಪ್ ಮಾಡುತ್ತಿದ್ದರು. ಆದರೆ ಅವಳು ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಳು. ಇದೆಲ್ಲ ಹೇಗಾಯ್ತು ಎಂದು ನಾನು ಸಂಜೀವ್‌ನನ್ನು ವಿಚಾರಿಸಿದಾಗ, ಅವನು ನನಗೆ ವೀಡಿಯೊ ತೋರಿಸಿದನು. ಆ ವಿಡಿಯೋ ನೋಡಿದ ನನಗೆ ಅವನು ಅವಳನ್ನು ಉಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ತಿಳಿದು ಆಘಾತವಾಯಿತು. ಆ ಘಟನೆಯನ್ನು ರೆಕಾರ್ಡ್ ಮಾಡುವ ಬದಲು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದರೆ ಆಕೆ ಬದುಕುಳಿಯುತ್ತಿದ್ದಳು” ಎಂದು ಅವರು ಹೇಳಿದ್ದಾರೆ.

ಮೃತನ ಕುಟುಂಬದವರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಜೀವ್ ಗುಪ್ತಾ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರೂ 4 ವರ್ಷಗಳ ಹಿಂದೆ ಮದುವೆಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ