ಭೋಪಾಲ್​ ನೀರು ಸಂಸ್ಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ; ಹಲವರ ಸ್ಥಿತಿ ಗಂಭೀರ

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಈ ಘಟನೆ ನಡೆದಿದ್ದು, ಅನಿಲ ಸೋರಿಕೆಯಿಂದಾಗಿ ಅನೇಕ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.

ಭೋಪಾಲ್​ ನೀರು ಸಂಸ್ಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆ; ಹಲವರ ಸ್ಥಿತಿ ಗಂಭೀರ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Oct 27, 2022 | 8:28 AM

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ (Bhopal) ನೀರು ಸಂಸ್ಕರಣಾ ಘಟಕದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಉಸಿರಾಟದ ತೊಂದರೆಯಿಂದ ಬುಧವಾರ ತಡರಾತ್ರಿ ಹಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರ ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಈ ಘಟನೆ ನಡೆದಿದ್ದು, ಅನಿಲ ಸೋರಿಕೆಯಿಂದಾಗಿ ಅನೇಕ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಭೋಪಾಲ್ ಜಿಲ್ಲಾಧಿಕಾರಿ ಹಾಗೂ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಪ್ರದೇಶದಲ್ಲಿನ ನೀರು ಸಂಸ್ಕರಣಾ ಘಟಕದಲ್ಲಿ ಅಳವಡಿಸಲಾಗಿರುವ 900 ಕೆಜಿ ತೂಕದ ಕ್ಲೋರಿನ್ ಗ್ಯಾಸ್ ಸಿಲಿಂಡರ್‌ನ ನಳಿಕೆಯು ಅಸಮರ್ಪಕ ಕಾರ್ಯದಿಂದ ಸೋರಿಕೆಯಾಗಲು ಪ್ರಾರಂಭಿಸಿತ್ತು.

ಈ ಪ್ರದೇಶದಲ್ಲಿ ಗಂಭೀರವಾಗಿದ್ದ ಗಾಯಗೊಂಡಿದ್ದ ಸುಮಾರು ಮೂವರನ್ನು ಉಸಿರಾಟದ ತೊಂದರೆಯಿಂದ ಹಮಿಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Crime News: ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಲಕ್ನೋದಲ್ಲಿ ಓರ್ವ ಸಾವು; 8 ತಿಂಗಳ ಮಗು ಸೇರಿ ಐವರಿಗೆ ಗಾಯ

ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಶ್ವಾಸ್ ಸಾರಂಗ್ ಮತ್ತು ಭೋಪಾಲ್ ಮೇಯರ್ ಮಾಲ್ತಿ ರೈ ಅವರು ಹಮಿಡಿಯಾ ಆಸ್ಪತ್ರೆಗೆ ಆಗಮಿಸಿ ಗಾಯಗೊಂಡವರ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಂದು (ಅಕ್ಟೋಬರ್ 27) ಆ ಪ್ರದೇಶದಲ್ಲಿ ನೀರು ಸರಬರಾಜು ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ಮತ್ತು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಟ್ವೀಟ್ ಮಾಡಿದ್ದಾರೆ. “ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಮದರ್ ಇಂಡಿಯಾ ಕಾಲೋನಿಯಲ್ಲಿ, ಕ್ಲೋರಿನ್ ಗ್ಯಾಸ್ ಟ್ಯಾಂಕ್ ಸೋರಿಕೆಯಿಂದಾಗಿ ಕಣ್ಣುಗಳು, ಉಸಿರಾಟದ ತೊಂದರೆಗಳು ಮತ್ತು ಕೆಲವರು ಆಸ್ಪತ್ರೆಗೆ ದಾಖಲಾದ ಸುದ್ದಿ ಮುನ್ನೆಲೆಗೆ ಬಂದಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ