ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಲ್ಲೇ ಹೊಸ ಸಮಿತಿ ರಚನೆ: ಕರ್ನಾಟಕದ ಮೂವರಿಗೆ ಸ್ಥಾನ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಲ್ಲೇ ಹೊಸ ಸಮಿತಿ ರಚನೆ ಮಾಡಿದ್ದಾರೆ. ಈ ಸಮಿತಿಯಲ್ಲಿ ಕರ್ನಾಟಕದ ಮೂವರು ಹಿರಿಯ ನಾಯಕರಿಗೆ ಅವಕಾಶ ನೀಡಿದ್ದಾರೆ.
ನವದೆಹಲಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಇಂದು(ಅಕ್ಟೋಬರ್ 26) ಅಧಿಕೃತವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಸೋನಿಯಾ ಗಾಂಧಿ ಅವರಿಂದ ಎಐಸಿಸಿ ಅಧ್ಯಕ್ಷ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಖರ್ಗೆ ಅವರು ಹೊಸದಾಗಿ ಸ್ಟೇರಿಂಗ್ ಕಮಿಟಿ ರಚಿಸಿದ್ದಾರೆ.
ಈ ಹಿಂದೆ ಇದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬದಲಿಗೆ ಈಗ ಅದನ್ನು ಸ್ಟೇರಿಂಗ್ ಕಮಿಟಿ ಎಂದು ಹೊಸ ಹೆಸರು ನಾಮಕರಣ ಮಾಡಲಾಗಿದ್ದು, ಸಿಡಬ್ಲ್ಯುಸಿ ರೀತಿಯಲ್ಲೇ ಸ್ಟೇರಿಂಗ್ ಕಮಿಟಿ ಕಾರ್ಯನಿರ್ವಹಣೆ ಮಾಡಲಿದೆ. 47 ಸದಸ್ಯರ ಸ್ಟೇರಿಂಗ್ ಸಮಿತಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಸ್ಥಾನ ನೀಡಲಾಗಿದೆ. ಇನ್ನು ಈ ಸಮಿತಿಯಲ್ಲಿ ಕರ್ನಾಟಕದ ಮೂವರಿಗೆ ಅವಕಾಶ ಸಿಕ್ಕಿದೆ. ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಾದ H.K.ಪಾಟೀಲ್, K.H.ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್‌ಗೆ ಸ್ಥಾನ ಸಿಕ್ಕಿರುವುದು ವಿಶೇಷ.
The Congress president Mallikarjun Kharge has constituted the Steering Committee which would function in place of the Congress Working Committee.
Senior party leaders including former PM Manmohan Singh, Sonia Gandhi, Rahul Gandhi and others are the members of the Committee. pic.twitter.com/pbAQrlecZE
— ANI (@ANI) October 26, 2022
ಸ್ಟೇರಿಂಗ್ ಕಮಿಟಿಯಲ್ಲಿರವವರ ಹೆಸರು
ಸೋನಿಯಾ ಗಾಂಧಿ, ಡಾ.ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಎ.ಕೆ.ಆ್ಯಂಟಿನಿ, ಅಭಿಷೇಕ್ ಮನು ಸಿಂಘಿ, ಅಂಬಿಕಾ ಸೋನಿ, ಅಜಯ್ ಮುಖೇನ್, ಆನಂದ್ ಶರ್ಮಾ, ಅವಿನಾಶ್ ದೇಶಪಾಂಡೆ, ಹರೀಶ್ ರಾವತ್, ಜೈರಾಮ್ ರಮೇಶ್, ಜಿತೇಂದ್ರ ಸಿಂಗ್, ಸೆಲ್ಜಾ, ಕೆ.ಸಿ.ವೇಣುಗೋಪಾಲ್, ಮುಕುಲ್ ವಸ್ಮಿಕ್, ಊಮನ್ ಚಾಂಡಿ, ಪ್ರಿಯಾಂಕ್ ವಾದ್ರಾ, ಪಿ ಚಿದಂಬರಂ, ರಣದೀಪ್ ಸಿಂಗ್ ಸುರ್ಜೆವಾಲಾ, ರಘುಬೀರ್ ಮೀನಾ, ತಾರಿಕ್ ಅನ್ವರ್, ಚೆಲ್ಲ ಕುಮಾರ್,ಅಜಯ್ ಕುಮಾರ್, ಅಧೀರ್ ರಂಜನ್ ಚೌಧರಿ, ಭಕ್ತ ಚರಣ್ ದಾಸ್, ದೇವೇಂದ್ರ ಯಾದವ್, ದಿಗ್ವಿಜಯ್ ಸಿಂಗ್, ದಿನೇಶ್ ಗುಂಡೂರಾವ್, ಜಯಪ್ರಕಾಶ್ ಅಗರ್ವಾಲ್, ಕೆ.ಎಚ್. ಮುನಿಯಪ್ಪ, ಮಣಿಕಮ್ ಟ್ಯಾಗೋರ್, ಮನೀಶ್ ಚತ್ರಾತ್, ಮೀರಾ ಕುಮಾರ್, ಪಿ.ಎಲ್.ಪೂನಿಯಾ, ಪವನ್ ಕುಮಾರ್ ಬನ್ಸಲ್, ಪ್ರಮೋದ್ ತಿವಾರಿ, ರಜನಿ ಪಾಟೀಲ್, ಡಾ. ರಘು ಶರ್ಮಾ, ರಾಜೀವ್ ಶುಕ್ಲಾ, ಸಲ್ಮಾನ್ ಖುರ್ಷಿದ್, ಸುಬ್ಬಿರಾಮಿ ರೆಡ್ಡಿ, ತಾರಿಕ್ ಅಹಮ್ಮದ್.
Published On - 7:43 pm, Wed, 26 October 22