AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಪ್​ಟಾಪಿನಲ್ಲಿ ಜಂಕ್​ ತುಂಬಿದೆ ಎಂದ ಅಪ್ಪ, ಸೋಪುನೀರಿನಲ್ಲಿ ತಿಕ್ಕಿ ತೊಳೆದ ಮಗಳು; ಇಷ್ಟೇ, ಬೇರೇನೂ ಆಗಿಲ್ಲ!

Junk in Laptop : ನನ್ನ ಲ್ಯಾಪ್​ಟಾಪಿನಲ್ಲಿ ಬಹಳ ಜಂಕ್​ ತುಂಬಿದೆ ಎಂದು ಗಂಡ ಹೆಂಡತಿಗೆ ಹೇಳುತ್ತಿದ್ದ. ಇದನ್ನು ಕೇಳಿಸಿಕೊಂಡ ಎರಡು ವರ್ಷದ ಮಗಳು ಮ್ಯಾಕ್​ಬುಕ್​ ಎತ್ತಿಕೊಂಡು ಸೀದಾ ಬಚ್ಚಲುಮನೆಗೆ ಹೋದಳು. ವಿಡಿಯೋ ನೋಡಿ.

ಲ್ಯಾಪ್​ಟಾಪಿನಲ್ಲಿ ಜಂಕ್​ ತುಂಬಿದೆ ಎಂದ ಅಪ್ಪ, ಸೋಪುನೀರಿನಲ್ಲಿ ತಿಕ್ಕಿ ತೊಳೆದ ಮಗಳು; ಇಷ್ಟೇ, ಬೇರೇನೂ ಆಗಿಲ್ಲ!
Chinese toddler washes fathers laptop with soap after overhearing it has rubbish in it
TV9 Web
| Updated By: ಶ್ರೀದೇವಿ ಕಳಸದ|

Updated on:Oct 27, 2022 | 3:56 PM

Share

Viral Video : ‘ಈ ಲ್ಯಾಪ್​ಟಾಪ್​ನಲ್ಲಿ ಬಹಳ ಜಂಕ್​ ಇದೆ’ ಎಂದು ತನ್ನ ತಂದೆ ಹೇಳುತ್ತಿದ್ದದ್ದು ಎರಡು ವರ್ಷದ ಈ ಹೆಣ್ಣುಮಗುವಿನ ಕಿವಿಗೆ ಬಿದ್ದಿದೆ. ನಂತರ ಬಾತ್​ರೂಮಿನಲ್ಲಿ ಏನೋ ಸದ್ದಾಗುತ್ತಿದೆಯಲ್ಲ ಎಂದು ಮಗುವಿನ ತಾಯಿ ನೋಡಿದ್ದಾಳೆ. ಸೋಪುನೀರು ತುಂಬಿದ ಬಕೆಟ್​ನಲ್ಲಿ ಅಪ್ಪನ ಮ್ಯಾಕ್​ಬುಕ್​ ಅನ್ನು ಮುಳುಗಿಸಿ ಸ್ವಚ್ಛಗೊಳಿಸುವುದರಲ್ಲಿ ಮಗಳು ತಲ್ಲೀನಳಾಗಿದ್ದನ್ನು ನೋಡಿದ ತಾಯಿ ‘ಪಾವನ’ಳಾಗಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಜೈಲಿನಿಂದ ಬಿಡುಗಡೆಗೊಂಡ ನಂತರ ತನ್ನ ನಿಜಮುಖ ತೋರಿದ ಇರಾನಿನ ‘ಝೋಂಬಿ ಏಂಜೆಲಿನಾ ಜೋಲೀ’
Image
ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್​ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ
Image
ನ್ಯೂಯಾರ್ಕ್​ನಲ್ಲಿ ನಡೆದ ‘ಮಿಸ್ ಶ್ರೀಲಂಕಾ ’ ಸಂತೋಷಕೂಟವು ಹಿಂಸಾತ್ಮಕ ರೂಪಕ್ಕೆ ತಿರುಗಿದ ವಿಡಿಯೋ ವೈರಲ್
Image
ಆನ್​ಲೈನ್​ ಕ್ಲಾಸ್​ ನಡೆಯುವಾಗ 4ನೇ ತರಗತಿಯ ಹುಡುಗ ಬರೆದ ಈ ಕವಿತೆಗಳು

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ಇದನ್ನು ವರದಿ ಮಾಡಿದೆ. ಮಗಳ ಈ ಘನಕಾರ್ಯವನ್ನು ನೋಡಿದ ತಾಯಿ ಕೋಪದಿಂದ ಕುದ್ದು ಹೋಗಿದ್ದಾಳೆ. ಯಾರಿಗೂ ಸಹಜ ಅಲ್ಲವೆ? ಬೆಳಗಿನ ತಿಂಡಿ ಸಮಯದಲ್ಲಿ ಈ ಮಗುವಿನ ಅಪ್ಪ, ಲ್ಯಾಪ್​ಟಾಪಿನಲ್ಲಿ ಬಹಳ ಜಂಕ್​ ತುಂಬಿದೆ ಎಂದು ಮಗುವಿನ ತಾಯಿಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡಿದ್ದೆ ಇಷ್ಟೆಲ್ಲ ಆವಾಂತರಕ್ಕೆ ಕಾರಣ. ಅಪ್ಪನ ಲ್ಯಾಪ್​ಟಾಪ್​ ಸ್ವಚ್ಛಗೊಳಿಸಿ ಅಪ್ಪನಿಗೆ ಸಹಾಯ ಮಾಡಬಹುದಲ್ಲ ಎಂದು ಮಗು ಸಹಾನುಭೂತಿಯಿಂದ ಆಲೋಚಿಸಿದೆ. ಆ ಪ್ರಕಾರ ಬಾತ್​ರೂಮಿಗೆ ಲ್ಯಾಪ್​ಟಾಪ್​ ತೆಗೆದುಕೊಂಡು ಹೋಗಿ ಸೋಪಿನ ನೀರು ತುಂಬಿದ ಬಕೆಟ್​ನಲ್ಲಿ ಅದ್ದಿ ಅದ್ದಿ ಪೂರ್ತಿ ಸ್ವಚ್ಛಗೊಳಿಸಿದೆ ಈ ಮಗು.

ನೆಟ್ಟಿಗರನೇಕರು ಈ ವಿಡಿಯೋ ನೋಡಿ ಹೌಹಾರಿದ್ದಾರೆ. ತಮ್ಮ ಮನೆಯ ಲ್ಯಾಪ್​ಟಾಪ್​ಗಳಿಗೂ ನಾಳೆ ಮಕ್ಕಳು ಇದೇ ಗತಿ ಕಾಣಿಸಿದರೆ ಎಂದು ಊಹಿಸಿಕೊಂಡೇ ಮೆತ್ತಗಾಗುತ್ತಿದ್ದಾರೆ. ಹೇಗೆ ಮಾತನಾಡಿದರೂ ಈ ಕಾಲದಲ್ಲಿ ಕಷ್ಟವೇ ಈ ಮಕ್ಕಳ ವಿಷಯದಲ್ಲಿ.

ನೀವು ಇಂಥ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 3:50 pm, Thu, 27 October 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್