ಜೈಲಿನಿಂದ ಬಿಡುಗಡೆಗೊಂಡ ನಂತರ ತನ್ನ ನಿಜಮುಖ ತೋರಿದ ಇರಾನಿನ ‘ಝೋಂಬಿ ಏಂಜೆಲಿನಾ ಜೋಲೀ’

Zombie Angelina Jolie : ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ನಾನು ಹೀಗೆಲ್ಲ ಮಾಡಿದೆ. ನನ್ನ ತಾಯಿ ಇದೆಲ್ಲವನ್ನು ನಿಲ್ಲಿಸು ಎಂದು ಹೇಳಿದರೂ ನಾನು ಕೇಳಲಿಲ್ಲ’ ಸಹರ್ ತಬರ್​

ಜೈಲಿನಿಂದ ಬಿಡುಗಡೆಗೊಂಡ ನಂತರ ತನ್ನ ನಿಜಮುಖ ತೋರಿದ ಇರಾನಿನ ‘ಝೋಂಬಿ ಏಂಜೆಲಿನಾ ಜೋಲೀ’
Irans Zombie Angelina Jolie Reveals Real Face After Release From Prison For Blasphemy
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 27, 2022 | 3:16 PM

Viral : ಈಕೆ ಸಹರ್​ ತಬರ್​. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಗಮನ ಸೆಳೆಯಬೇಕೆನ್ನುವ ಕಾರಣಕ್ಕೆ ಹಾಲಿವುಡ್ ನಟಿ ಏಂಜೆಲಿನಾ ಜೋಲೀಯನ್ನು ಹೋಲುವ ಭಯಾನಕ ಫೋಟೋಗಳನ್ನು ಇನ್​​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿ ಖ್ಯಾತಿ ಪಡೆದಿದ್ದಳು. ನಂತರ ಭ್ರಷ್ಟಾಚಾರ ಮತ್ತು ನಿಂದನೆ ಆಪಾದನೆಯ ಮೇಲೆ ಈಕೆ ಜೈಲು ಪಾಲಾದಳು. ಇದೀಗ ಬಿಡುಗಡೆಗೊಂಡ ಮೇಲೆ ತನ್ನ ನಿಜವಾದ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿದ್ದಾಳೆ. ವೈರಲ್ ಆಗುತ್ತಿರುವ ಈಕೆಯ ಫೋಟೋ ಮತ್ತು ವಿವರವನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Sahar Tabar ☠️? (@sahartabar.before)

2019ರ ಅಕ್ಟೋಬರ್‌ನಲ್ಲಿ ಭ್ರಷ್ಟಾಚಾರ ಮತ್ತು ನಿಂದನೆ ಆರೋಪದಡಿ ಈಕೆಯನ್ನು ಬಂಧಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಕಳೆದ ತಿಂಗಳು ಮಾಹ್ಸಾ ಅಮಿನಿಯ ಸಾವಿನಿಂದಾಗಿ ಇರಾನಿನಲ್ಲಿ ಪ್ರತಿಭಟನೆ ಉಂಟಾದಾಗ 14 ತಿಂಗಳುಗಳ ನಂತರ ಈಕೆಯನ್ನು ಬಿಡುಡೆ ಮಾಡಲಾಯಿತು.

ಇಂಡಿಪೆಂಡೆಂಟ್​ ವರದಿಯ ಪ್ರಕಾರ, ಸಹರ್ ತಬರ್​, ಏಂಜೆಲಿನಾ ಜೋಲೀ ಹೋಲಿಕೆಯ ಭಯಾನಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ, ಕಾಸ್ಮೆಟಿಕ್​ ಸರ್ಜರಿಗೆ ಒಳಗಾಗಿದ್ದರಿಂದ ಈಕೆಯ ಮುಖ ಹೀಗಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ 21 ವರ್ಷದ ಈಕೆ ಇದೀಗ ತನ್ನ ನಿಜವಾದ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾಳೆ ಅಷ್ಟೇ ಅಲ್ಲ ಇದರ ಹಿಂದಿನ ಸತ್ಯವನ್ನೂ ಬಹಿರಂಗಪಡಿಸಿದ್ದಾಳೆ.

ಈಕೆಯ ಬಂಧನವಾದಾಗ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈಕೆಯ ಬಿಡುಗಡೆಗೆ ಬೆಂಬಲ ಸೂಚಿಸಿ ದೊಡ್ಡ ಅಭಿಯಾನವನ್ನೇ ಹೂಡಿದರು. ಚಳವಳಿಕಾರ ಮಸಿಹ್ ಅಲಿನೆಜಾದ್ ಕೂಡ ಇದರಲ್ಲಿ ಭಾಗಿಯಾಗಿದ್ದರು. ಅಲಿನೇಜಾದ್ ಎಂಬುವವರು, ‘ಪ್ರಿಯ ಏಂಜೆಲಿನಾ ಜೋಲೀ, ಇಲ್ಲಿ ನಿಮ್ಮ ಸಹಾಯ ಅಗತ್ಯವಿದೆ. 19 ವರ್ಷದ ಸಹರ್ ತಬರ್​ ಮಾಡಿದ ಒಂದು ತಮಾಷೆ ಆಕೆಯನ್ನು ಜೈಲುಪಾಲಾಗುವಂತೆ ಮಾಡಿದೆ. ಆಕೆಯ ತಾಯಿ ತನ್ನ ಮುಗ್ಧ ಮಗಳಿಗಾಗಿ ದಿನವೂ ಕಣ್ಣೀರಿಡುತ್ತಿದ್ದಾಳೆ. ಅವಳ ಬಿಡುಗಡೆಗೆ ನೀವು ಸಹಾಯ ಮಾಡಬೇಕು’ ಎಂದು ಟ್ವೀಟ್ ಮಾಡಿದ್ದರು.

ಎಲ್ಲದರ ಪರಿಣಾಮವಾಗಿ ಈಕೆ ಜೈಲಿನಿಂದ ಬಿಡುಗಡೆಯಾದ ನಂತರ, ‘ತಾನು ತುಟಿ, ಮೂಗಿನ ಅಂದಕ್ಕಾಗಿ ಕಾಸ್ಮೆಟಿಕ್​ ಸರ್ಜರಿಗೆ ಒಳಗಾಗಿದ್ದು ನಿಜ. ಆದರೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ‘ಝೋಂಬಿ ಏಂಜೆಲಿನಾ ಜೋಲೀ’ ಫೋಟೋಗಳು ಮಾತ್ರ ಖಂಡಿತ ಮೇಕಪ್​, ಎಡಿಟಿಂಗ್​ ಆ್ಯಪ್​ ಮತ್ತು ಫೋಟೋಶಾಪ್​ನ ಸಹಾಯದಿಂದ ರೂಪುಗೊಂಡಂಥವು’ ಎಂದು ಹೇಳಿದ್ದಾರೆ.

ಹೀಗೆ ಈ ಅವತಾರದಲ್ಲಿ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ನೆಟ್ಟಿಗರೇ ಇವಳನ್ನು ‘ಝೋಂಬಿ ಏಂಜೆಲಿನಾ ಜೋಲೀ’ ಎಂದು ಕರೆಯಲಾರಂಭಿಸಿದರು. ತಬರ್​ನ ನಿಜನಾಮಧೇಯ ಫೇಟ್​ಮೆಹ್ ಕಿಶ್ವಾಂಡ್ (Fatemeh Kishvand). ತಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಬೇಕೆಂಬ ಆಸೆಯಿಂದ ಈಕೆ ಈ ತಂತ್ರವನ್ನು ಆಯ್ಕೆ ಮಾಡಿಕೊಂಡಿದ್ಧಾಗಿ ಹೇಳಿದ್ದಾಳೆ. ‘ನಟನೆಯ ಮೂಲಕ ಪ್ರಸಿದ್ಧಿ ಹೊಂದುವುದಕ್ಕಿಂತ ಹೀಗೆ ಪ್ರಸಿದ್ಧಿ ಹೊಂದುವುದು ಸುಲಭವೆನ್ನಿಸಿತು’ ಎಂದು ಹಿಂದೊಮ್ಮೆ ಈಕೆ ಹೇಳಿದ್ದನ್ನು ಪತ್ರಿಕೆಯೊಂದು ವರದಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

‘ಆದರೆ ನಾನಿದನ್ನೆಲ್ಲ ತಮಾಷೆಗಾಗಿ ಮಾಡಿದೆ. ನನ್ನ ತಾಯಿ ಇದೆಲ್ಲವನ್ನೂ ನಿಲ್ಲಿಸು ಸಾಕು ಎಂದು ಹೇಳಿದರೂ ನಾನು ಕೇಳಲೇ ಇಲ್ಲ’ ಎಂದು ಈಗ ಈಕೆ ಪಶ್ಚಾತ್ತಾಪ ಪಡುತ್ತಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:08 pm, Thu, 27 October 22