ಗುಜರಾತಿನಲ್ಲಿ ಹೀಗೊಂದು ‘ಫೈರ್ ಹೇರ್ ಕಟ್​’ ಅವಘಡ; ಸುಟ್ಟ ಗಾಯಗಳೊಂದಿಗೆ ನರಳುತ್ತಿರುವ ಯುವಕ

Fire Haircut : ಭಾರತದಲ್ಲಿ ಟ್ರೆಂಡ್ ಆಗುತ್ತಿರುವ ಈ ಹೇರ್​ಕಟ್​ ಮಾಡಿಸಿಕೊಳ್ಳಲು ಸಲೂನಿಗೆ ಬಂದಿದ್ದಾನೆ ಈ ಆರೀಫ್​. ಕ್ಷೌರಿಕನ ಕೈಗೆ ತಲೆಕೊಟ್ಟು ಸೋಶಿಯಲ್​ ಮೀಡಿಯಾದಲ್ಲಿ ಮುಳುಗಿದಾಗ ತಲೆಪೂರ್ತಿ ಬೆಂಕಿ ಹೊತ್ತಿಕೊಂಡಿದೆ!

ಗುಜರಾತಿನಲ್ಲಿ ಹೀಗೊಂದು ‘ಫೈರ್ ಹೇರ್ ಕಟ್​’ ಅವಘಡ; ಸುಟ್ಟ ಗಾಯಗಳೊಂದಿಗೆ ನರಳುತ್ತಿರುವ ಯುವಕ
Fire Haircut Goes Terribly Wrong at Gujarat Salon As Youth Suffers Severe Burns Injuries
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 27, 2022 | 5:02 PM

Viral Video : ಕತ್ತರಿ, ಸಣ್ಣಕತ್ತಿ, ಬ್ಲೇಡ್​ ಇವು ಕ್ಷೌರದ ಸಾಧನಗಳು ಎನ್ನುವುದು ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ತಾನು ಚೆಂದ ಕಾಣಬೇಕೆನ್ನುವ ಹುಚ್ಚಿನಲ್ಲಿ ಮನುಷ್ಯ ಹೊಸ ಹೊಸ ಪ್ರಯತ್ನಗಳಿಗೆ ಬೀಳುತ್ತಾನೆ. ಆದರೆ ಕೆಲವೊಮ್ಮೆ ಆ ಪ್ರಯತ್ನಗಳು ಕೈಕೊಟ್ಟಾಗ!? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಗುಜರಾತಿನ ವಲಸಾಡ್​ ಜಿಲ್ಲೆಯ ವಾಪಿ ನಗರದ ಸಲೂನ್​ ಒಂದರಲ್ಲಿ ನಡೆದ ಆತಂಕಕಾರೀ ಘಟನೆ ಇದು. ಕ್ಷೌರಿಕನು ಗ್ರಾಹಕರೊಬ್ಬರಿಗೆ ಫೈರ್ ಹೇರ್​ ಕಟ್​ ವಿನ್ಯಾಸವನ್ನು ಮಾಡಲು ಹೋದಾಗ ಈ ಅವಾಂತರ ಸಂಭವಿಸಿದೆ.

ಇದನ್ನೂ ಓದಿ
Image
ಜೈಲಿನಿಂದ ಬಿಡುಗಡೆಗೊಂಡ ನಂತರ ತನ್ನ ನಿಜಮುಖ ತೋರಿದ ಇರಾನಿನ ‘ಝೋಂಬಿ ಏಂಜೆಲಿನಾ ಜೋಲೀ’
Image
ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್​ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ
Image
ನ್ಯೂಯಾರ್ಕ್​ನಲ್ಲಿ ನಡೆದ ‘ಮಿಸ್ ಶ್ರೀಲಂಕಾ ’ ಸಂತೋಷಕೂಟವು ಹಿಂಸಾತ್ಮಕ ರೂಪಕ್ಕೆ ತಿರುಗಿದ ವಿಡಿಯೋ ವೈರಲ್
Image
ಆನ್​ಲೈನ್​ ಕ್ಲಾಸ್​ ನಡೆಯುವಾಗ 4ನೇ ತರಗತಿಯ ಹುಡುಗ ಬರೆದ ಈ ಕವಿತೆಗಳು

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಕೇಶವಿನ್ಯಾಸಗಳಲ್ಲಿ ಫೈರ್​ ಹೇರ್​ ಕಟ್​ ಕೂಡ ಒಂದು. ಸ್ಥಳೀಯ ಕ್ಷೌರಿಕ ಯುವಕನೊಬ್ಬನ ಮೇಲೆ ಈ ಪ್ರಯೋಗ ವೈಫಲ್ಯಗೊಂಡಾಗ ಈ ದುರ್ಘಟನೆ ನಡೆದಿದೆ. ಈ ವಿಡಿಯೋದಲ್ಲಿ ಯುವಕನ ತಲೆತುಂಬಾ ಎಂಥದೋ ರಾಸಾಯನಿಕ ಪುಡಿಯನ್ನು ಉದುರಿಸುತ್ತಾನೆ ಕ್ಷೌರಿಕ. ನಂತರ ಬೆಂಕಿಕಡ್ಡಿ ಗೀರುತ್ತಿದ್ದಂತೆ ಭಗ್ಗನೆ ಬೆಂಕಿ ಹೊತ್ತಿಕೊಂಡುಬಿಡುತ್ತದೆ. ನೋವಿನಿಂದ ನರಳುತ್ತ ಎದ್ದು ಓಡಾಡತೊಡಗುತ್ತಾನೆ ಯುವಕ.

ಐಎಎನ್‌ಎಸ್ ವರದಿಯ ಪ್ರಕಾರ, ಆರೀಫ್ ಎಂಬ ಯುವಕ ಬುಧವಾರದಂದು ಬಂಟಿ ಸಲೂನಿಗೆ ಹೋಗಿದ್ದ. ಅಲ್ಲಿದ್ದ ಕ್ಷೌರಿಕನಿಗೆ ಫೈರ್ ಹೇರ್ ಕಟ್​ ಮಾಡು ಎಂದು ವಿನಂತಿಸಿಕೊಂಡ. ಆ ಪ್ರಕಾರ ಕ್ಷೌರಿಕನು ಸಿದ್ಧತೆ ಮಾಡಿಕೊಂಡು ಮುಂದುವರೆದ. ಇತ್ತ ತನ್ನ ಗೆಳೆಯನಿಗೆ ಕ್ಷೌರ ಮಾಡುವ ದೃಶ್ಯವನ್ನು ವಿಡಿಯೋ ಮಾಡು, ಅದನ್ನು ಇನ್​ಸ್ಟಾಗ್ರಾಂಗೆ ಹಾಕಬೇಕು ಎಂದು ಆರೀಫ್​ ಕೇಳಿಕೊಂಡ. ಸ್ನೇಹಿತ ವಿಡಿಯೋ ಮಾಡಲಾರಂಭಿಸಿದ. ಇತ್ತ ಆರೀಫ್ ಸೋಶಿಯಲ್ ಮೀಡಿಯಾದಲ್ಲಿ ಬೆರಳಾಡಿಸುತ್ತ ಮುಳುಗಿದ. ಅಷ್ಟರಲ್ಲಿ ಈ ಅಚಾತುರ್ಯ ಸಂಭವಿಸಿತು.

‘ಆರೀಫನ ತಲೆ, ಎದೆ, ಕುತ್ತಿಗೆಗೆ ತೀವ್ರವಾಗಿ ಸುಟ್ಟು, ಗಾಯಗಳಾಗಿವೆ. ಆಗ ಸ್ಥಳೀಯ ಆಸ್ಪತ್ರೆಗೆ ಈತನನ್ನು ಕರೆತಂದಿದ್ದಾರೆ. ನಂತರ ಈ ಘಟನೆಯ ಕುರಿತು ಆಸ್ಪತ್ರೆಯ ಸಿಬ್ಬಂದಿ ವಲಸಾಡ್​ ಪೊಲೀಸ್​ರಿಗೆ ಮಾಹಿತಿ ನೀಡಿದೆ.’ ಎಂದು ವಾಪಿ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಯೂರಿ ಬೆನ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಆರೀಫನನ್ನು ಸೂರತ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹೇರ್​ ಕಟ್​ ಪ್ರಯೋಗ ಮಾಡುತ್ತಿದ್ದಾಗ ಸಲೂನಿನಲ್ಲಿ ಯಾರೆಲ್ಲ ಇದ್ದರೋ ಅವರೆಲ್ಲರ ಹೇಳಿಕೆಯನ್ನು ದಾಖಲಿಸಿದ ನಂತರವೇ ತನಿಖೆ ನಡೆಸಲಾಗುವುದು ಎಂದು ಮಯೂರಿ ಬೆನ್​ ತಿಳಿಸಿದ್ದಾರೆ.

ಸದ್ಯ ಭಾರತದಲ್ಲಿ ಟ್ರೆಂಡಿಂಗ್ ಆಗಿರುವ ಫೈರ್​ ಹೇರ್ ಕಟ್​ಗೆ ಉದ್ದ ಕೂದಲನ್ನು ಹೊಂದಿರುವ ಮಹಿಳೆಯರು, ಪುರುಷರಾದಿಯಾಗಿ ಮೊರೆ ಹೋಗುತ್ತಿದ್ದಾರೆ.

ಏನೆನ್ನಿಸುತ್ತಿದೆ ಇಂಥ ಹೊಸ ಪ್ರಯೋಗಗಳ ವಿಷಯವಾಗಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:54 pm, Thu, 27 October 22