AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಯಾರ್ಕ್​ನಲ್ಲಿ ನಡೆದ ‘ಮಿಸ್ ಶ್ರೀಲಂಕಾ ’ ಸಂತೋಷಕೂಟವು ಹಿಂಸಾತ್ಮಕ ರೂಪಕ್ಕೆ ತಿರುಗಿದ ವಿಡಿಯೋ ವೈರಲ್

Miss Sri Lanka : ‘ಇದೊಂದು ಜಗಳವಷ್ಟೇ. ಯಾವುದೇ ಸಂಸ್ಕೃತಿಗಳಲ್ಲಿ, ದೇಶಗಳಲ್ಲಿ ಜಗಳಗಳು ಸಾಮಾನ್ಯ. ಇದಕ್ಕಾಗಿ ಶ್ರೀಲಂಕರನ್ನು ಮಾತ್ರ ದೂರಬೇಕಿಲ್ಲ, ನಾವು ಶ್ರೀಲಂಕನ್ನರು ಒಳ್ಳೆಯ ಜನ.’ ಆಯೋಜಕಿ ಸುಜಾನಿ ಫರ್ನಾಂಡಿಸ್​

ನ್ಯೂಯಾರ್ಕ್​ನಲ್ಲಿ ನಡೆದ ‘ಮಿಸ್ ಶ್ರೀಲಂಕಾ ’ ಸಂತೋಷಕೂಟವು ಹಿಂಸಾತ್ಮಕ ರೂಪಕ್ಕೆ ತಿರುಗಿದ ವಿಡಿಯೋ ವೈರಲ್
Miss Sri Lanka New York Pageant Party Turns Violent
TV9 Web
| Updated By: ಶ್ರೀದೇವಿ ಕಳಸದ|

Updated on:Oct 27, 2022 | 12:42 PM

Share

Viral Video : ನ್ಯೂಯಾರ್ಕ್​ನಲ್ಲಿ ಹಮ್ಮಿಕೊಂಡಿದ್ದ ಮಿಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯ ಸಂತೋಷಕೂಟದಲ್ಲಿ ಅತ್ಯಂತ ಅಸಹ್ಯಕರ ಘಟನೆಯೊಂದು ನಡೆದಿದೆ. ಈ ದೃಶ್ಯಾವಳಿಗಳನ್ನು ನೋಡಿದ ನೆಟ್ಟಿಗರು ಕುಪಿತರಾಗಿದ್ದು ಇದು ಶ್ರೀಲಂಕಾದ ಘನತೆಗೆ ಕಳಂಕ ತಂದಿದೆ ಎಂದಿದ್ದಾರೆ. ನ್ಯೂಯಾರ್ಕ್​ನಲ್ಲಿ ಶುಕ್ರವಾರದಂದು ಮೊದಲ ಬಾರಿ ಈ ಸೌಂದರ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಆನಂತರ ಏರ್ಪಡಿಸಿದ್ದ ಸಂತೋಷಕೂಟವು ಹೀಗೆ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದುದು ಅತ್ಯಂತ ವಿಷಾದನೀಯ ಎಂಬಂಥ ಪರಿಸ್ಥಿತಿ ಉಂಟಾಗಿದೆ. ಈ ವಿಡಿಯೋಗಳು ಈಗ ವೈರಲ್ ಆಗುತ್ತಿವೆ.

ಶ್ರೀಲಂಕಾದಿಂದ ಸಾಕಷ್ಟು ಜನರು ಅಮೆರಿಕಕ್ಕೆ ವಲಸೆ ಬಂದಿದ್ದಾರೆ. ತಮ್ಮ ದೇಶ ಸಂಕಷ್ಟದಲ್ಲಿರುವ ಕಾರಣ ಏನಾದರೂ ಸಹಾಯ ಮಾಡಬೇಕೆಂಬ ಇರಾದೆ ಈ ವಲಸಿಗರದ್ದು. ಈ ಹಿನ್ನೆಲೆಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಹೀಗಾಗುತ್ತದೆ ಎಂಬ ಊಹೆ ಯಾರಿಗೂ ಇರಲಿಲ್ಲ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಇದನ್ನು ವರದಿ ಮಾಡಿದೆ. ಈ ಸಂಘರ್ಷಕ್ಕೆ ಕಾರಣವೇನು ಎನ್ನುವುದು ಈತನಕ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಹೊಡೆದಾಟದಲ್ಲಿ ಕೆಲ ವಸ್ತುಗಳು ಜಖಂಗೊಂಡಿವೆ. ಕೆಲವರನ್ನು ಬಂಧಿಸಲಾಗಿದೆ. ಒಟ್ಟು 14 ಜನ ಸ್ಪರ್ಧಿಗಳಿದ್ದು ಈ ಹೊಡೆದಾಟದಲ್ಲಿ ಅವರು ಭಾಗಿಯಾಗಿಲ್ಲ ಎಂದು ಸ್ಪರ್ಧೆಯ ಆಯೋಜಕರಲ್ಲಿ ಒಬ್ಬರಾದ ಸುಜಾನಿ ಫೆರ್ನಾಂಡೋ ನ್ಯೂಯಾರ್ಕ್​ ಪೋಸ್ಟ್​ಗೆ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಗೆದ್ದ ಅಭ್ಯರ್ಥಿಯು ವಿಚ್ಛೇದಿತೆಯಾದ ಕಾರಣ ಆಕೆಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂಬ ಒತ್ತಾಯವನ್ನು ಪ್ರತಿಸ್ಪರ್ಧಿಯೊಬ್ಬರು ಹೇರತೊಡಗಿದರು. ಈ ಸಂದರ್ಭದಲ್ಲಿಯೇ ಗೆದ್ದ ಅಭ್ಯರ್ಥಿಯ ಕಿರೀಟವನ್ನು ಆಕೆ ಎಳೆದಾಡಿದರು. ಆಗಲೇ ಈ ಜಗಳಕ್ಕೆ ಕಿಡಿಹೊತ್ತಿಕೊಂಡಿದ್ದು ಎಂದು ಹೇಳಲಾಗುತ್ತಿದೆ.

ಇದೆಲ್ಲವನ್ನೂ ನೋಡಿದ ನೆಟ್ಟಿಗರು, ಅಮೆರಿಕದಲ್ಲಿ ಶ್ರೀಲಂಕನ್ನರ ಮರ್ಯಾದೆ ಹರಾಜಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಶ್ರೀಲಂಕಾದ ಹಳ್ಳಿಗರು ಯಾವಾಗಲೂ ಹೀಗೇ ವರ್ತಿಸುವುದು. ಪ್ರತಿಯೊಂದು ಕಾರ್ಯಕ್ರಮವೂ ಹೀಗೆಯೇ ಅಂತ್ಯಗೊಳ್ಳುವುದು. ದೊಡ್ಡವರಿಂದ ಹಿಡಿದು ಹೆಣ್ಣುಮಕ್ಕಳು ಮಕ್ಕಳತನಕವೂ ಇದೇ ರೀತಿ ಇರುತ್ತದೆ ಅಲ್ಲಿ.  ಪ್ಲಾಸ್ಟಿಕ್​ ಕುರ್ಚಿ, ಛತ್ರಿಗಳಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಾರೆ. ಇದೆಲ್ಲ ನೋಡಲು ಬಹಳ ಕುತೂಹಲಕಾರಿಯಾಗಿರುತ್ತದೆ’ ಎಂದಿದ್ದಾರೆ ಟ್ವಿಟರ್ ಖಾತೆದಾರರೊಬ್ಬರು.

‘ಎಂಥ ಅಸಹ್ಯಕರ ಇದು. ಇವರೆಲ್ಲರನ್ನು ಪೊಲೀಸರು ಬಂಧಿಸಬೇಕು. ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು’ ಎಂದು ಮತ್ತೊಬ್ಬರು ಹೇಳಿದ್ಧಾರೆ.

‘ಇದೊಂದು ಜಗಳವಷ್ಟೇ. ಮಕ್ಕಳ ಜಗಳಾಟದಂತೆ. ಶ್ರೀಲಂಕನ್ನರು ಒಳ್ಳೆಯ ಜನ. ಮಕ್ಕಳೂ ಕೂಡ ಜಗಳವಾಡುತ್ತಾರೆ. ಯಾವುದೇ ಸಂಸ್ಕೃತಿಗಳಲ್ಲಿ, ದೇಶಗಳಲ್ಲಿ ಜಗಳಗಳು ನಡೆಯುವುದು ಸಾಮಾನ್ಯ. ಶ್ರೀಲಂಕನ್ನರನ್ನು ಮಾತ್ರ ದೂರಬೇಕಿಲ್ಲ. ನಾವೇನು ಅಂಥ ಜನರಲ್ಲ’ ಎಂದಿದ್ದಾರೆ ಆಯೋಜಕಿ ಸುಜಾನಿ ಫರ್ನಾಂಡಿಸ್.

ಶ್ರೀಲಂಕಾದ ಕ್ಯಾನ್ಸರ್ ಆಸ್ಪತ್ರೆಗೆ ನಿಧಿ ಸಂಗ್ರಹಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಏಂಜೆಲಿಯಾ ಗುಣಶೇಖರ ಮಿಸ್ ಶ್ರೀಲಂಕಾ ಕಿರೀಟವನ್ನು ಅಲಂಕರಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:24 pm, Thu, 27 October 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್