ಆನ್ಲೈನ್ ಕ್ಲಾಸ್ ನಡೆಯುವಾಗ 4ನೇ ತರಗತಿಯ ಹುಡುಗ ಬರೆದ ಈ ಕವಿತೆಗಳು
Poem : ‘ಮುಳ್ಳಿನಿಂದ ಕೂಡಿದ ಟೊಂಗೆಯಲ್ಲಿ ಅರಳಿದ ಗುಲಾಬಿಯಂತೆ ನೀವು ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ’ ತಾಯಂದಿರ ದಿನಕ್ಕೆ ಈ ಹುಡುಗ ಬರೆದ ಕವಿತೆಯಿದು. ಇನ್ನಷ್ಟು ಕವನಗಳನ್ನು ಓದಿ.
Viral : ಕೊವಿಡ್ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ಆನ್ಲೈನ್ ಆಗುತ್ತಿದ್ದಂತೆ, ಪುಟ್ಟ ಮಕ್ಕಳು ಗಂಟೆಗಟ್ಟಲೆ ಏಕಾಗ್ರಚಿತ್ತದಿಂದ ಸ್ಕ್ರೀನ್ ಮುಂದೆ ಕುಳಿತುಕೊಳ್ಳವುದು ಬಹಳೇ ಕಷ್ಟವಾಯಿತು. ಸಾಕಷ್ಟು ಮಕ್ಕಳು ವಿಡಿಯೋ ಆಫ್ ಮಾಡಿ ಮಲಗಿಕೊಂಡಿದ್ದಿದೆ. ರಸ್ತೆಗೆ ಬಂದು ಆಟವಾಡಿದ್ದಿದೆ. ಇನ್ನೊಂದು ವಿಂಡೋನಲ್ಲಿ ಆನ್ಲೈನ್ ಗೇಮ್ ಆಡಿದ್ದಿದೆ. ಕ್ರಿಕೆಟ್ ನೋಡಿದ್ದಿದೆ. ಕಾರ್ಟೂನ್ ನೋಡಿದ್ದಿದೆ. ಹಾಳೆಗಳ ಮೇಲೆ ಏನೇನೋ ಗೀಚಿದ್ದಿದೆ. ಕೆಲವೇ ಮಕ್ಕಳು ಚಿತ್ರ ಬಿಡಿಸಿದ್ದಿದೆ ಹಾಗೆಯೇ ಕವನಗಳನ್ನೂ ಬರೆದಿದ್ದಿದೆ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ ಗಮನಿಸಿ.
4th grader wrote this during distance learning two years ago. pic.twitter.com/GMKrzo6Vb2
ಇದನ್ನೂ ಓದಿ— StePHANTOM ? BOOcianovic (@grubreport) October 25, 2022
ಈ ಕವನಗಳು ರಚನೆಗೊಂಡಿದ್ದು ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ. ನಾಲ್ಕನೇ ಕ್ಲಾಸ್ ಓದುತ್ತಿರುವ ಈ ಮಗುವಿನ ಅಮ್ಮ ಒಟ್ಟು ನಾಲ್ಕು ಕವನಗಳನ್ನು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು 1,37,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. StePHANTOM ಎಂಬ ಅಕೌಂಟಿನಲ್ಲಿ ಈ ಪೋಸ್ಟ್ ಓದಬಹುದಾಗಿದೆ.
‘ಕವಿತೆಯ ಬಗ್ಗೆ ನನಗೊಂದು ಕಲ್ಪನೆ ಇತ್ತೇನೋ ಅನ್ನಿಸುತ್ತದೆ. ಆದರೀಗದು ಇಲ್ಲ. ಬಹುಶಃ ಇಲ್ಲೇ ಎಲ್ಲೋ ಮನೆಯ ಸುತ್ತಮುತ್ತಲೂ ಅದು ಅಲೆದಾಡುತ್ತಿರುಬಹುದು’ ಇದು ಒಂದು ಕವಿತೆಯ ಭಾವಾನುವಾದ. ಇನ್ನೊಂದು ಕವನ ಹೀಗಿದೆ ‘ಮುಳ್ಳಿನಿಂದ ಕೂಡಿದ ಟೊಂಗೆಯಲ್ಲಿ ಅರಳಿದ ಗುಲಾಬಿಯಂತೆ ನೀವು ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ’. ಈ ಕವನವನ್ನು ತಾಯಂದಿರ ದಿನಕ್ಕೆ ಬರೆದದ್ದು.
ನೆಟ್ಟಿಗರು ಈ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಂಥ ಅದ್ಭುತ ಆಲೋಚನೆ. ನಿಜಕ್ಕೂ ಇವನಿಗೆ ಉತ್ತಮ ಭವಿಷ್ಯವಿದೆ. ಸೃಜನಶೀಲ ಜಗತ್ತಿನಲ್ಲಿ ಅವನು ಮುಂದುವರೆಯಲಿ ಎಂದಿದ್ದಾರೆ ಒಬ್ಬರು. ಅವನು ಹೀಗೆ ಕವನಗಳಲ್ಲಿ ತನ್ನ ಮನಸ್ಸು ತೊಡಗಿಸಿಕೊಂಡಿದ್ದು ನಿಜಕ್ಕೂ ಸ್ತುತ್ಯಾರ್ಹ ಎಂದಿದ್ದಾರೆ ಇನ್ನೂ ಒಬ್ಬರು. ಈ ವಯಸ್ಸಿನಲ್ಲಿ ಯಾವುದೋ ಒಂದು ಅಭಿವ್ಯಕ್ತಿಯಲ್ಲಿ ತೊಡಗಿಕೊಳ್ಳುವುದೆಂದರೆ ಅದೇ ಮಹಾನ್ ಸಾಧನೆ. ಏಕೆಂದರೆ ಇಂದು ಮಕ್ಕಳ ಮನಸ್ಸನ್ನು ಚಂಚಲಗೊಳಿಸಲು ಏನೆಲ್ಲ ಅವಕಾಶಗಳಿವೆ ಎಂದಿದ್ದಾರೆ ಮಗದೊಬ್ಬರು.
ನಿಮ್ಮ ಮಗುವಿಗೂ ಅವರಷ್ಟಕ್ಕೆ ಅವರನ್ನು ಬಿಟ್ಟು ನೋಡಿ ದಿನವೂ. ಅವರೊಳಗಿನದು ನಿಧಾನ ಆಕಾರಪಡೆದುಕೊಳ್ಳುತ್ತಾ ಹೋಗುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:35 am, Thu, 27 October 22