AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಗಿಗೆ ಗಣಿತ ಹೇಳಿಕೊಡುತ್ತ ಕಂಗಾಲಾಗಿ ಅಳುತ್ತಿದ್ದಾನೆ ಈ ಚೀನಿಯಣ್ಣ

Math Teaching : ಎರಡು ಎಂದು ತಂಗಿ, ಮೂರು ಲಂಬಕೋನಗಳು ಎಂದು ಅಣ್ಣ. ಎಷ್ಟು ಹೇಳಿದರೂ ತಂಗಿ ಒಪ್ಪುತ್ತಿಲ್ಲ. ಸೂಕ್ಷ್ಮಮನಸಿನ ಈ ಅಣ್ಣನಿಗೆ ಅಳು ಬಂದುಬಿಟ್ಟಿದೆ. ವಿಡಿಯೋ ನೋಡಿದರೆ ಅಳುತ್ತೀರೋ, ನಗುತ್ತೀರೋ? ನೀವೇ ಹೇಳಿ.

ತಂಗಿಗೆ ಗಣಿತ ಹೇಳಿಕೊಡುತ್ತ ಕಂಗಾಲಾಗಿ ಅಳುತ್ತಿದ್ದಾನೆ ಈ ಚೀನಿಯಣ್ಣ
Chinese boy starts crying while teaching math to little sister
TV9 Web
| Edited By: |

Updated on:Oct 27, 2022 | 6:21 PM

Share

Viral Video : ಅಣ್ಣ ಎಂದರೆ ಅಣ್ಣ! ಚಿಕ್ಕವರು ಏನಾದರೂ ಸಹಾಯ ಕೇಳಿದಾಗ ನೋಡಬೇಕು ಈ ಅಣ್ಣಂದಿರ ಗತ್ತು ಮತ್ತು ಬೀಗುವಿಕೆ. ಇದೇ ಸಮಯವೆಂದು ಚಿಕ್ಕವರನ್ನು ಗೋಳಾಡಿಸಿ ಮಜಾ ತೆಗೆದುಕೊಂಡುಬಿಡುತ್ತಾರೆ. ಹಾಗಂತ ಎಲ್ಲ ಅಣ್ಣಂದಿರೂ ಹೀಗೇ ಇರುವುದಿಲ್ಲ. ಈ ವಿಡಿಯೋದಲ್ಲಿ ಇರುವಂಥ ಸೂಕ್ಷ್ಮ, ಪಾಪದ ಅಣ್ಣಂದಿರೂ ಇರುತ್ತಾರೆ. ಈ ಅಣ್ಣ ತಂಗಿ ಚೀನಾ ಮೂಲದವರು. ಅವಳಿಗೆ ಗಣಿತವನ್ನು ಹೇಳಿಕೊಡುತ್ತಿರುವಾಗ ಮಾಡಿದ ವಿಡಿಯೋ ಇದಾಗಿದೆ. ಸುಮಾರು 10 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಅಂಥದ್ದೇನಿದೆ ಇದರಲ್ಲಿ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by MustShareNews (@mustsharenews)

ಕೆಲವರಿಗೆ ಗಣಿತ ಇಷ್ಟ, ಕೆಲವರಿಗೆ ಕಷ್ಟ! ಏನು ಮಾಡುವುದು. ಈ ಚಿತ್ರದಲ್ಲಿ ಒಟ್ಟು ಮೂರು ಲಂಬಕೋನಗಳಿವೆ. ಆದರೆ ತಂಗಿ ಎರಡು ಇವೆ ಎಂದು ವಾದಿಸಿದ್ದಾಳೆ. ಅಣ್ಣನ ಸತ್ಯ ಅಣ್ಣನಿಗೆ, ತಂಗಿಯ ಸತ್ಯ ತಂಗಿಗೆ. ಅಣ್ಣ ಎಷ್ಟೇ ಒತ್ತಾಯಿಸಿದರೂ ತಂಗಿ ಮಾತ್ರ ಒಪ್ಪುತ್ತಿಲ್ಲ. ಮೂರೂ ಲಂಬಕೋನಗಳನ್ನು ಗುರುತಿಸಿದ್ದೇನೆ. ಆದರೂ ಈಕೆ ಒಪ್ಪುತ್ತಿಲ್ಲ ಎಂದು ಕಂಗಾಲಾದ ಅಣ್ಣ ಕಣ್ಣೀರು ಹಾಕಿದ್ದಾನೆ. ಹೀಗಾದರೆ ನೀ ಶಿಕ್ಷಕನಾಗಲು ಸಾಧ್ಯವಿಲ್ಲ ಎಂದು ಕಾಲೆಳೆಯುತ್ತಿದ್ದಾಳೆ ಅಮ್ಮ. ಸತ್ಯ ಕಣ್ಣೆದುರಿಗಿದ್ದರೂ ಎದುರಿನವರೂ ಅದನ್ನು ಒಪ್ಪದಾದಾಗ ಇಂಥ ಪಾಪದ ಅಣ್ಣಂದಿರು ಇನ್ನೇನು ಮಾಡುತ್ತಾರೆ!?

ಅಯ್ಯೋ ಈ ಗಣಿತವೇ ನನ್ನ ಜೀವವನ್ನೇ ತೆಗೆಯುತ್ತದೆ ನೀ ಅಳಬೇಡ ಬಿಡು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನಾನಂತೂ ಈ ಗಣಿತವನ್ನು ದ್ವೇಷಿಸುತ್ತೇನೆ ಎಂದಿದ್ದಾರೆ ಇನ್ನೂ ಒಬ್ಬರು. ಹೌದೋ ನೀ ಹೇಳಿದ್ದು ಸರಿ ಇದೆ ನಾನು ಒಪ್ಪುತ್ತೇನೆ ಇದನ್ನು ಎಂದು ಮತ್ತೊಬ್ಬರು ಅಣ್ಣನನ್ನು ಬೆಂಬಲಿಸಿದ್ದಾರೆ. ನೀ ಅಳಬೇಡವೋ ಸರಿಯಾದ ಉತ್ತರ ಹೇಳಿದರೂ ಯಾಕೋ ಅಳುವುದು? ಎಂದು ಸಮಾಧಾನಿಸಿದ್ದಾರೆ ಇನ್ನೊಬ್ಬರು.

ಅಳುವು ನಗುವೂ ಒಟ್ಟಿಗೇ ತರಿಸುವ ಈ ವಿಡಿಯೋ ನೋಡಿ ನಿಮಗೀಗ ನಿಮ್ಮ ಗಣಿತ ಪರೀಕ್ಷೆ ಕಣ್ಮುಂದೆ ಬರುತ್ತಿದೆಯಾ? ಹೋಗಲಿ ಅಣ್ಣನಿಗೆ ಬೆಂಬಲಿಸಿಬಿಡಿ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:19 pm, Thu, 27 October 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ