AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದಾಡುತ್ತಿರುವುದು ಸಿಂಹ, ಬೆಕ್ಕಲ್ಲ ಅಕ್ಕಾ; ಹುಷಾರು ಎನ್ನುತ್ತಿರುವ ನೆಟ್ಟಿಗರು

Lion : 11 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಈ ಯುವತಿಯ ಧೈರ್ಯಕ್ಕೆ ಅಚ್ಚರಿ ಪಟ್ಟಿದ್ದಾರೆ. ಆದರೂ ಮಂಚದ ಮೇಲೆ ಹಾಯಾಗಿ ಮಲಗಿದ್ದ ಸಿಂಹಜೋಡಿಯನ್ನು ಹೀಗೆಲ್ಲ ಎಬ್ಬಿಸುವುದೇ? ಎಂದಿದ್ದಾರೆ ಕೆಲವರು.

ಮುದ್ದಾಡುತ್ತಿರುವುದು ಸಿಂಹ, ಬೆಕ್ಕಲ್ಲ ಅಕ್ಕಾ; ಹುಷಾರು ಎನ್ನುತ್ತಿರುವ ನೆಟ್ಟಿಗರು
Woman Pets Lion Scratches Its Head
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 28, 2022 | 10:31 AM

Viral Video : ಸ್ವಲ್ಪ ಸೂಕ್ಷ್ಮತೆ ಬೇಕು ಮನುಷ್ಯರಿಗೆ ಎನ್ನುವುದು ಇದಕ್ಕೇ. ಮಂಚದ ಮೇಲೆ ಮಲಗಿದ್ದ ಸಿಂಹಜೋಡಿಗಳ ಬದಲಾಗಿ ಮನುಷ್ಯಜೋಡಿಯೊಂದನ್ನು ಊಹಿಸಿಕೊಂಡು ನೋಡಿ. ತಮ್ಮ ಪಾಡಿಗೆ ತಾವು ಆರಾಮಾಗಿರುವಾಗ ಹೀಗೆ ಇದ್ದಕ್ಕಿದ್ದ ಹಾಗೆ ಸಿಂಹವೊಂದು ಬಂದು ಇಬ್ಬರಲ್ಲೊಬ್ಬರ ತಲೆ ನೇವರಿಸಿದರೆ ಹೇಗಿರಬೇಡ? ಖಾಸಗೀತನ ಎಂದರೆ ಖಾಸಗೀತನ. ಅದು ಪ್ರಾಣಿಯಗಿರಲಿ ಮನುಷ್ಯರಾಗಿರಲಿ. ಈ ಮನುಷ್ಯರ ಫೋಟೋ, ವಿಡಿಯೋ ಮತ್ತು ಸೋಶಿಯಲ್​ ಮೀಡಿಯಾದ ಹುಚ್ಚು ಯಾವಾಗ ಮುಗಿಯತ್ತದೋ ಕಾಣೆ ಎಂದುಕೊಂಡು ಸಿಂಹ ಅಂತೂ ಮಂಚವನ್ನು ಬಿಟ್ಟು ಇಳಿದು ಬಂದು ಪೋಸ್​ ನೀಡಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Khaleel Ahmed (@k4_khaleel)

ಹೋಗಲಿ ಪಾಪ ಎಷ್ಟು ದೂರದಿಂದ ಬಂದಿದ್ದಾಳೋ ಏನೋ ಮತ್ತೆ ಆಕೆಯ ಧೈರ್ಯಕ್ಕಾದರೂ ನಾವು ಮರ್ಯಾದೆ ಕೊಡಬೇಡವೆ? ಹೋಗಿ ಒಂದು ಪೋಸ್​ ಕೊಟ್ಟು ಕಳಿಸಿ ಬೇಗ ಎಂದು ಸಿಂಹಿಣಿ ಅನುಮತಿ ನೀಡಿದಂತಿದೆ. ನೀ ಹೇಳಿದ ಮೇಳೆ ಇಲ್ಲವೆನ್ನುವುದುಂಟೆ? ಆಗಲಿ ಎಂದು ಸಿಂಹ ಆಕೆಯ ಬಳಿ ಹೋಗಿ ನಿಂತಿದೆ. ಯುವತಿಗೆ ಆದ ಸಂತೋಷ ಕೇಳಬೇಕೆ? ಬೆಕ್ಕಿನಂತೆ ಅದರ ತಲೆ ನೇವರಿಸಿ, ಮುದ್ದುಮಾಡಿ ವಿಡಿಯೋ ಮಾಡಿಸಿಕೊಂಡು ಸಂತೃಪ್ತಳಾಗಿದ್ದಾಳೆ.

ಈ ವಿಡಿಯೋ ಅನ್ನು ಈತನಕ 11 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. 22,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. 1,500ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.

ಎಂಥಾ ಧೈರ್ಯ ಈಕೆಗೆ? ಎಂದು ಕೆಲವರು ಹೊಗಳಿದ್ದಾರೆ. ಅಕಸ್ಮಾತ್ ಒಮ್ಮೆ ಆಕೆಯ ರಕ್ತದ ರುಚಿ ನೋಡಬೇಕೆಂದು ಸಿಂಹ ಬಯಸಿದ್ದರೆ ಎಂದು ಕೆಲವರು ಹೇಳಿದ್ದಾರೆ. ಅವು ಪಳಗಿಸಿದ ವನ್ಯಮೃಗಗಳು ಹಾಗೆಲ್ಲ ಏನೂ ಆಗದು ಎಂದು ಹಲವರು ಸಮಾಧಾನಿಸಿದ್ದಾರೆ. ಆದರೂ ಮೃಗ ಮೃಗವೇ ಹುಷಾರು, ಇಂಥ ಹುಚ್ಚಾಟಗಳಿಂದ ಎಂದು ಕೆಲವರು ಎಚ್ಚರಿಸಿದ್ಧಾರೆ.

ಭಯಂಕರ ಅಲ್ವಾ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:30 am, Fri, 28 October 22