ಇದು ಶೂಟಿಂಗ್​ ಅಲ್ಲ, ಪ್ರೀ ವೆಡ್ಡಿಂಗ್​ ಶೂಟ್​; ‘ಧೂಮ್ 4’ ಎಂದ ನೆಟ್ಟಿಗರು

Pre-Wedding Shoot : ಸ್ಟಂಟ್​ ಮಾಡಿ ಪ್ರೀ ವೆಡ್ಡಿಂಗ್​ ಶೂಟ್​ ಮಾಡಿಸಿಕೊಂಡ ಈ ಜೋಡಿಯ ಬಗ್ಗೆ ನೆಟ್ಟಿಗರು ಬಹಳ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ ಎನ್ನುವುದು ನಮಗೆ ಮುಖ್ಯ.

ಇದು ಶೂಟಿಂಗ್​ ಅಲ್ಲ, ಪ್ರೀ ವೆಡ್ಡಿಂಗ್​ ಶೂಟ್​; ‘ಧೂಮ್ 4’ ಎಂದ ನೆಟ್ಟಿಗರು
Desi Bride & Groom Fly Bike in Air for Pre Wedding Shoot
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 28, 2022 | 11:31 AM

Viral Video : ಪ್ರೀ ವೆಡ್ಡಿಂಗ್ ಶೂಟ್​ ಎಂಬ ಕಾನ್ಸೆಪ್ಟ್​ ಇತ್ತೀಚಿನ ವರ್ಷಗಳಲ್ಲಿ ಬಹಳೇ ಚಾಲ್ತಿಯಲ್ಲಿದೆ. ಅವರವರ ಮನೋಭಾವಕ್ಕೆ ತಕ್ಕಂತೆ ಪರಿಕಲ್ಪನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರಿಗಿಂತ ಭಿನ್ನವಾಗಿರಬೇಕು ಎನ್ನುವ ಆಸೆ ಸರ್ವೇ ಸಾಮಾನ್ಯ. ಈವತ್ತು ಆನ್​ಲೈನ್​ನಲ್ಲಿ ಪ್ರೀ ವೆಡ್ಡಿಂಗ್ ಶೂಟ್​ ಎಂದು ಸರ್ಚ್​ ಕೊಟ್ಟರೆ ಮಿಲಿಯಗಟ್ಟಲೆ ವಿಡಿಯೋಗಳು ಲಭ್ಯ. ಆದರೂ ಇವೆಲ್ಲವುಗಳಿಗಿಂತ ಭಿನ್ನವಾಗಿರಬೇಕು ನಮ್ಮ ಪ್ರೀ ವೆಡ್ಡಿಂಗ್​ ಶೂಟ್​ ಎಂದು ಹುಡುಕಾಟಕ್ಕೆ ಬೀಳುವವರೇ ಹೆಚ್ಚು. ಈಗಿಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಇದು ಯಾವುದೋ ಸಿನೆಮಾದ ಶೂಟಿಂಗ್​ ಅಲ್ಲ. ಪ್ರೀ ವೆಡ್ಡಿಂಗ್​ ಶೂಟ್​. ಇಲ್ಲಿರುವವರು ನಿಜವಾದ ಭಾವೀ ವಧುವರರು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಹೇಗಿದೆ ದೇಸಿ ಜೋಡಿಯ ಬೈಕ್​ ಸ್ಟಂಟ್​! ಕ್ರೇನ್ ಸಹಾಯದಿಂದ ಬೈಕ್​ ಅನ್ನು ಜೀಪ್​ ಮೇಲೆ ಹಾರಿಸಲಾಗಿದೆ. ನೆಟ್ಟಿಗರು ನಾನಾರೀತಿಯಿಂದ ಪ್ರತಿಕ್ರಿಯಿಸಿದ್ಧಾರೆ. ಇತ್ತೀಚೆಗೆ ಈ ಪ್ರೀ ವೆಡ್ಡಿಂಗ್ ಶೂಟ್​ಗಳು ಯಾವ ಬಾಲಿವುಡ್​ನ ಮದುವೆಗಳಿಗೂ ಕಡಿಮೆ ಇಲ್ಲವೆಂಬಂತೆ ನಡೆಯುತ್ತಿವೆ ಎಂದು ನೆಟ್ಟಿಗರು ಹೇಳಿದ್ದಾರೆ. ಉಡುಗೆ, ತೊಡುಗೆ, ಅಲಂಕಾರ, ಆಭರಣ, ಶೂಟಿಂಗ್ ಸೆಟ್ಟಿಂಗ್ಸ್ ಇತ್ಯಾದಿ. ಮದುವೆ ಎನ್ನುವುದು ಖಾಸಗಿ ಅಭಿರುಚಿಯಿಂದ ಕೂಡಿರಬೇಕು ಆದರೆ ನಾವು ಸಿನೆಮಾ ಪ್ರಭಾವದಿಂದ ಸಾರ್ವಜನಿಕ ಪ್ರದರ್ಶನಕ್ಕೆ ತೆರೆದಿಡುತ್ತಿದ್ದೇವೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಮದುವೆ, ಅವರ ಪರಿಕಲ್ಪನೆ, ಸಾಧಕಬಾಧಕಗಳೆಲ್ಲ ಅವರಿಗೇ ಸಂಬಂಧಿಸಿದ್ದು. ನಾವು ಪ್ರತಿಕ್ರಿಯಿಸಿ ಮಾಡುವುದೇನಿದೆ? ಇಷ್ಟವಿದ್ದರೆ ನೋಡಿ, ಹೊಟ್ಟೆಕಿಚ್ಚಿನಿಂದ ಏನೇನೋ ಹೇಳಬೇಡಿ. ಮದುವೆ ಎನ್ನುವುದು ಮಧುರ ನೆನಪು. ಒಂದೇ ಸಲ ಘಟಿಸುವುದು ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿಮಗೇನು ಅನ್ನಿಸುತ್ತದೆ ಈ ಥರದ ಪ್ರೀ ವೆಡ್ಡಿಂಗ್​ ಸಾಹಸಮಯ ಪರಿಕಲ್ಪನೆಗಳನ್ನು ನೋಡಿದಾಗ?

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 11:31 am, Fri, 28 October 22