8 ಕೆ.ಜಿ. ತೂಗುವ ಈ ಸಮೋಸಾವನ್ನು ಒಬ್ಬರೇ, ಒಂದೇ ಏಟಿಗೆ ತಿಂದರೆ ರೂ. 51,000 ಬಹುಮಾನ!

Big Samosa : ಗೆದ್ದ ಸ್ಪರ್ಧಿಯ ಆಸ್ಪತ್ರೆಯ ಖರ್ಚನ್ನು ಯಾರು ಭರಿಸುತ್ತಾರೆ, ಆಲೂಗಡ್ಡೆ ಮಹಾತ್ಮೆಯನ್ನು ಮನೆಮಂದಿಯೆಲ್ಲ ಉಚಿತವಾಗಿ ಬೇರೆ ಅನುಭವಿಸಬೇಕಲ್ಲ ಎಂದು ನೆಟ್ಟಿಗರು ತೀರಾ ಚಿಂತೆಗೊಳಗಾಗಿದ್ದಾರೆ.

8 ಕೆ.ಜಿ. ತೂಗುವ ಈ ಸಮೋಸಾವನ್ನು ಒಬ್ಬರೇ, ಒಂದೇ ಏಟಿಗೆ ತಿಂದರೆ ರೂ. 51,000 ಬಹುಮಾನ!
This Meerut sweet shops gigantic samosa has impressed Harsh Goenka
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 28, 2022 | 1:33 PM

Viral Video : ಸಮೋಸಾ! ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆಯಲ್ಲ? ಇನ್ನು ಕಣ್ಣೆದುರಿಗಿದ್ದರಂತೂ ಹೇಗೆ ಸುಮ್ಮನಿರುವುದು? ಮಿನಿ ಸಮೋಸಾ ಆದರೆ ಒಂದೇ ಬಾರಿಗೆ ಗುಳುಂ. ಮಾಮೂಲಿ ಸಮೋಸಾ ಆದರೆ ಏಳೆಂಟು ತುತ್ತು. ಆದರೆ ಇಲ್ಲಿರುವ ಈ ಬಡಾ ಸಮೋಸಾ! ಎಲ್ಲಿಂದ ಎತ್ತಕಡೆಯಿಂದ ಯಾವ ತುದಿಯಿಂದ ಯಾವ ಅಂಗುಲದಿಂದ ತಿನ್ನುತ್ತೀರಿ? ಅದೂ ಒಬ್ಬರೇ ಅಂತೂ ತಿನ್ನಲು ಸಾಧ್ಯವೇ ಇಲ್ಲ. ಆದರೆ ಇದನ್ನು ಒಬ್ಬರೇ ತಿನ್ನಬೇಕು ಎಂಬ ಶರತ್ತು ಬೇರೆ ವಿಧಿಸಿದೆ ಇದನ್ನು ತಯಾರಿಸಿದ ಮೀರತ್​ನ ಸಿಹಿಯಂಗಡಿ. ಉದ್ಯಮಿ ಹರ್ಷ ಗೋಯೆಂಕಾ, ಟ್ವೀಟ್ ಮಾಡುತ್ತಿದ್ದಂತೆ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಬರೋಬ್ಬರಿ 8 ಕೆ.ಜಿ ತೂಗುವ ಈ ಸಮೋಸಾ ಖಂಡಿತ ಒಬ್ಬರೇ ತಿನ್ನಲು ಸಾಧ್ಯವಿಲ್ಲ ಅಲ್ಲವಾ? ಮೀರತ್​ನ ಕೌಶಲ್ ಸ್ವೀಟ್ಸ್​ ಎಂಬ ಅಂಗಡಿಯಲ್ಲಿ ಈ ಸಮೋಸಾ ತಯಾರಾಗಿದೆ. ಇದನ್ನು ಇನ್​ಸ್ಟಾಗ್ರಾಂನಲ್ಲಿ ಮೊದಲಿಗೆ ಹಂಚಿಕೊಂಡಿದ್ದು ಫುಡ್​ ಬ್ಲಾಗರ್ ಚಾಹತ್ ಆನಂದ. ಇನ್ನೇನು ಈ ಸಮೋಸಾ ನೋಡಿದವರ ಸಂಖ್ಯೆ 5 ಲಕ್ಷಕ್ಕೆ ಏರುತ್ತದೆ.

ನೆಟ್ಟಿಗರು ಸಮೋಸಾ ತಿಂದರೆ ಆರೋಗ್ಯ ಏರುಪೇರಾಗುವುದು ಖಚಿತ ಎನ್ನುತ್ತಿದ್ದಾರೆ. ಹಾಗೆಂದು ಜೀವನಪೂರ್ತಿ ನೀವು ಸಮೋಸಾ ತಿಂದೇ ಇಲ್ಲವೇ? ಎಂದು ಇನ್ನೊಬ್ಬರು ಕೇಳಿದ್ದಾರೆ. ಆದರೆ, ಕೌಶಲ್ ಸ್ವೀಟ್ಸ್ ಈ ಸಮೋಸಾವನ್ನು ಪ್ರದರ್ಶನಕ್ಕೆ ಮಾಡಿದ್ದಲ್ಲ. ಜುಲೈನಲ್ಲಿ ಸ್ಪರ್ಧೆಗಾಗಿ ಮಾಡಿತ್ತು. 30 ನಿಮಿಷದೊಳಗೆ ಒಂದೇ ಏಟಿಗೆ ಒಬ್ಬರೇ ಈ ಸಮೋಸಾ ತಿಂದರೆ ರೂ. 51,000 ನಗದು ಬಹುಮಾನ ಕೊಡಲಾಗುವುದೆಂದು ಘೋಷಿಸಿತ್ತು.

ಹಳೆಯ ವಿಡಿಯೋ ಈ ದೀಪಾವಳಿ ಸಮಯದಲ್ಲಿ ವೈರಲ್ ಆಗಿದೆ.

ನೀವು ಪ್ರಯತ್ನಿಸಬೇಕು ಎಂದುಕೊಂಡಿದ್ದಿರಾ ಹೇಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:29 pm, Fri, 28 October 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ