ಬಿಹಾರದ ವ್ಯಕ್ತಿಯ ಥೈರಾಯ್ಡ್ ಗ್ರಂಥಿಯಿಂದ ತೆಂಗಿನಕಾಯಿ ಗಾತ್ರದ ಗಡ್ಡೆ ತೆಗೆದ ದೆಹಲಿ ವೈದ್ಯರು
Tumor Surgery : ಶಸ್ತ್ರಚಿಕಿತ್ಸೆಗೆ ಒಳಗಾಗಿರುವ 72 ವರ್ಷದ ಈ ವ್ಯಕ್ತಿ ಬಿಹಾರದ ಬೇಗುಸರಾಯ್ ಜಿಲ್ಲೆಯವರು. ಆರು ತಿಂಗಳಿನಿಂದ ಅನ್ನಾಹಾರ ನುಂಗಲು ಮತ್ತು ಉಸಿರಾಡಲು ಸಮಸ್ಯೆಯಾದಾಗ ವೈದ್ಯರನ್ನು ಸಂಪರ್ಕಿಸಿದ್ದರು.
Trending : ವ್ಯಕ್ತಿಯೊಬ್ಬರು ಕಳೆದ ಆರು ತಿಂಗಳಿನಿಂದ ಉಸಿರಾಟ ಮತ್ತು ನುಂಗುವ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ವೈದ್ಯರನ್ನು ಸಂಪರ್ಕಿಸಿದಾಗ ಥೈರಾಯ್ಡ್ ಗ್ರಂಥಿಯಲ್ಲಿ ತೆಂಗಿನಕಾಯಿ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ತದನಂತರ ದೆಹಲಿಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಇದೀಗ ಅದನ್ನು ಹೊರತೆಗೆದಿದ್ದಾರೆ. ಆದರೆ ವ್ಯಕ್ತಿಯ ಧ್ವನಿಯನ್ನು ಕಾಪಾಡುವುದು ಸವಾಲಿನದಾಗಿತ್ತು ಎಂದು ವೈದ್ಯರು ಹೇಳಿದ್ಧಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿರುವ 72 ವರ್ಷದ ಈ ವ್ಯಕ್ತಿ ಬಿಹಾರದ ಬೇಗುಸರಾಯ್ ಜಿಲ್ಲೆಯವರು. ಆರು ತಿಂಗಳಿನಿಂದ ಅನ್ನಾಹಾರ ನುಂಗಲು ಮತ್ತು ಉಸಿರಾಡಲು ಸಮಸ್ಯೆಯಾದಾಗ ಕಳೆದ ತಿಂಗಳು ಗಂಗಾರಾಮ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ಡಾ. ಸಂಗೀತ್ ಅಗರ್ವಾಲ್, ‘ಇಷ್ಟು ವರ್ಷದ ನನ್ನ ವೃತ್ತಿಜೀವನದಲ್ಲಿ ಈತನಕ 250ಕ್ಕೂ ಹೆಚ್ಚು ಜನರಿಗೆ ಥೈರಾಯ್ಡ್ ಗಡ್ಡೆಯ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಈ ವ್ಯಕ್ತಿಯ ಗಡ್ಡೆ ಹೆಚ್ಚು ತೂಕ ಮತ್ತು ಗಾತ್ರವನ್ನು ಹೊಂದಿತ್ತು. ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ಚಿಟ್ಟೆ ಆಕಾರದಲ್ಲಿದ್ದು, 10-15 ಗ್ರಾಂ ತೂಕ ಮತ್ತು 3-4 ಸೆಂ.ಮೀ ಗಾತ್ರವನ್ನು ಹೊಂದಿರುತ್ತದೆ. ಆದರೆ ಈ ವ್ಯಕ್ತಿಯಲ್ಲಿ ಬೆಳೆದ ಗಟ್ಟೆಯು 18-20 ಸೆಂ.ಮೀ ಗಾತ್ರವುಳ್ಳದ್ದಾಗಿತ್ತು ಮತ್ತು ತೆಂಗಿನಕಾಯಿಗಿಂತ ದೊಡ್ಡದಾಗಿತ್ತು. ರೋಗಿಯ ಧ್ವನಿಪೆಟ್ಟಿಗೆಗೆ ಧಕ್ಕೆಯಾಗದಂತೆ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವುದು ಸವಾಲಿನಿಂದ ಕೂಡಿತ್ತು.’ ಎಂದಿದ್ದಾರೆ.
‘ಈ ಪ್ರಮಾಣದಲ್ಲಿ ಗ್ರಂಥಿಗಳು ಬೆಳೆದಾಗ, ಪ್ಯಾರಾಥೈರಾಯ್ಡ್ ಗ್ರಂಥಿಗಳನ್ನು ಕಾಪಾಡುವುದು ಕಷ್ಟದ ಕೆಲಸ. ಆದರೆ ನಾವು ಇದೆಲ್ಲವೂ ಸುಸೂತ್ರವಾಗಿ ನಿರ್ವಹಿಸಿದ್ದೇವೆ. ಒಟ್ಟು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದಿದ್ದಾರೆ ವೈದ್ಯರು.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿ್ಕ್ ಮಾಡಿ
Published On - 3:35 pm, Fri, 28 October 22