AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಟ್​ಪಾತೇ ಮೇಜು, ಬೀದಿದೀಪವೇ ಸ್ಟಡಿಲ್ಯಾಂಪು​; ಬಡಬಾಲೆಯ ಶ್ರದ್ಧೆಗೆ ಕರಗುತ್ತಿರುವ ನೆಟ್ಟಿಗರು

Studying Under Street Light : ಯಾರೋ ಕಾರಿನಲ್ಲಿ ಕುಳಿತು ಹೋಗುತ್ತಿರುವಾಗ ಮಾಡಿದ ವಿಡಿಯೋ ತುಣುಕಿದು. ನೆಟ್ಟಿಗರು ಇದನ್ನು ನೋಡಿ ಭಾವುಕರಾಗುತ್ತಿದ್ದಾರೆ. ಇಂಥ ಮಕ್ಕಳೇ ನಾಳೆ ದೇಶದ ಕೀರ್ತಿ ಪತಾಕೆ ಹಾರಿಸುವುದು ಎನ್ನುತ್ತಿದ್ದಾರೆ.

ಫುಟ್​ಪಾತೇ ಮೇಜು, ಬೀದಿದೀಪವೇ ಸ್ಟಡಿಲ್ಯಾಂಪು​; ಬಡಬಾಲೆಯ ಶ್ರದ್ಧೆಗೆ ಕರಗುತ್ತಿರುವ ನೆಟ್ಟಿಗರು
Girl Spotted Studying Under Traffic Light
TV9 Web
| Edited By: ಶ್ರೀದೇವಿ ಕಳಸದ|

Updated on:Oct 27, 2022 | 5:25 PM

Share

Viral Video : ಇಂದು ಏನೇ ಸಾಧನೆ ಮಾಡುವಲ್ಲಿ ಶಿಕ್ಷಣದ ಪಾತ್ರ ಅತೀ ಮಹತ್ವದ್ದು. ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಯಾರೂ ಏನೂ ಸಾಧಿಸಬಹುದು. ಸಾಕಷ್ಟು ಉತ್ತಮ ಅವಕಾಶಗಳನ್ನು ಪಡೆಯಬಹುದು. ಆದರೆ ಸಮಾನ ಶಿಕ್ಷಣ ಎನ್ನುವುದು ಇನ್ನೂ ಕನಸಾಗಿಯೇ ಇದೆ. ನಮ್ಮ ಭಾರತದಂಥ ದೇಶಗಳಲ್ಲಿ ಇದೆಲ್ಲ ಯಾವಾಗ ನನಸಾಗುವುದೋ? ಆದರೂ ಎಲ್ಲ ಸಮಸ್ಯೆಗಳ ಮಧ್ಯೆ ಕೆಲವರು ಕಷ್ಟಪಟ್ಟು ಶಿಕ್ಷಣವನ್ನು ಪೂರೈಸಲು ಮನಸ್ಸು ಮಾಡುತ್ತಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. ಶಾಲಾಬಾಲಕಿಯೊಬ್ಬಳು ಫುಟ್​ಪಾತ್​ ಮೇಲೆ ಕುಳಿತು, ಬೀದಿದೀಪದ ಕೆಳಗೆ ಅಭ್ಯಾಸ ಮಾಡುತ್ತಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವಳ ಶ್ರದ್ಧೆಯನ್ನು ಪ್ರಶಂಸಿಸುತ್ತಿದ್ದಾರೆ.

Stutes Zone 987 ಎಂಬ ಇನ್‌ಸ್ಟಾಗ್ರಾಮ್ ಖಾತೆದಾರರು ಈ ವಿಡಿಯೋ ಅನ್ನು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಚಲಿಸುತ್ತಿರುವಾಗ ಈ ವಿಡಿಯೋ ಚಿತ್ರೀಕರಿಸಿದಂತಿದೆ. ಶಾಲೆಯ ಸಮವಸ್ತ್ರ ಧರಿಸಿದ ಈ ಹುಡುಗಿ ಫುಟ್​ಪಾತ್​ ಮೇಲೆ ಕುಳಿತು ನೋಟ್​ಬುಕ್ಕಿನಲ್ಲಿ ಹೋಮ್​ವರ್ಕ್​ ಮಾಡುತ್ತಿದ್ದಾಳೆ. ಅವಳ ಎದುರು ನಿರಂತರವಾಗಿ ವಾಹನಗಳು ಓಡಾಡುತ್ತಿದ್ದರೂ ಈಕೆ ಮಾತ್ರ ಅಭ್ಯಾಸದಲ್ಲಿ ತಲ್ಲೀನಳಾಗಿದ್ದಾಳೆ.

‘ಇಂದಿನ ಅತ್ಯುತ್ತಮ ವಿಡಿಯೋ ಇದು. ಯಾರ ಬಳಿ ಏನಿಲ್ಲವೋ ಅದನ್ನು ಪಡೆದುಕೊಳ್ಳುವತ್ತ ಅವರು ಶ್ರಮ ಹಾಕಿಯೇ ಹಾಕುತ್ತಾರೆ’ ಎಂದು ನೆಟ್ಟಿಗರೊಬ್ಬರು ಕೊಂಡಾಡಿದ್ದಾರೆ. ಹೀಗೆ ನೀನು ಕಷ್ಟಪಟ್ಟು ಓದಿ ನಾಳೆಯೊಂದು ದಿನ ನಮ್ಮ ದೇಶವನ್ನು ಬೆಳಗುವಂತೆ ಮಾಡುತ್ತೀ ಮಗಳೇ, ನಿನ್ನ ಬಗ್ಗೆ ಹೆಮ್ಮೆ ಇದೆ ನಮಗೆಲ್ಲ ಎಂದಿದ್ದಾರೆ ಇನ್ನೂ ಒಬ್ಬರು.

ತಮ್ಮ ಮಕ್ಕಳು ಓದಲಿ ಎಂದು ಅನೇಕ ಸೌಲಭ್ಯಗಳನ್ನು ಪೋಷಕರು ಒದಗಿಸುತ್ತಾರೆ. ಆದರೆ ಇಲ್ಲಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:24 pm, Thu, 27 October 22

Follow Us
TV9 Web
TV9 Web

TV9 Kannada

Read More
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ