Viral Video: ‘ನಾವು ಕಲಾವಿದರು ನಾವು ಮಾಡಿದ್ದೆಲ್ಲ ‘ಕಲೆ’ಯೇ!

Cat : ‘ಮೊದಲು ಕಲಾಕೃತಿ ತೋರಿಸಿ, ನಂತರ ಕಲಾವಿದರನ್ನು’ ಎಂಬ ಮಾಂತ್ರಿಕ ಧ್ವನಿಯೊಂದಿಗೆ ಸೆಳೆಯುವ ಈ ವಿಡಿಯೋ ಇದೆಯಲ್ಲ, ಇದರ ‘ಬೆಲೆ’ ಅಂತಃಕರಣವುಳ್ಳ ಯಾರಿಗೂ ಅರ್ಥವಾಗುವಂಥದ್ದು.

Viral Video: ‘ನಾವು ಕಲಾವಿದರು ನಾವು ಮಾಡಿದ್ದೆಲ್ಲ ‘ಕಲೆ’ಯೇ!
ಖ್ಯಾತ ಕ್ಯಾಟ್​ ಕಲಾವಿದರು ಕಲಾಕೃತಿಯೊಂದಿಗೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 22, 2022 | 4:37 PM

Cat : ಪ್ರೀತಿ ಎಂದರೆ ಹೀಗೆ. ಅದು ಯಾವಾಗಲೂ ಸಪಾಟಾಗಿರುವುದಿಲ್ಲ. ನಿಮ್ಮನ್ನು ತೇಲಿಸುತ್ತಲೇ ಇನ್ನೊಂದು ಕಡೆ ‘ಗಕ್ಕನೆ’ ಗಂಟಲಲ್ಲಿ ಹಿಡಿದಿಟ್ಟುಕೊಂಡುಬಿಡುತ್ತದೆ. ಈಗ ನೀವು ಮನೆಯಲ್ಲಿ ಬೆಕ್ಕೋ ನಾಯಿಯನ್ನೋ ಸಾಕಿದ್ದರೆ ಈ ‘ಗಕ್ಕನೆ’ ಎನ್ನುವ ಪದದ ಅರ್ಥ ಆ್ಯಕ್ಷನ್​ ಸಮೇತ ಅನುಭವಕ್ಕೆ ಬಂದಿರುತ್ತದೆ. ಇನ್ನು ಸಾಕದೆ ಇರುವವರಿಗೆ? ಇಲ್ಲೊಬ್ಬ ಮಹಾನ್ ಕಲಾವಿದರ ಈ ಕಲಾಕೃತಿ ನೋಡುವ ಮೂಲಕ ಸಾಕುವ ಸೌಭಾಗ್ಯವನ್ನು ಕಲ್ಪಿಸಿಕೊಳ್ಳಿ. ಪದರಪದರಗಳಲ್ಲಿ ಒಡಮೂಡಿರುವ ಇವರ ಸಂವೇದನೆಯನ್ನು ಯಾವೆಲ್ಲ ಕೋನದಿಂದೆಲ್ಲ ಅರಗಿಸಿಕೊಳ್ಳುತ್ತೀರೋ ಅದು ಪೂರ್ತಿ ನಿಮ್ಮ ನಿಮ್ಮ ಹೃದಯದ ಆಳಕ್ಕೆ ಬಿಟ್ಟಿದ್ದು. ಯಾಕೆಂದರೆ ಇವರ ಕಲೆಗಾರಿಕೆಯ ಆಳ ಹಾಗಿದೆ! ನೋಡಿ ಕಣ್ತುಂಬಿಕೊಳ್ಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Leshan Zhang (@maxseatt)

ಮಾಡುವುದನ್ನೆಲ್ಲ ಮಾಡಿದ ನಂತರ ಈ ಕಲಾವಿದರು ‘ನಾನೇನೂ ಮಾಡಿಲ್ಲಪ್ಪ, ನಂದೇನೂ ತಪ್ಪಿಲ್ಲಪ್ಪ’ ಎನ್ನುವಂಥ ಆ ನಿಚ್ಚಳಗಣ್ಣಿನಿಂದ ತೂರಿದ ನೋಟ ಇದೆಯಲ್ಲ! ಯಾವತ್ತಾದರೂ ಅದು ಕಣ್ಣಿಂದ ಸರಿದೀತೇ? ಅಬ್ಬಾ ಮುದ್ದಿನಿಂದ ಜೀವ ಹೋಗುವಂಥದ್ದು. ಇದು ಈ ಕಲಾವಿದರ ಸಾರ್ಥಕತೆ! ಇವರ ಈ ಸಾರ್ಥಕ ಕಲೆಯನ್ನು ಮೆಚ್ಚಿದವರ ಸಂಖ್ಯೆ ಇನ್ನೇನು 8 ಲಕ್ಷ ತಲುಪಲಿದೆ.

ಇದನ್ನು ಯಾವುದಾದರೂ ಆರ್ಟ್​ ಗ್ಯಾಲರಿಯಲ್ಲಿಟ್ಟರೆ ಕಲಾತಜ್ಞರು ಮತ್ತು ಪ್ರಾಣಿಪ್ರಿಯರು ಅದೆಷ್ಟೆಷ್ಟು ಥಿಯರಿಗಳಿಂದ ಇದನ್ನು ವಿಮರ್ಶಿಸುತ್ತಿದ್ದರೋ ಆ ಮಾರ್ಜಾಲದೇವರೇ ಬಲ್ಲ. ಮ್ಯಾಕ್​ಸೀಟ್​ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಕಳೆದ ತಿಂಗಳು ಹಂಚಿಕೆಯಾಗಿದೆ. ಹೇಗಿದೆ ಕ್ಯಾಟ್ಆರ್ಟ್​, ಗೆಬರಾರ್ಟ್​, ಗೀರಾರ್ಟ್​!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:29 pm, Mon, 22 August 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್