Viral Video: ಧೋನಿ, ಪಾಂಡ್ಯ, ಇಶಾನ್ ಕಿಶನ್ ಭರ್ಜರಿ ಡ್ಯಾನ್ಸ್ ಪಾರ್ಟಿ: ಇಲ್ಲಿದೆ ವಿಡಿಯೋ
ಸ್ನೇಹಿತರ ಪಾರ್ಟಿಯಲ್ಲಿ ಧೋನಿ, ಹಾರ್ದಿಕ್, ಇಶಾನ್, ಕೃನಾಲ್ ಪಾಂಡ್ಯ ಜೊತೆಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಟೀಮ್ ಇಂಡಿಯಾದ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಈಗ ಎಲ್ಲಿದ್ದಾರೆ ಎಂದು ಕೇಳಿದ್ರೆ ಸದ್ಯದ ಉತ್ತರ ದುಬೈ. ಧೋನಿ ಅ್ಯಂಡ್ ಕಂಪೆನಿ ಮಸ್ತ್ ಮಜಾ ಪಾರ್ಟಿಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶೇಷ ಎಂದರೆ ಈ ಪಾರ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಕೃನಾಲ್ ಪಾಂಡ್ಯ ಸೇರಿದಂತೆ ಕೆಲ ಆಪ್ತ ಸ್ನೇಹಿತರು ಕೂಡ ಜೊತೆಯಾಗಿದ್ದಾರೆ.
Mahi & hardik seen dancing at a party with their close friends, last night in dubai ??#MSDhoni pic.twitter.com/PB5pGPSZsJ
— Chakri Dhoni (@ChakriDhoni17) November 27, 2022
ಸ್ನೇಹಿತರ ಪಾರ್ಟಿಯಲ್ಲಿ ಧೋನಿ, ಹಾರ್ದಿಕ್, ಇಶಾನ್, ಕೃನಾಲ್ ಪಾಂಡ್ಯ ಜೊತೆಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಶೇಷ ಎಂದರೆ ಈ ಪಾರ್ಟಿಯಲ್ಲಿ ಬಾಲಿವುಡ್ನ ಖ್ಯಾತ ಗಾಯಕ ಬಾದ್ಷಾ ಕೂಡ ಧ್ವನಿಗೂಡಿಸಿದ್ದರು.
Ms Dhoni with Hardik Pandya are enjoying birthday party in Dubai ft. Badshah ??❤️#MSDhoni #HardikPandya #Badshah pic.twitter.com/ak8oB8j5Xr
— MS Dhoni 7781 #TataIPL #ChennaiSuperKings (@msdhoni_7781) November 27, 2022
ಹಿಂದಿ ಗೀತೆಗಳಿಗೆ ಕಿರಿಯ ಆಟಗಾರರೊಂದಿಗೆ ಹೆಜ್ಜೆ ಹಾಕಿದ ಧೋನಿ ಆ ಬಳಿಕ ಬಾದ್ಷಾ ಹಾಡಿದ ಕಾಲಾ ಚಾಷ್ಮ ಗೀತೆಗೂ ಸಖತ್ ಸ್ಟೆಪ್ಸ್ ಹಾಕಿದರು. ಇದೀಗ ಈ ಆಕರ್ಷಕ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಪಿಎಲ್ 2023 ಗೆ ಧೋನಿ ಪ್ಲ್ಯಾನ್:
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ ಈಗ 2023 ರ ಐಪಿಎಲ್ ತಯಾರಿಯಲ್ಲಿ ನಿರತರಾಗಿದ್ದಾರೆ. ಐಪಿಎಲ್ ಸೀಸನ್ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ. ಹೀಗಾಗಿ ಕೊನೆಯ ಬಾರಿಗೆ ಪ್ರಶಸ್ತಿಯೊಂದಿಗೆ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ.